ETV Bharat / entertainment

ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರ ಶೇಕಡ 90ರಷ್ಟು ಭಾಗ ಸುಳ್ಳು ಎಂದ ಇಸ್ರೋ ಮಾಜಿ ವಿಜ್ಞಾನಿಗಳು - ನಟ ಮಾಧವನ್ ಚಿತ್ರಗಳು

ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧರಿತ ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರ ಒಂದು ಕಟ್ಟು ಕಥೆ. ಇದರಲ್ಲಿ ಶೇಕಡ 90ರಷ್ಟು ಭಾಗ ಸುಳ್ಳು ಹೇಳಲಾಗಿದೆ ಎಂದು ಇಸ್ರೋ ಮಾಜಿ ವಿಜ್ಞಾನಿಗಳ ಗುಂಪು ಆರೋಪಿಸಿದೆ.

Ex ISRO scientists find fault with Nambi Narayan  Nambi Narayan biographical movie  Rocketry The Nambi Effect movie  produced and written by actor Madhavan  Rocketry movie release date  Actor Madhavan movies  ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರ  ಇಸ್ರೋ ಮಾಜಿ ವಿಜ್ಞಾನಿಗಳ ಗುಂಪು  ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್  ನಂಬಿ ನಾರಾಯಣನ್ ಜೀವನಾಧರಿತ ಚಿತ್ರ ರಾಕೆಟ್ರಿ  ನಟ ಮಾಧವನ್ ಚಿತ್ರಗಳು  ರಾಕೆಟ್ರಿ ಚಿತ್ರದ ಬಿಡುಗಡೆ ದಿನಾಂಕ
ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರ
author img

By

Published : Aug 25, 2022, 1:32 PM IST

ತಿರುವನಂತಪುರಂ(ತಮಿಳುನಾಡು): ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಜೀವನಾಧರಿತ 'ರಾಕೆಟ್ರಿ ದಿ ನಂಬಿ ಎಫೆಕ್ಟ್' ಚಿತ್ರದಲ್ಲಿ ಮತ್ತು ಕೆಲವು ಸುದ್ದಿ ಚಾನಲ್‌ಗಳ ಮೂಲಕ ಪಡೆದ ಹೇಳಿಕೆಗಳು ಸುಳ್ಳು. ಈ ಚಿತ್ರ ಬಾಹ್ಯಾಕಾಶ ಸಂಸ್ಥೆಯನ್ನು ಮಾನಹಾನಿ ಮಾಡುವಂತಿದೆ ಎಂದು ಇಸ್ರೋ ಮಾಜಿ ವಿಜ್ಞಾನಿಗಳ ಗುಂಪು ಬುಧವಾರ ಆರೋಪಿಸಿದೆ.

ಇಸ್ರೋ ಎಲ್‌ಪಿಎಸ್‌ಇ ನಿರ್ದೇಶಕ ಡಾ ಎ ಇ ಮುತ್ತುನಾಯಗಂ, ಕ್ರಯೋಜೆನಿಕ್ ಇಂಜಿನ್‌ನ ಯೋಜನಾ ನಿರ್ದೇಶಕ ಪ್ರೊ ಇವಿಎಸ್ ನಂಬೂಿದಿರಿ, ಕ್ರಯೋಜೆನಿಕ್ ಇಂಜಿನ್ ಉಪನಿರ್ದೇಶಕ ಡಿ. ಶಶಿಕುಮಾರನ್ ಮತ್ತು ಇಸ್ರೋದ ಇತರ ಮಾಜಿ ವಿಜ್ಞಾನಿಗಳು ಮಾಧ್ಯಮಗೋಷ್ಟಿ ನಡೆಸಿ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಟ ಆರ್ ಮಾಧವನ್ ನಿರ್ದೇಶಿಸಿದ, ನಿರ್ಮಿಸಿದ ಮತ್ತು ಬರೆದಿರುವ ಈ ಚಿತ್ರವು ಏರೋಸ್ಪೇಸ್ ಎಂಜಿನಿಯರ್ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. ಚಿತ್ರದಲ್ಲಿ ಮಾಧವನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂಬಿ ನಾರಾಯಣನ್ ಅವರು ‘ರಾಕೆಟ್ರಿ ದಿ ನಂಬಿ ಎಫೆಕ್ಟ್’ ಚಲನಚಿತ್ರದ ಮೂಲಕ ಮತ್ತು ದೂರದರ್ಶನ ಚಾನೆಲ್‌ಗಳ ಮೂಲಕ ಇಸ್ರೋ ಮತ್ತು ಇತರ ವಿಜ್ಞಾನಿಗಳನ್ನು ದೂಷಿಸುತ್ತಿರುವುದರಿಂದ ನಾವು ಸಾರ್ವಜನಿಕರಿಗೆ ಕೆಲವು ವಿಷಯಗಳನ್ನು ಹೇಳಲು ಒತ್ತಾಯಿಸುತ್ತೇವೆ. ಅವರು ಅನೇಕ ಯೋಜನೆಗಳ ಪಿತಾಮಹ ಎಂದು ಹೇಳುವುದು ಸುಳ್ಳು. ಭಾರತದ ರಾಷ್ಟ್ರಪತಿಯಾಗಲು ಹೋದ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಒಮ್ಮೆ ತಿಳಿ ಹೇಳಿದ್ದೇನೆ ಎಂದು ಸಿನಿಮಾದಲ್ಲಿ ಹೇಳಿಕೊಂಡಿದ್ದಾರೆ. ಅದೂ ಸುಳ್ಳು ಎಂದು ಮಾಜಿ ವಿಜ್ಞಾನಿಗಳು ಹೇಳಿದ್ದಾರೆ.

