ETV Bharat / crime

ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪ: ದೂರು ಹಿಂತೆಗೆದುಕೊಂಡ ಮಹಿಳೆ - Dhananjay Munde

ಮಹಾರಾಷ್ಟ್ರ ಸಚಿವ ಧನಂಜಯ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಮಾಡಿ ನೀಡಿದ್ದ ದೂರನ್ನು ಮಹಿಳೆ ಈಗ ಕಾರಣ ತಿಳಿಸದೇ ಹಿಂಪಡೆದಿದ್ದಾರೆ.

t Maha minister Munde
ಧನಂಜಯ ಮುಂಡೆ
author img

By

Published : Jan 22, 2021, 11:40 AM IST

ಮುಂಬೈ: ಮಹಾರಾಷ್ಟ್ರ ಸಚಿವ, ಎನ್​ಸಿಪಿ ಮುಖಂಡ ಧನಂಜಯ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದ ಮುಂಬೈ ಮೂಲದ ಮಹಿಳೆ ಇದೀಗ ದೂರು ಹಿಂಪಡೆದುಕೊಂಡಿದ್ದಾರೆ.

ತನಿಖಾಧಿಕಾರಿಗೆ ಯಾವುದೇ ಕಾರಣ ತಿಳಿಸದೇ ಮಹಿಳೆಯು ದೂರು ಹಿಂಪಡೆದಿದ್ದಾರೆ. ಈ ಬಗ್ಗೆ ಸೂಕ್ತ ಅಫಿಡವಿಡ್​ ಸಲ್ಲಿಸುವಂತೆ ಮಹಿಳೆಗೆ ನಾವು ಸೂಚಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 11 ರಂದು ಮಹಿಳೆಯು, 2006ರಲ್ಲಿ ಸಚಿವ ಧನಂಜಯ ಮುಂಡೆ ಅವರು ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಧನಂಜಯ, ಅತ್ಯಾಚಾರದ ಆರೋಪವನ್ನು ತಳ್ಳಿ ಹಾಕಿದ್ದರು. ಆದರೆ ಮಹಿಳೆಯ ಸಹೋದರಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಗಿ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ಎಂಟು ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!

ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಪ್ರತಿಪಕ್ಷ ಬಿಜೆಪಿಯು ಸಂಪುಟ ಸ್ಥಾನದಿಂದ ಮುಂಡೆ ಕೆಳಗಿಳಿಯಬೇಕೆಂದು ಆಗ್ರಹಿಸಿತ್ತು. ಆರೋಪ ಸಾಬೀತಾಗುವವರೆಗೂ ಮುಂಡೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಎನ್‌ಸಿಪಿ ತಿಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.