ETV Bharat / entertainment

ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು.. ಒಂದೇ ಒಂದು ಚಿತ್ರದಲ್ಲಿ ರಾಜ್​ಕುಮಾರ್​ಗೆ ಅಳಿಯನಾಗಿದ್ದ ಪುನೀತ್​! - ಪುನೀತ್ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ

ಆರು ತಿಂಗಳ ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು ತಮ್ಮ ಅಭಿನಯದ ಮೂಲಕ ಇತಿಹಾಸವನ್ನೇ ನಿರ್ಮಿಸಿದ್ದರು. ಇಂದು ಅವರ ಪ್ರಥಮ ಪುಣ್ಯತಿಥಿ ನಡೆಯುತ್ತಿದ್ದು, ಲಕ್ಷಾಂತರ ಅಭಿಮಾನಿಗಳು ಪುನೀತ್​ ಸಮಾಧಿ ಹತ್ತಿರ ತೆರಳಿ ನಮನ ಸಲ್ಲಿಸುತ್ತಿದ್ದಾರೆ.

Appu entered the film industry  Puneeth Rajkumar child acting movies  Puneeth Rajkumar death anniversary  Dr Puneeth Rajkumar news  ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಅಮರ  ಒಂದು ಚಿತ್ರದಲ್ಲಿ ರಾಜ್​ಕುಮಾರ್​ಗೆ ಅಳಿಯನಾಗಿದ್ದ ಪುನೀತ್​ ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು  ಅಪ್ಪು ತಮ್ಮ ಅಭಿನಯದ ಮೂಲಕ ಇತಿಹಾಸ  ಬಾಲನಟನಾಗಿ ತೆರೆಗೆ ಬಂದ ಕನ್ನಡದ ಪವರ್ ಸ್ಟಾರ್  ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ಅಭಿನಯ  ರಾಜ್​ಕುಮಾರ್ ಜೊತೆ ಪುನೀತ್​ ಅಭಿನಯ  1967ರಲ್ಲಿ ತೆರೆಗೆ ಬಂದ ಭಕ್ತ ಪ್ರಹ್ಲಾದ  ಪುನೀತ್ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ  ಪರಶುರಾಮ್ ಪುನೀತ್ ಬಾಲನಟನಾಗಿ ಅಭಿನಯಿಸಿದ ಕಡೆಯ ಚಿತ್ರ
ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಅಮರ
author img

By

Published : Oct 29, 2022, 1:32 PM IST

Updated : Oct 29, 2022, 2:29 PM IST

ಬೆಂಗಳೂರು: ಇಂದು ಡಾ. ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ. ಬಾಲನಟನಾಗಿ ತೆರೆಗೆ ಬಂದ ಕನ್ನಡದ ಪವರ್ ಸ್ಟಾರ್ ಕರುನಾಡಲ್ಲಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ಕನ್ನಡ ಚಿತ್ರದಲ್ಲಿ ಅಭಿನಯಿಸಿದ ಅಪ್ಪು ಕನ್ನಡನಾಡಿನ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾದ ನೆಲೆ ಕಂಡುಕೊಂಡಿದ್ದಾರೆ.

Appu entered the film industry  Puneeth Rajkumar child acting movies  Puneeth Rajkumar death anniversary  Dr Puneeth Rajkumar news  ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಅಮರ  ಒಂದು ಚಿತ್ರದಲ್ಲಿ ರಾಜ್​ಕುಮಾರ್​ಗೆ ಅಳಿಯನಾಗಿದ್ದ ಪುನೀತ್​ ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪು  ಅಪ್ಪು ತಮ್ಮ ಅಭಿನಯದ ಮೂಲಕ ಇತಿಹಾಸ  ಬಾಲನಟನಾಗಿ ತೆರೆಗೆ ಬಂದ ಕನ್ನಡದ ಪವರ್ ಸ್ಟಾರ್  ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ಅಭಿನಯ  ರಾಜ್​ಕುಮಾರ್ ಜೊತೆ ಪುನೀತ್​ ಅಭಿನಯ  1967ರಲ್ಲಿ ತೆರೆಗೆ ಬಂದ ಭಕ್ತ ಪ್ರಹ್ಲಾದ  ಪುನೀತ್ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ  ಪರಶುರಾಮ್ ಪುನೀತ್ ಬಾಲನಟನಾಗಿ ಅಭಿನಯಿಸಿದ ಕಡೆಯ ಚಿತ್ರ
ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಅಮರ

