ETV Bharat / entertainment

ಅಮೂಲ್ಯ ಅವಳಿ ಮಕ್ಕಳ ನಾಮಕರಣಕ್ಕೆ ಸ್ಯಾಂಡಲ್​ವುಡ್ ತಾರೆಯರ ರಂಗು - ವಿಡಿಯೋ - actress amulya twins children naming ceremony

ನಟಿ ಅಮೂಲ್ಯ ಸದ್ಯಕ್ಕೆ ತಾಯ್ತನದ ಖುಷಿಯಲ್ಲಿದ್ದು, ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಅದ್ಧೂರಿಯಾಗಿ ಅವಳಿ ಮಕ್ಕಳ ನಾಮಕರಣ ಕಾರ್ಯಕ್ರಮ ಮಾಡಿದ್ದು, ಸೆಲೆಬ್ರಿಟಿಗಳ ದಂಡೇ ಹರಿದುಬಂದಿತ್ತು.

actress amulya twins children naming ceremony
ಅಮೂಲ್ಯ ಅವಳಿ ಮಕ್ಕಳ ನಾಮಕರಣ ಕಾರ್ಯಕ್ರಮ
author img

By

Published : Nov 12, 2022, 10:35 AM IST

ಚೆಲುವಿನ ಚಿತ್ತಾರ ಸಿನಿಮಾ‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಅಮೂಲ್ಯ. 2017ರಲ್ಲಿ ಆದಿಚುಂಚನಗಿರಿಯಲ್ಲಿ ಜಗದೀಶ್ ಆರ್ ಚಂದ್ರ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ನಂತರ ಸಿನಿಮಾದಿಂದ ದೂರವಾದರು. ಈ ದಂಪತಿಗೆ ಮುದ್ದಾದ ಅವಳಿ ಗಂಡುಮಕ್ಕಳು ಜನಿಸಿದ್ದು, ನಿನ್ನೆ ಅದ್ಧೂರಿಯಾಗಿ ನಾಮಕರಣ ಕಾರ್ಯಕ್ರಮ ಜರುಗಿತು. ಈ ವೇಳೆ ಸ್ಯಾಂಡಲ್‌ವುಡ್‌ ಗಣ್ಯರ ದಂಡೇ ಹರಿದುಬಂದಿತ್ತು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಅಮೂಲ್ಯ, ಜಗದೀಶ್ ದಂಪತಿ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ಭಿನ್ನ ಹೆಸರು ಇಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ತಾರೆಯರು, ಆಪ್ತರು ಸಾಕ್ಷಿಯಾಗಿದ್ದರು. ನಟ ದರ್ಶನ್​, ಶಿವ ರಾಜ್​ಕುಮಾರ್, ಗಣೇಶ್, ಪತ್ನಿ ಶಿಲ್ಪಾ ಗಣೇಶ್, ಸೃಜನ್ ಲೋಕೇಶ್, ನೆನಪಿರಲಿ ಪ್ರೇಮ್, ಪ್ರಿಯಾಂಕಾ ಉಪೇಂದ್ರ, ಕಾರುಣ್ಯಾ ರಾಮ್, ಮೇಘನಾ ಗಾಂವ್ಕರ್, ‌ಮಿಲನ‌ ನಾಗರಾಜ್, ತಾರಾ, ಮಾಳವಿಕ, ನಾಗಾಭರಣ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ರಾಜಕೀಯ ಗಣ್ಯರು ಆಗಮಿಸಿದ್ದರು.

ಅಮೂಲ್ಯ ಅವಳಿ ಮಕ್ಕಳ ನಾಮಕರಣ ಕಾರ್ಯಕ್ರಮ

ಇದನ್ನೂ ಓದಿ: ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿದ ನಟಿ ಅಮೂಲ್ಯ: ಫೋಟೋಗಳನ್ನು ನೋಡಿ

ಸಿನಿಮಾದಲ್ಲಿ ನಟನೆ ಮಾಡದಿದ್ದರೂ ಕೂಡ ಚಿತ್ರರಂಗದ ಜೊತೆ ಅಮೂಲ್ಯ ಉತ್ತಮ ಸಂಬಂಧ ಹೊಂದಿದ್ದಾರೆ. ಮತ್ತೆ ಯಾವಾಗ ನೆಚ್ಚಿನ ನಟಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಯಾವಾಗ ಬಣ್ಣದ ಲೋಕಕ್ಕೆ ಮರಳುತ್ತೀರಾ ಎಂಬ ಪ್ರಶ್ನೆ ಅಮೂಲ್ಯಗೆ ಪದೇ ಪದೇ ಕೇಳಿಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.