ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನಟ ಅಕ್ಷಯ್ ಕುಮಾರ್ ಅವರ ಕಾಮಿಡಿ ಚಿತ್ರ 'ಹೌಸ್‌ಫುಲ್' ನ ಐದನೇ ಭಾಗವನ್ನು ನಿರ್ಮಿಸಲಾಗುತ್ತಿದೆ. ಸಿನಿಮಾ ಘೋಷಣೆ ಜೊತೆಗೆ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಹೌಸ್‌ಫುಲ್ 5 ನಿರ್ಮಿಸುತ್ತಿದ್ದು, ತರುಣ್ ಮನ್ಸುಖಾನಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತರುಣ್ ಈ ಹಿಂದೆ ಡ್ರೈವ್, ದೋಸ್ತಾನಾ, ಕಭಿ ಅಲ್ವಿದಾ ನಾ ಕೆಹನಾ ಮತ್ತು ಮೈ ನೇಮ್ ಈಸ್ ಖಾನ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
-
Get ready for FIVE times the madness! 💥
— Akshay Kumar (@akshaykumar) June 30, 2023 " class="align-text-top noRightClick twitterSection" data="
Bringing to y'all #SajidNadiadwala’s #Housefull5
Directed by @Tarunmansukhani
See you in cinemas on Diwali 2024! @Riteishd @NGEMovies @WardaNadiadwala pic.twitter.com/CbzMy0PxOO
">Get ready for FIVE times the madness! 💥
— Akshay Kumar (@akshaykumar) June 30, 2023
Bringing to y'all #SajidNadiadwala’s #Housefull5
Directed by @Tarunmansukhani
See you in cinemas on Diwali 2024! @Riteishd @NGEMovies @WardaNadiadwala pic.twitter.com/CbzMy0PxOOGet ready for FIVE times the madness! 💥
— Akshay Kumar (@akshaykumar) June 30, 2023
Bringing to y'all #SajidNadiadwala’s #Housefull5
Directed by @Tarunmansukhani
See you in cinemas on Diwali 2024! @Riteishd @NGEMovies @WardaNadiadwala pic.twitter.com/CbzMy0PxOO
ಅಕ್ಷಯ್ ಕುಮಾರ್ ಅನೌನ್ಸ್ಮೆಂಟ್: ಸತತ ಸೋಲನ್ನನುಭವಿಸಿರುವ ಬಾಲಿವುಡ್ ಕಿಲಾಡಿಯ ಮುಂದಿನ ಸಿನಿಮಾ ಕುರಿತು ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ 'ಹೌಸ್‌ಫುಲ್'ನ ಮತ್ತೊಂದು ಭಾಗ ಮೂಡಿಬರಲಿದೆ ಎಂಬ ಖುಷಿ ಸುದ್ದಿ ಕೇಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಘೋಷಿಸಿದ್ದಾರೆ.
ಹೌಸ್‌ಫುಲ್ 5 ಸಿನಿಮಾ ಘೋಷಣೆಯಾದ ನಂತರ ಅಭಿಮಾನಿಗಳಲ್ಲಿ ಸಂತಸದ ಅಲೆ ಎದ್ದಿದೆ. 'ಐದು ಪಟ್ಟು ಹುಚ್ಚುತನಕ್ಕೆ ಸಿದ್ಧರಾಗಿ, ಸಾಜಿದ್ ನಾಡಿಯಾಡ್ವಾಲಾ ಅವರ ಚಿತ್ರವನ್ನು ತರಣ್ ಮನ್ಸುಖಾನಿ ನಿರ್ದೇಶಿಸಲಿದ್ದಾರೆ, ಮುಂಬರುವ ದೀಪಾವಳಿ ಸಂದರ್ಭ ಚಿತ್ರಮಂದಿರಗಳಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಅವರ ಸತ್ಯಪ್ರೇಮ್ ಕಿ ಕಥಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿರುವ ಈ ಸಮಯದಲ್ಲಿ ಹೌಸ್‌ಫುಲ್ 5 ಅನ್ನು ಘೋಷಿಸಲಾಗಿದೆ.
ಇದನ್ನೂ ಓದಿ: ರಾಮ್ ಚರಣ್ ಮಗಳ ನಾಮಕರಣ: ಮೆಗಾ ಸ್ಟಾರ್ ಮೊಮ್ಮಗಳಿಗೆ ಚಿನ್ನದ ತೊಟ್ಟಿಲು ಕೊಟ್ಟ ಮುಖೇಶ್ ಅಂಬಾನಿ
ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ: ಹೌಸ್‌ಫುಲ್ 5 ಸಿನಿಮಾ 2024 ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ಅದೇ ಸಮಯದಲ್ಲಿ, ಸಲ್ಮಾನ್ ಖಾನ್ ಅವರ ಚಿತ್ರ ಪ್ರೇಮ್ ಕಿ ಶಾದಿ, ಅಜಯ್ ದೇವಗನ್ ಅವರ ಸಿಂಗಮ್ 3, ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲೈಯಾ 3 ಅಲ್ಲದೇ ಹೇರಾ ಫೆರಿ 3 ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ದೀಪಾವಳಿ ಸಂದರ್ಭ ಬಿಡುಗಡೆಗೊಳ್ಳಲು ಅನೇಕ ಚಿತ್ರಗಳು ಸಿದ್ಧವಾಗುತ್ತಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: Satyaprem Ki Katha: ಮೊದಲ ದಿನವೇ 9 ಕೋಟಿ ರೂ ಕಲೆಕ್ಷನ್ ಮಾಡಿದ ಕಾರ್ತಿಕ್ ಕಿಯಾರಾ ಪ್ರೇಮಕಥೆ
ಅಕ್ಷಯ್ ಕುಮಾರ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'OMG 2'. ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಓ ಮೈ ಗಾಡ್ 2 (Oh My God 2) ತೆರೆಕಾಣಲಿದೆ. ಸಿನಿಮಾ ಯಶಸ್ಸಿನ ವಿಚಾರವಾಗಿ ಹಿನ್ನೆಡೆ ಕಂಡಿರುವ ಅಕ್ಷಯ್ ಕುಮಾರ್ ಅವರ ಮುಂದಿನ ಈ ಸಿನಿಮಾಗಳು ಅವರ ಕೈ ಹಿಡಿಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.