ವರನಟ ಡಾ.ರಾಜ್​ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ಅಭಿನಯಿಸಿದ್ದರು. ಅಭಿನಯ ಅಂದರೆ ಏನು ಎಂದು ತಿಳಿಯದ ಆರು ತಿಂಗಳ ಹಸುಗೂಸು ಚಿತ್ರರಂಗಕ್ಕೆ ಅರಿಯದೇ ಕಾಲಿಟ್ಟಿತ್ತು. ನಂತರವೂ ಅವರು ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕಿಂತ ಪಾತ್ರಗಳಿಗೆ ಜೀವತುಂಬಿದ್ದೇ ಹೆಚ್ಚು. ಬಾಲ ಕಲಾವಿದನಾಗಿ ಅವರು ಪರಿಚಿತರಾಗಿದ್ದು `ಮಾಸ್ಟರ್ ಲೋಹಿತ್' ಅನ್ನುವ ಹೆಸರಿನಲ್ಲಿ. ಒಟ್ಟು 10ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸಿ ಸೈ ಎನಿಸಿಕೊಂಡ ಪುನೀತ್ ರಾಜ್​ಕುಮಾರ್ ಬೆಟ್ಟದ ಹೂವು ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು.

1976ರಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅಪ್ಪು ತಂದೆ ವರನಟ ಡಾ.ರಾಜ್​ಕುಮಾರ್, ಆರತಿ, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ ಜತೆ ಅಭಿನಯಿಸಿದರು. ಚಿತ್ರವನ್ನು ವಿ.ಸೋಮಶೇಖರ್ ನಿರ್ದೇಶಿಸಿದ್ದರು. ಆರು ತಿಂಗಳ ಮಗುವಿದ್ದಾಗ ಪುನೀತ್​ ಅಭಿನಯಿಸಿದ ಚಿತ್ರ ಆಗಿನ ಸಮಯದಲ್ಲಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿತ್ತು.

ಸನಾದಿ ಅಪ್ಪಣ್ಣ ಚಿತ್ರ ವಿಜಯ್ ನಿರ್ದೇಶನದಲ್ಲಿ ಮೂಡಿಬಂತು. ಈ ಚಿತ್ರದಲ್ಲಿ ಸಹ ತಂದೆ ಡಾ. ರಾಜ್​ಕುಮಾರ್ ಜೊತೆ ಪುನೀತ್​ ಅಭಿನಯಿಸಿದ್ದರು. ಜಯಪ್ರದಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಹಾಡೊಂದರಲ್ಲಿ ನಟಿಸುವ ಪುನೀತ್ ರಾಜ್​ಕುಮಾರ್ ಡಾ.ರಾಜ್ ಪುತ್ರನಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಪ್ಪು ಅಭಿನಯಿಸಿದ್ದರು. ಈ ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಪದ್ಮಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಬಾಲನಟನಾಗಿ ಅಪ್ಪು ಮಿಂಚಿದ್ದರು.

1980ರಲ್ಲಿ ತೆರೆಗೆ ಬಂದ ವಸಂತ ಗೀತ ಚಿತ್ರದಲ್ಲಿ ಡಾ.ರಾಜ್​ಕುಮಾರ್, ಕೆಎಸ್ ಅಶ್ವಥ್, ಶ್ರೀನಿವಾಸ ಮೂರ್ತಿ ಅಭಿನಯಿಸಿದ್ದರು. ಈ ಚಿತ್ರ ದೊರೈ-ಭಗವಾನ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸಹ ಪುನೀತ್ ರಾಜಕುಮಾರ್ ಡಾ. ರಾಜ್ ಪುತ್ರನ ಪಾತ್ರದಲ್ಲಿ ನಟಿಸಿದ್ದರು. ಭೂಮಿಗೆ ಬಂದ ಭಗವಂತ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ನಿರ್ದೇಶಿಸಿದ್ದು, ಲೋಕೇಶ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕೃಷ್ಣನ ಪಾತ್ರದಲ್ಲಿ ಕಂಡಿದ್ದರು.

