ETV Bharat / entertainment

ಚಿತ್ರರಂಗಕ್ಕೆ ರಾಧನಾ ರಾಮ.. ಮಾಲಾಶ್ರೀ ಪುತ್ರಿ ಎಂಟ್ರಿ - ಕನಸಿನ ರಾಣಿಯ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ

ಕನಸಿನ ರಾಣಿಯ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ: ಕನಸಿನರಾಣಿ ಮಾಲಾಶ್ರೀ ಹಾಗೂ ಕೋಟಿ ರಾಮು ಅವರ ಪುತ್ರಿ Radhanaram ಅವರು ದರ್ಶನ್ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ

Etv Bharat,ಮಾಲಾಶ್ರೀ ಪುತ್ರಿ ಎಂಟ್ರಿ
Etv Bharat,ಚಿತ್ರರಂಗಕ್ಕೆ ರಾಧನಾ ರಾಮ
author img

By

Published : Aug 5, 2022, 1:09 PM IST

Updated : Aug 5, 2022, 1:45 PM IST

ಮಾಲಾಶ್ರೀ ಕನ್ನಡ ಚಿತ್ರರಂಗದ ಕನಸಿನ ರಾಣಿ. ಸೌಂದರ್ಯ ಮತ್ತು ನಟನೆಯಿಂದ ಅಪಾರ ಅಭಿಮಾನಿಗಳನ್ನೂ ಹೊಂದಿದ್ದ ನಟಿ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದ್ದರು. ಇದೀಗ ಅವರ ಪುತ್ರಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.

ಕನಸಿನ ರಾಣಿಯ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ: ಮಾಲಾಶ್ರೀ ಪುತ್ರಿ ರಾಧನಾ ರಾಮ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ಎಂದರೆ ಮೊದಲ ಚಿತ್ರದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ರಾಕ್​ಲೈನ್ ವೆಂಕಟೇಶ್ ನಿರ್ಮಾಣದ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದರ್ಶನ್ ಅವರ 56ನೇ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ನಾಯಕಿ ಆಗಿ ಪದಾರ್ಪಣೆ ಮಾಡಲಿದ್ದಾರೆ.

  • ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ! ✨

    ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ!

    ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು@dasadarshan @TharunSudhir#D56WelcomesRadhanaRam pic.twitter.com/S5cZp3IC7r

    — RocklineEnt (@RocklineEnt) August 5, 2022 " class="align-text-top noRightClick twitterSection" data=" ">

ವರಮಹಾಲಕ್ಷ್ಮಿ ಹಬ್ಬದ ದಿನ ಈ ಬಗ್ಗೆ ಸ್ವತಃ ಮಾಲಾಶ್ರೀ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 'ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ' ಎಂದು ಟ್ವಿಟರ್​ನಲ್ಲಿ ಕನಸಿನ ರಾಣಿ ಬರೆದುಕೊಂಡಿದ್ದಾರೆ.

(ಇದನ್ನೂಓದಿ: ಭವಿಷ್ಯದ ನಾಯಕಿಯರಾಗಲಿರುವ ಸ್ಯಾಂಡಲ್​​​ವುಡ್​​ ಸ್ಟಾರ್ ನಟಿಯರ ಮಕ್ಕಳು ಇವರು)

Last Updated : Aug 5, 2022, 1:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.