ETV Bharat / entertainment

ಟೀಸರ್​​ ಬಿಡುಗಡೆಗೂ ಮುನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡ 'ಮಾರ್ಟಿನ್' - dhruva sarja latest news

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಟೀಸರ್​​ ಬಿಡುಗಡೆಗೂ ಮುನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ.

Martin movie demand
ಮಾರ್ಟಿನ್ ಸಿನಿಮಾ ಡಿಮ್ಯಾಂಡ್
author img

By

Published : Feb 17, 2023, 8:06 PM IST

'ಮಾರ್ಟಿನ್' ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹಾಗೂ ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ. ಟೀಸರ್ ಬಿಡುಗಡೆ ದಿನಾಂಕ ಘೋಷಿಸಿರುವ ಚಿತ್ರತಂಡ ಮಾರ್ಟಿನ್ ಪೋಸ್ಟರ್ ರಿವೀಲ್ ಮಾಡಿದೆ. ಈ ಫೋಸ್ಟರ್​ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿದೆ.

'ಮಾರ್ಟಿನ್ ಸಾಮಾನ್ಯ ಅಲ್ಲ, ಅಸಾಮಾನ್ಯ'. ಈ ಮಾತು ಇಂದು ನಿನ್ನೆಯದಲ್ಲ. ಕಳೆದ ಎರಡು ವರ್ಷಗಳಿಂದ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಹೇಳುತ್ತಾ ಬಂದಿದ್ದಾರೆ. ಈ ಮಾತನ್ನು ಅನೇಕರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದು ಚಿತ್ರತಂಡದ ಕೆಲವರ ಅಭಿಪ್ರಾಯ. ಆದ್ರೆ ಉದಯ್ ಮೆಹ್ತಾ, ಧ್ರುವ ಸರ್ಜಾ, ಎ.ಪಿ.ಅರ್ಜುನ್ ಯಾವ ಮಾತುಗಳಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಏಕಂದ್ರೆ ಈ ಮೂವರಲ್ಲಿಯೂ ತಾವು ಮಾಡಲು ಹೊರಟಿರುವ ಸಿನಿಮಾ ವಿಚಾರದಲ್ಲಿ ಸ್ಪಷ್ಟತೆ ಇತ್ತು. ಕನ್ನಡದತ್ತ ಮತ್ತೆ ಎಲ್ಲರೂ ತಿರುಗಿ ನೋಡುವಂತಹ ಸಿನಿಮಾ ಮಾಡಬೇಕೆಂಬ ಬದ್ಧತೆ ಇತ್ತು.

ಈ ಹಿನ್ನೆಲೆಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ತಮ್ಮ ಕೆಲಸವನ್ನೆಲ್ಲ ಮಾಡಿ ಮುಗಿಸಿದ್ದಾರೆ. ಇದೇ ಫೆಬ್ರುವರಿ 23ಕ್ಕೆ ಮಾರ್ಟಿನ್ ಚಿತ್ರದ ಎರಡುವರೆ ನಿಮಿಷದ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಟೀಸರ್ ಬಿಡುಗಡೆಗೆ ಮುನ್ನವೇ ಚಿತ್ರದ ಶಕ್ತಿ ಬಗ್ಗೆ ಬಹುಭಾಷಾ ಚಿತ್ರರಂಗಕ್ಕೆ ನಂಬಿಕೆ ಬಂದಿದೆ. ಮಾರ್ಟಿನ್ ಸೂಪರ್​ ಹಿಟ್​ ಆಗುವ ಸಿನಿಮಾ ಎಂದು ಅಂದಾಜಿಸಲಾಗುತ್ತಿದೆ.