1971ರಲ್ಲಿ ತೆರೆಗೆ ಬಂದ ಭಾಗ್ಯವಂತ ಚಿತ್ರವನ್ನು ಬಿ.ಎಸ್ ರಂಗ ನಿರ್ದೇಶಿಸಿದ್ದರು. ಭಾಗ್ಯವಂತ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಜೊತೆ ಆರತಿ, ಜೈ ಜಗದೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಡಾ. ರಾಜಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಅಪ್ಪು ಅಭಿನಯಿಸಿದ ಇನ್ನೊಂದು ಪ್ರಮುಖ ಚಿತ್ರ ಹೊಸ ಬೆಳಕು. ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಸರಿತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಲೇಖಕಿ ವಾಣಿ ಅವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಪುನೀತ್ ಅವರು ಡಾ. ರಾಜ್ ಅಕ್ಕನ ಮಗ ಆಗಿ ನಟಿಸಿದ್ದರು.

1982ರಲ್ಲಿ ತೆರೆಗೆ ಬಂದ ಚಲಿಸುವ ಮೋಡಗಳು ಚಿತ್ರವನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜಕುಮಾರ್ ನಿರ್ಮಾಣದಲ್ಲಿ ಮೂಡಿಬಂತು. ಡಾ. ರಾಜಕುಮಾರ್ ಜೊತೆ ಸರಿತಾ ಮತ್ತು ಅಂಬಿಕಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕೆ ಅವರಿಗೆ ‘ಅತ್ಯುತ್ತಮ ಬಾಲನಟ’ ಪ್ರಶಸ್ತಿ ಸರ್ಕಾರದಿಂದ ಲಭಿಸಿತ್ತು. ವಿಶೇಷ ಅಂದರೆ `ಕಾಣದಂತೆ ಮಾಯವಾದನು' ಎಂಬ ಗೀತೆಯನ್ನು ಅವರು ಈ ಚಿತ್ರಕ್ಕಾಗಿ ಹಾಡಿದ್ದರು.

ಭಕ್ತ ಪ್ರಹ್ಲಾದ್​​ನಾಗಿದ್ದ ಅಪ್ಪು: 1967ರಲ್ಲಿ ತೆರೆಗೆ ಬಂದ ಭಕ್ತ ಪ್ರಹ್ಲಾದ ಇನ್ನೊಂದು ಪ್ರಮುಖ ಚಿತ್ರ. ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಡಾ. ರಾಜಕುಮಾರ್ ಹಿರಣ್ಯ ಕಶಿಪು ಪಾತ್ರ ನಿರ್ವಹಿಸಿದ್ದರು. ರಾಕ್ಷಸನ ಪಾತ್ರದಲ್ಲಿ ರಾಜ್ ನಟಿಸಿದ್ದರೆ, ಪುನೀತ್ ರಾಜಕುಮಾರ್ ಭಕ್ತ ಪ್ರಹ್ಲಾದನ ಪಾತ್ರ ನಿರ್ವಹಿಸಿದ್ದರು. ತನ್ನ ತಂದೆಯ ವಿರೋಧದ ನಡುವೆಯೇ ಶ್ರೀಹರಿಯನ್ನು ಅನಂತವಾಗಿ ಭಜಿಸುವ ಪ್ರಹ್ಲಾದನ ಪಾತ್ರದಲ್ಲಿ ಪುನೀತ್ ಅದ್ಭುತ ಅಭಿನಯ ನೀಡಿ ಜನಮನ ಗೆದ್ದಿದ್ದರು.

ಅತ್ಯುತ್ತಮ ಬಾಲ ನಟ ಪ್ರಶಸ್ತಿ ತಂದುಕೊಟ್ಟ ಚಿತ್ರ; 1983ರಲ್ಲಿ ತೆರೆಕಂಡ ಎರಡು ನಕ್ಷತ್ರಗಳು ಚಿತ್ರದಲ್ಲಿ ಪುನೀತ್ ಅಭಿನಯಿಸಿದರು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಪುನೀತ್ ರದ್ದು ದ್ವಿಪಾತ್ರವಾಗಿತ್ತು. ಎಂದಿನಂತೆ ತಂದೆ ಡಾ. ರಾಜಕುಮಾರ್ ಮತ್ತು ಅಂಬಿಕಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎಲ್ಲಕ್ಕಿಂತ ಪ್ರಮುಖ ಅಂದರೆ ಚಿತ್ರದಲ್ಲಿ ಇದ್ದದ್ದು ಐದು ಹಾಡುಗಳು. ಅದರಲ್ಲಿ ಮೂರು ಹಾಡನ್ನು ಪುನೀತ್ ಅವರೇ ಹಾಡಿದ್ದರು. ಜತೆಗೆ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು.