ಚಿತ್ರದಲ್ಲಿ ಮೂಡಿ ಬಂದಿರುವ ಸುಳ್ಳು ಹೇಳಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಇಸ್ರೋದ ಹಾಲಿ ಅಧ್ಯಕ್ಷ ಎಸ್ ಸೋಮನಾಥ್ ಅವರನ್ನು ಕೇಳಿದ್ದೇವೆ. ನಾರಾಯಣನ್ ಅವರ ಬಂಧನದಿಂದಾಗಿ ಭಾರತದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಪಡೆದುಕೊಳ್ಳಲು ವಿಳಂಬವಾಯಿತು ಎಂದು ಚಿತ್ರದಲ್ಲಿ ನಾರಾಯಣನ್ ಹೇಳಿಕೊಂಡಿದ್ದಾರೆ. 1980ರ ದಶಕದಲ್ಲಿ ಇಸ್ರೋ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ಇದಕ್ಕೆ ಇವಿಎಸ್ ನಂಬೂದಿರಿ ಉಸ್ತುವಾರಿ ವಹಿಸಿದ್ದರು. ಈ ಯೋಜನೆಗೂ ನಾರಾಯಣನ್​ರಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

2018 ರಲ್ಲಿ 76 ವರ್ಷದ ನಾರಾಯಣನ್ ಆರೋಪಿಯಾಗಿದ್ದ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಕೇರಳ ಪೊಲೀಸರ ಪಾತ್ರವೇನು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆಗೆ ಆದೇಶಿಸಿತ್ತು. ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಾರಾಯಣನ್ ಅವರು ಸುಮಾರು ಎರಡು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ನಂತರ ಗೂಢಚಾರಿಕೆ ಪ್ರಕರಣವು ಸುಳ್ಳು ಎಂದು ಸಿಬಿಐ ಕಂಡುಹಿಡಿದಿತ್ತು.

1994ರಲ್ಲಿ ತಮಿಳುನಾಡು ರಾಜ್ಯಕ್ಕೆ ಅಪ್ಪಳಿಸಿದ ಬೇಹುಗಾರಿಕೆ ಪ್ರಕರಣವು ಇಬ್ಬರು ವಿಜ್ಞಾನಿಗಳು ಮತ್ತು ಇಬ್ಬರು ಮಾಲ್ಡೀವಿಯನ್ ಮಹಿಳೆಯರ ಮೂಲಕ ಇತರ ನಾಲ್ವರು ಸೇರಿ ಕೆಲವು ಬಾಹ್ಯಾಕಾಶ ಕಾರ್ಯಕ್ರಮಗಳನ್ನು ವಿದೇಶಗಳಿಗೆ ವರ್ಗಾಯಿಸಿದ ಆರೋಪಗಳಿಗೆ ಸಂಬಂಧಿಸಿದೆ. ಈ ಪ್ರಕರಣವನ್ನು ಮೊದಲು ರಾಜ್ಯ ಪೊಲೀಸರು ತನಿಖೆ ನಡೆಸಿ ನಂತರ ಸಿಬಿಐಗೆ ಹಸ್ತಾಂತರಿಸಿದ್ದರು. ಯಾವುದೇ ಬೇಹುಗಾರಿಕೆ ನಡೆದಿಲ್ಲ ಎಂದು ಸಿಬಿಐ ಕಂಡುಕೊಂಡಿತ್ತು. ಈ ಘಟನೆಯಿಂದಾಗಿ ಆಗಿನ ಮುಖ್ಯಮಂತ್ರಿ ದಿವಂಗತ ಕೆ ಕರುಣಾಕರನ್ ರಾಜೀನಾಮೆ ನೀಡಬೇಕಾಯಿತು. ಎಡಪಕ್ಷಗಳು ಕೂಡ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಲು ಈ ಘಟನೆಯನ್ನು ಬಳಸಿಕೊಂಡಿದ್ದವು ಎಂದು ತಿಳಿದುಬಂದಿದೆ.

ಓದಿ: ಈಜು ಸ್ಪರ್ಧೆಯಲ್ಲಿ ದಾಖಲೆ ಬರೆದ ನಟ ಮಾಧವನ್ ಪುತ್ರ..1500 ಮೀ. ಫ್ರೀಸ್ಟೈಲ್​ನಲ್ಲಿ​ ಚಿನ್ನಕ್ಕೆ ಮುತ್ತಿಕ್ಕಿದ ವೇದಾಂತ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.