ನವದೆಹಲಿ: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರನ್ನು 75ನೇ ಕಾನ್ ಚಲನಚಿತ್ರೋತ್ಸವಕ್ಕೆ ತೀರ್ಪುಗಾರ ಸದಸ್ಯರಾಗಿ ಘೋಷಿಸಲಾಗಿದೆ. ಈ ಚಲನಚಿತ್ರೋತ್ಸವವು ಜಾಗತಿಕವಾಗಿ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಟಿತ ಚಲನಚಿತ್ರೋತ್ಸವಗಳಲ್ಲಿ ಒಂದು. ದೀಪಿಕಾ ಈ ಹಿಂದೆ ಈ ಗೌರವ ಪಡೆದ ಭಾರತೀಯ ಖ್ಯಾತನಾಮರ ಪಟ್ಟಿ ಸೇರಲಿದ್ದಾರೆ. ವರ್ಷದ ಕೆಲವು ಅತ್ಯುತ್ತಮ ಚಲನಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನವಾಗಲಿವೆ.
ಇದನ್ನೂ ಓದಿ: 'ಭಾರತಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ': ಅಜಯ್ ದೇವಗನ್ಗೆ ಸೋನು ಸೂದ್ ತಿರುಗೇಟು
ಭಾರತೀಯ ಚಲನಚಿತ್ರಗಳು ಮತ್ತು ಪ್ರತಿಭೆಗಳನ್ನು ಗುರುತಿಸುವಂತಹ ವೇದಿಕೆಗಳಲ್ಲಿ ಇದೂ ಸಹ ಒಂದು. ಇದಕ್ಕೂ ಮುನ್ನ ಹಲವು ಭಾರತೀಯ ಸಿನಿಮಾ ನಟ/ನಟಿಯರು ಕಾನ್ ಸಿನಿಮೋತ್ಸವದಲ್ಲಿ ತೀರ್ಪುಗಾರ ಸದಸ್ಯರಾಗಿ ಕಾಣಿಸಿಕೊಂಡ ಉದಾಹರಣೆಗಳಿವೆ.
ಇದನ್ನೂ ಓದಿ: ಬಾಲಿವುಡ್ ನಟ - ನಟಿಯರಿಗೆ ಅಸೂಯೆ ಮತ್ತು ಭಯವಿದೆ: ಕಿಚ್ಚನ ಪರ ಆರ್ಜಿವಿ ಟ್ವೀಟ್
- ಐಶ್ವರ್ಯಾ ರೈ ಬಚ್ಚನ್: 2002ರಲ್ಲಿ ಬಿಡುಗಡೆಯಾದ 'ದೇವದಾಸ್' ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಇವರು 2003ರಲ್ಲಿ ನಡೆದ ಕಾನ್ ಸಿನಿಮೋತ್ಸವದಲ್ಲಿ ತೀರ್ಪುಗಾರರಾಗಿದ್ದರು. ಈ ಮೂಲಕ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಮತ್ತು ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆ ಇವರದ್ದು.ಐಶ್ವರ್ಯಾ ರೈ ಬಚ್ಚನ್
- ಶರ್ಮಿಳಾ ಟ್ಯಾಗೋರ್: ಇವರು 2009ರಲ್ಲಿ ನಡೆದ ಕಾನ್ ವಾರ್ಷಿಕ ಚಲನಚಿತ್ರೋತ್ಸವದ ತೀರ್ಪುಗಾರ ಸದಸ್ಯರಲ್ಲೊಬ್ಬರು. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಕಂಡ ಅತ್ಯಂತ ಬೇಡಿಕೆಯ ಹಾಗೂ ಪರಿಣತ ನಟಿೂ ಹೌದುರು. ಸತ್ಯಜಿತ್ ರೇ ನಿರ್ದೇಶನದ, 1962ರಲ್ಲಿ ತೆರೆಕಂಡ ಇವರ ನಟನೆಯ 'ದೇವಿ' ಸಿನಿಮಾ ಕಾನ್ ವಾರ್ಷಿಕ ಚಲನಚಿತ್ರೋತ್ಸವಕ್ಕೆ ನಾಮನಿರ್ದೇಶನಗೊಂಡಿತ್ತು.ಶರ್ಮಿಳಾ ಟ್ಯಾಗೋರ್
