ಮುಂಬೈ : ಬಾಲಿವುಡ್ ಮೋಸ್ಟ್ ಗಾರ್ಜಿಯಸ್ ಗೊಂಬೆ, ಮೋಹಕ ತಾರೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿರೋ ಈ ಚೆಂದುಳ್ಳಿ ಚೆಲುವೆ ದೇಸಿ ಲುಕ್ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸ್ತಿದ್ದಾರೆ. ಈ ದೇಸಿ ಲುಕ್ಗೆ ನೆಟ್ಟಿಗರು ಮನಸೋತಿದ್ದಾರೆ.
- " class="align-text-top noRightClick twitterSection" data="
">
ಜಾಹ್ನವಿ ಕಪೂರ್ ಸದ್ಯ ಬಿಟೌನ್ನ ಆಳ್ತಿರುವ ಚೆಂದದ ಚೆಲುವೆ. ತಾಯಿ ಶ್ರೀದೇವಿ ತರಹನೇ ಕಂಗೊಳಿಸುತ್ತಿರುವ ಜಾಹ್ನವಿ ನೋಟ ಹಾಗೂ ಗ್ಲಾಮರ್ ಲುಕ್ಗೆ ಬಾಲಿವುಡ್ ಅಂಗಳವೇ ಫಿದಾ ಆಗಿದೆ. ಇನ್ನು ಜಾಹ್ನವಿ ಕಪೂರ್ ಏನೇ ಮಾಡಿದ್ರು ಸದಾ ಸುದ್ದಿಯಾಗ್ತಾರೆ.
ಈ ಗ್ಲಾಮರ್ ಬೇಬಿ ಡಾಲ್ ಕಿವಿಯೋಲೆಗಳಿಗೆ ಹೋಲಿಕೆಯಾಗಿರುವಂತಹ ಹೂವಿನ ಹಸಿರು ಸೀರೆಯಲ್ಲಿ ಮಿಂಚಿದ್ದಾರೆ. ಬಣ್ಣದ ತುಟಿಗಳು.. ಕಾಡಿಗೆ ಹೊತ್ತ ಕಣ್ಣುಗಳು.. ಸೀರೆಯಲ್ಲಿ ನೋಡುತ್ತಿರುವ ಮಾದಕ ನೋಟ ಪಡ್ಡೆ ಹುಡುಗರ ಹೃದಯಕ್ಕೆ ಕೈ ಹಾಕುವಂತಿದೆ.
ದೇಸಿ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋಗಳನ್ನು ಜಾಹ್ನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ ಆಕೆಯ ಅಭಿಮಾನಿಗಳು ಫಿದಾ ಆಗಿ ಹೊಗಳಿಕೆಯ ಸುರಿಮಳೆ ಗೈದಿದ್ದಾರೆ. ಆದ್ರೆ, ನಮ್ಮ ಗಮನ ಸೆಳೆದದ್ದು ಆಕೆಯ ತಂದೆ ಬೋನಿ ಕಪೂರ್ ಅವರ ಕಾಮೆಂಟ್. ಆಕೆಯ ತಂದೆ ಬೋನಿ ಕಪೂರ್ ಅವರು ‘ಅತಿ ಸುಂದರ್’ ಎಂದು ಬರೆದು ಎರಡು ಹೃದಯದ ಎಮೋಟಿಕಾನ್‌ಗಳೊಂದಿಗೆ ಪೊಸ್ಟ್ ಮಾಡಿದ್ದಾರೆ. ಮೃಣಾಲ್ ಠಾಕೂರ್ ಸಹ ಸುಂದರ್ ಎಂದು ಕಮೆಂಟ್ ಮಾಡಿದ್ದಾರೆ.
ಓದಿ: ಮಿರಿ ಮಿರಿ ಮಿನುಗುವ ಮಿನಿ ಡ್ರೆಸ್‌ನಲ್ಲಿ ಜಾನ್ವಿ ಕಪೂರ್.. ಕಣ್ಮನ ಸೆಳೆಯುವ ಸೌಂದರ್ಯ
ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಜಾಹ್ನವಿ ಕಪೂರ್ಗೆ ನಿಮ್ಮ ತಂದೆ ಬೋನಿ ಕಪೂರ್ ಸಿಂಗಲ್ ಪೇರೆಂಟ್ ಆಗಿ ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಜಾಹ್ನವಿ, ನಮ್ಮ ತಂದೆ ನಮಗೆ ಬೆಸ್ಟ್ ಫ್ರೆಂಡ್. ಅಪ್ಪನಿಗೆ ಇದು ಹೊಸದು ಎಂದು ನಾನು ಭಾವಿಸುತ್ತೇನೆ. ಆದರೆ, ಪ್ರಾಮಾಣಿಕವಾಗಿ ಹೇಳೋದಾದ್ರೆ ಅವರು ನಮಗೆ ಎಲ್ಲಕ್ಕಿಂತ ಹೆಚ್ಚಾಗಿ ಸ್ನೇಹಿತರಾಗಿದ್ದಾರೆ. ನಮ್ಮ ಸಂಬಂಧವು ಹೆಚ್ಚು ಪ್ರಾಮಾಣಿಕ ಮತ್ತು ಪಾರದರ್ಶಕವಾಗಿದೆ ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿದರು.
ಜಾಹ್ನವಿ ಕಪೂರ್ ಮುಂದಿನ ಗುಡ್ ಲಕ್ ಜೆರ್ರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಲಿ, ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.