ETV Bharat / entertainment

ಅಮೀರ್​ ಖಾನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್.. ನಟನ ಸಿನಿಮಾ ಜೊತೆ ರಿಲೀಸ್​ ಡೇಟ್​ ಅನೌನ್ಸ್

Aamir Khan next film: ಅಮೀರ್​ ಖಾನ್ ನಟನೆಯ ಮುಂದಿನ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ.

author img

By ETV Bharat Karnataka Team

Published : Aug 29, 2023, 4:28 PM IST

Aamir Khan
ಅಮೀರ್​ ಖಾನ್

ಬಾಲಿವುಡ್​ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್​ ಖಾನ್​ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟಾರ್ ಡಮ್​ ಹೊಂದಿದ್ದಾರೆ. ಬಹುಬೇಡಿಕೆ ನಟ ಮನರಂಜನಾ ಕ್ಷೇತ್ರಕ್ಕೆ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದ್ರೆ ಇತ್ತೀಚಿನ ಅವರ ಸಿನಿಮಾಗಳು ನಿರೀಕ್ಷೆ ತಲುಪುವಲ್ಲಿ ಕೊಂಚ ಹಿನ್ನೆಡೆ ಕಂಡಿವೆ. ಇದೀಗ ನಟನ ಮುಂದಿನ ಸಿನಿಮಾ ಕುರಿತು ಬಿಗ್ ಅಪ್​ಡೇಟ್ ಸಿಕ್ಕಿದೆ.

ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದ ಸೂಪರ್​ ಸ್ಟಾರ್​: ನಟ ಅಮೀರ್​ ಖಾನ್ ಅವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ 'ಲಾಲ್​ ಸಿಂಗ್​ ಚಡ್ಡಾ'. ಆದ್ರೆ ಸಿನಿಮಾ ನಿರೀಕ್ಷೆಯಂತೆ ಯಶಸ್ಸು ಕಾಣಲಿಲ್ಲ. ಬಳಿಕ ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದು, ಕುಟುಂಬಕ್ಕೆ ಸಮಯ ಮೀಸಲಿಟ್ಟರು. ಇದೀಗ ನಟ ತಮ್ಮ ಹೊಸ ಪ್ರಾಜೆಕ್ಟ್ ಪ್ರಾರಂಭಿಸುವಂತೆ ತೋರುತ್ತಿದೆ.

ತರಣ್​ ಆದರ್ಶ್ ಮಾಹಿತಿ: ನಟನ ಮುಂದಿನ ಚಿತ್ರದ ಮಾಹಿತಿಯನ್ನು ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್​ ಆದರ್ಶ್​ ತಿಳಿಸಿದ್ದಾರೆ. ​ಅಮೀರ್​ ಖಾನ್​ ಪ್ರೊಡಕ್ಷನ್ಸ್​ ನಟನ ಮುಂದಿನ ಸಿನಿಮಾ ಬಿಡುಗಡೆಗೆ ದಿನ ನಿಗದಿ ಮಾಡಿದೆ. ಘಜಿನಿ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ ಮುಂದಿನ ವರ್ಷ ಅಂದರೆ 2024ರ ಡಿಸೆಂಬರ್​ 20 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  • #Xclusiv… AAMIR KHAN LOCKS CHRISTMAS 2024 FOR NEXT FILM… Aamir Khan Productions’ Prod No. 16 [not titled yet],
    starring #AamirKhan in the lead role, to release on 20 Dec 2024 #Christmas2024.

    Pre-production of the film is ongoing and the film goes on floors on 20 Jan 2024…… pic.twitter.com/wAMIvPL60D

    — taran adarsh (@taran_adarsh) August 29, 2023 " class="align-text-top noRightClick twitterSection" data=" ">

ಸೋಷಿಯಲ್​ ಮಿಡಿಯಾ ಪ್ಲಾಟ್​ಫಾರ್ಮ್​ X (ಹಿಂದಿನ ಟ್ವಿಟರ್) ನಲ್ಲಿ ಅಮೀರ್​ ಖಾನ್​ ಫೋಟೋ ಶೇರ್ ಮಾಡಿರುವ ಸಿನಿ ವ್ಯವಹಾರ ತಜ್ಞ, ''ಎಕ್ಸ್​​ಕ್ಲೂಸಿವ್​​, ಅಮೀರ್​ ಖಾನ್​​ ಮುಂದಿನ ಸಿನಿಮಾ ಬಿಡುಗಡೆಗೆ 2024ರ ಕ್ರಿಸ್​ಮಸ್​ ದಿನವನ್ನು ನಿಗದಿ ಮಾಡಿದ್ದಾರೆ. ಅಮೀರ್​ ಖಾನ್​ ಪ್ರೊಡಕ್ಷನ್ಸ್​ನ 16ನೇ (ಟೈಟಲ್​ ಫೈನಲ್​ ಆಗಿಲ್ಲ) ಸಿನಿಮಾದಲ್ಲಿ ನಟ ಅಮೀರ್​ ಖಾನ್​ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 2024ರ ಜನವರಿ 20 ರಂದು ಸಿನಿಮಾ ಸೆಟ್ಟೇರಲಿದೆ'' ಎಂದು ಬರೆದುಕೊಂಡಿದ್ದಾರೆ. ಅಕ್ಷಯ್​ ಕುಮಾರ್ ಅವರ ವೆಲ್​ಕಮ್​ 3 (ವೆಲ್​ಕಮ್​ ಟು ದಿ ಜಂಗಲ್​​) ಸಿನಿಮಾ ಕೂಡ 2024ರ ಕ್ರಿಸ್​ಮಸ್​ ಸಂದರ್ಭ ಬಿಡುಗಡೆ ಆಗಲಿದ್ದು, ಬಾಕ್ಸ್​ ಆಫೀಸ್​ ಪೈಪೋಟಿ ಎದುರಾಗಲಿದೆ.

ಇದನ್ನೂ ಓದಿ: ತಾವು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್: ಸಿಬ್ಬಂದಿ ಫುಲ್​ ಖುಷ್

ಅಮೀರ್​ ಖಾನ್​ ಕೊನೆಯದಾಗಿ ಲಾಲ್​ ಸಿಂಗ್​ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2022ರ ಆಗಸ್ಟ್ 11 ರಂದು ತೆರೆಕಂಡ ಈ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​​ ಪ್ರಮುಖ ಪಾತ್ರ ವಹಿಸಿದ್ದರು. ಅದ್ವೈತ್​ ಚಂದನ್​ ಅವರ ಈ ಸಿನಿಮಾ 1994ರ ಹಾಲಿವುಡ್​ ಸಿನಿಮಾ ಫಾರೆಸ್ಟ್ ಗಂಪ್​ನ ಅಧಿಕೃತ ಹಿಂದಿ ರೀಮೇಕ್​. ಲಾಲ್​ ಸಿಂಗ್​ ಚಡ್ಡಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಚಿತ್ರ ಸಾಕಷ್ಟು ಟೀಕೆ ಎದುರಿಸಿತ್ತು.

ಇದನ್ನೂ ಓದಿ: ಕಚೇರಿಗಾಗಿ ಹೊಸ ಜಾಗ ಖರೀದಿಸಿದ ನಟಿ ಕಾಜೋಲ್​ : ಆಸ್ತಿ ಮೌಲ್ಯ ಕೇಳಿದರೆ ಹುಬ್ಬೇರಿಸ್ತೀರಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.