ಸದ್ಯಕ್ಕೆ ಮಾರ್ಟಿನ್ ಮೇಲೆ ಬಾಲಿವುಡ್ ಮಂದಿಗೆ ಮನಸ್ಸಾಗಿದೆ. ಇತ್ತೀಚೆಗೆ ಬಿಡುಗಡೆ ಕಂಡಿರುವ ಪೋಸ್ಟರ್ ಅಲ್ಲಿನವರ ಚಿತ್ತ ಕದ್ದಿದೆ. ಇದಕ್ಕೆ ಪೂರಕವಾಗಿ ಮಾರ್ಟಿನ್ ಚಿತ್ರದ ಹಿಂದಿ ಅವತರಣಿಕೆಯ ಹಕ್ಕನ್ನು ಪರ್ಚೇಸ್ ಮಾಡಲು ಮಾಯಾನಗರಿ ಮುಂಬೈಯಲ್ಲಿನ ಕೆಲ ಪ್ರತಿಷ್ಠಿತ ವಿತರಣಾ ಸಂಸ್ಥೆಗಳು ಮುಂದೆ ಬಂದಿವೆ. ನಿರ್ಮಾಪಕ ಉದಯ್ ಮೆಹ್ತಾ ಅವರಿಗೆ ಕರೆ ಮಾಡಿ ಮಾರ್ಟಿನ್ ಚಿತ್ರದ ವಿತರಣೆ ಹಕ್ಕನ್ನು (ಹಿಂದಿ) ನಮಗೆ ಕೊಡಿ ಅಂತಾ ಕೇಳಿವೆ. ಈ ವಿಚಾರ ಗಾಂಧಿನಗರದಲ್ಲಿ ಸದ್ದುಮಾಡುತ್ತಿದೆ.

ಇದನ್ನೂ ಓದಿ: 'ರಿಷಬ್​ಗಾಗಿ ಪ್ರಾರ್ಥಿಸುತ್ತಿರುವೆ': ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ

ಆದರೆ ನಿರ್ಮಾಪಕ ಉದಯ್ ಮೆಹ್ತಾ ಪಕ್ಕಾ ಬ್ಯುಸಿನೆಸ್ ಮ್ಯಾನ್. ಫೆಬ್ರವರಿ 23ರಂದು ಟೀಸರ್ ಬಿಡುಗಡೆ ಆದ ಬಳಿಕ ಮಾರ್ಟಿನ್ ಸಿನಿಮಾದ ವ್ಯವಹಾರ ಮಾಡೋಣ ಅಂತಾ ಹೇಳಿದ್ದಾರೆ. ಕೋಟಿ ಕೋಟಿ ಹಣ ಹಾಕಿರುವ ಉದಯ್ ಮೆಹ್ತಾ ಅವರಿಗೆ ಮಾರ್ಟಿನ್ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇದೆ. ಮಾರ್ಟಿನ್ ಟೀಸರ್ ಬಂದ ನಂತರ ಮುಂಬೈನವರು ಆಫರ್ ಮಾಡಿರುವ ಬೇಸ್ ಪ್ರೈಸ್​​ ಹೆಚ್ಚಾಗುವ ಭರವಸೆಯಲ್ಲಿ ಚಿತ್ರತಂಡ ಇದೆ ಅನ್ನೋದು ಗಾಂಧಿನಗರದಲ್ಲಿ ಕೇಳಿಬರುತ್ತಿರೋ ಮಾತು.

ಇದನ್ನೂ ಓದಿ: ಆ್ಯಕ್ಷನ್​​ ಪ್ರಿನ್ಸ್​​ ಅಭಿಮಾನಿಗಳಿಗೆ ಗುಡ್ ನ್ಯೂಸ್: ಮಾರ್ಟಿನ್ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್

ಕೇವಲ ಹಿಂದಿ ಮಾತ್ರವಲ್ಲ ಟಾಲಿವುಡ್, ಕಾಲಿವುಡ್, ಮಾಲಿವುಡ್​ನಿಂದಲೂ ಕೂಡಾ ಉದಯ್ ಮೆಹ್ತಾ ಅವರನ್ನು ಅನೇಕರು ಸಂಪರ್ಕ ಮಾಡಿದ್ದಾರೆ. ಸದ್ಯಕ್ಕೆ ಮಾರ್ಟಿನ್ ಚಿತ್ರದ ಟೀಸರ್ ಬಿಡುಗಡೆಗೆ ಕೌಂಟ್​ಡೌನ್​​ ಆರಂಭವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.