1984ರಲ್ಲಿ ಬಂದ ಯಾರಿವನು ಚಿತ್ರವನ್ನು ದೊರೈ-ಭಗವಾನ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ಪುನೀತ್, ಡಾ. ರಾಜಕುಮಾರ್, ರೂಪಾ ದೇವಿ ಮತ್ತು ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀನಾಥ್ ಖಳನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಪುನೀತ್ `ಸರೋಜಾದೇವಿ' ಪುತ್ರನಾಗಿ ಕಾಣಿಸಿಕೊಂಡಿದ್ದರು.

1985ರಲ್ಲಿ ತೆರೆಕಂಡ ಬೆಟ್ಟದ ಹೂ ಚಿತ್ರವನ್ನು ಎನ್ ಲಕ್ಷ್ಮಿನಾರಾಯಣ್ ನಿರ್ದೇಶಿಸಿದ್ದರು. ತಾಯಿ ಪಾರ್ವತಮ್ಮ ರಾಜಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ 'ಬೆಟ್ಟದ ಹೂವು' ಚಿತ್ರದಲ್ಲಿ ಪುನೀತ್ `ರಾಮು' ಎಂಬ ಶಾಲಾ ಬಾಲಕನ ಪಾತ್ರ ನಿರ್ವಹಿಸಿದ್ದರು. ಶಿರ್ಲೆ ಎಲ್ ಅರೋರಾರ `ವಾಟ್ ದೆನ್, ರಾಮನ್?' ಎಂಬ ಕಾದಂಬರಿ ಆಧಾರಿತ ಈ ಚಿತ್ರದ ಅಭಿನಯಕ್ಕೆ ಪುನೀತ್ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

1988ರಲ್ಲಿ ಶಿವ ಮೆಚ್ಚಿದ ಕಣ್ಣಪ್ಪ ತೆರೆಗೆ ಬಂತು. ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರು ಅಣ್ಣ ಡಾ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಚಿತ್ರದಲ್ಲಿ ಅಭಿನಯಿಸಿದರು. ಶಿವಣ್ಣನ ಬಾಲ್ಯದ ಪಾತ್ರದಲ್ಲಿ ಅಪ್ಪು ನಟಿಸಿದ್ದರು. ರಾಘವೇಂದ್ರ ರಾಜಕುಮಾರ್ ಮತ್ತು ಗೋವಿಂದರಾಜ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಡಾ. ರಾಜಕುಮಾರ್ ಶಿವನ ಪಾತ್ರದಲ್ಲಿ ನಟಿಸಿದ್ದರು.

1989ರಲ್ಲಿ ತೆರೆಗೆ ಬಂದ ಪರಶುರಾಮ್ ಪುನೀತ್ ಬಾಲನಟನಾಗಿ ಅಭಿನಯಿಸಿದ ಕಡೆಯ ಚಿತ್ರ. ಡಾ. ರಾಜಕುಮಾರ್, ಮಹಾಲಕ್ಷ್ಮಿ ಮತ್ತು ವಾಣಿ ವಿಶ್ವನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ವಿ ಸೋಮಶೇಖರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ `ಅಪ್ಪು' ಎಂಬ ಯುವಕನ ಪಾತ್ರದಲ್ಲಿ ನಟಿಸಿದ್ದರು.

ಓದಿ: ನಟನೆಗೂ ಸೈ ಗಾಯನಕ್ಕೂ ಜೈ ಅಂದಿದ್ದ ಪುನೀತ್: 'ಬಾನ ದಾರಿಯಲ್ಲಿ ಜಾರಿ ಹೋದ' ಅಪ್ಪು ಹಾಡಿದ ಬೆಸ್ಟ್ ಹಾಡುಗಳಿವು

Last Updated : Oct 29, 2022, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.