- ವಿದ್ಯಾ ಬಾಲನ್: ಬಾಲಿವುಡ್ ಸಿನಿಮಾರಂಗದಲ್ಲಿ ಮಹಿಳಾ ಕೇಂದ್ರಿತ ಪಾತ್ರಗಳನ್ನು ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದವರು ವಿದ್ಯಾ ಬಾಲನ್. ಡರ್ಟಿ ಪಿಚ್ಚರ್ ಚಿತ್ರದಿಂದ ಹೆಚ್ಚು ಗಮನ ಸೆಳೆದರು. 2013ರಲ್ಲಿ ನಡೆದ 66ನೇ ಕಾನ್ ಚಲನಚಿತ್ರೋತ್ಸವದಲ್ಲಿ ಇವರು ಕೂಡ ತೀರ್ಪುಗಾರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ವಿದ್ಯಾ ಬಾಲನ್
- ಶೇಖರ್ ಕಪೂರ್: ಎಲಿಜಬೆತ್ ಎಂಬ ಕಾಲ್ಪನಿಕ ಕಥೆ ಹಾಗೂ ಇಂತಹ ಹಲವು ಚಲನಚಿತ್ರಗಳ ನಿರ್ದೇಶನದ ಮೂಲಕ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಸರುವಾಸಿಯಾದವರು ಭಾರತದ ಬಹುಮುಖ ಪ್ರತಿಭೆ ಶೇಖರ್ ಕಪೂರ್. 2010ರಲ್ಲಿ ನಡೆದ ಕಾನ್ ಉತ್ಸವದಲ್ಲಿ ಇವರು ತೀರ್ಪುಗಾರ ಸದಸ್ಯರಾಗಿ ಕಾಣಿಸಿಕೊಂಡಿದ್ದರು. 1994ರಲ್ಲಿ ತೆರೆ ಕಂಡ ಇವರ ನಿದೇಶನದ 'ಬ್ಯಾಂಡಿಟ್ ಕ್ವೀನ್'ಎಂಬ ಚಿತ್ರವನ್ನು ಅದೇ ಉತ್ಸವದಲ್ಲಿ ಪ್ರಸ್ತುತಪಡಿಸಲಾಯಿತು. ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪುರಸ್ಕಾರಗಳನ್ನು ಶೇಖರ್ ಕಪೂರ್ ತಮ್ಮದಾಗಿಸಿಕೊಂಡಿದ್ದಾರೆ.ಶೇಖರ್ ಕಪೂರ್
- ಮೀರಾ ನಾಯರ್: ನಿರ್ದೇಶನದ ಜೊತೆಗೆ ನಿರ್ಮಾಪಕಿಯಾಗಿಯೂ ಗಮನ ಸೆಳೆದಿರುವ ಮೀರಾ ನಾಯರ್ 1990ರಲ್ಲಿ ಕಾನ್ ಚಲನಚಿತ್ರೋತ್ಸವದ ತೀರ್ಪುಗಾರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1988ರಲ್ಲಿ ತೆರೆ ಕಂಡ 'ಸಲಾಮ್ ಬಾಂಬೆ'ಯನ್ನು ಉತ್ಸವದ ಆವೃತ್ತಿಯಲ್ಲಿ ಪ್ರಸ್ತುತಪಡಿಸಲಾಯಿತು. ಅಂದಿನ ಫಿಲ್ಮ್ ಫೆಸ್ಟಿವಲ್ನಲ್ಲಿ ಗೊಲ್ಡನ್ ಕ್ಯಾಮೆರಾ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದು ವಿಶೇಷ.ಮೀರಾ ನಾಯರ್