ETV Bharat / crime

ಮನೆಗಳಲ್ಲಿ ಕಳ್ಳತನಕ್ಕೆ ಹೊಂಚು ಹಾಕ್ತಿದ್ದ ಖದೀಮ ಬಂಧನ; 4 ಲಕ್ಷ ಮೌಲ್ಯದ ಚಿನ್ನಾಭರಣ ವಶ - ಶಿವಮೊಗ್ಗ ಕ್ರೈಮ್‌ ಸುದ್ದಿ

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದನ್ನು ಆರೋಪಿ ತಪ್ಪೊಪ್ಪಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ. ಬಂಧಿತನಿಂದ 4 ಲಕ್ಷ ರೂಪಾಯಿ ಮೌಲ್ಯ ಚಿನ್ನಾಭರಣ, ಹಣ ಹಾಗೂ ಬೈಕ್‌ ವಶ ಪಡಿಸಿಕೊಳ್ಳಲಾಗಿದೆ.

Theft accused arrested in shimoga district and 4 lakh worth of jewellery seized
ಮನೆಗಳಲ್ಲಿ ಕಳ್ಳತನಕ್ಕೆ ಹೊಂಚು ಹಾಕ್ತಿದ್ದ ಖದೀಮ ಬಂಧನ; 4 ಲಕ್ಷ ಮೌಲ್ಯದ ಚಿನ್ನಾಭರಣ ವಶ
author img

By

Published : Sep 30, 2021, 3:21 AM IST

ಶಿವಮೊಗ್ಗ: ಸಾಗರ ತಾಲೂಕು ಆವಿನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅನೇಕ ಮನೆಗಳಲ್ಲಿ ಕಳ್ಳತನ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಈತನಿಂದ 4,71,660 ರೂಪಾಯಿ ಮೌಲ್ಯದ ಚಿನ್ನಾಭರಣ, ಹಣ ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಯಾರು ಇಲ್ಲದ ಮನೆಗಳನ್ನು ನೋಡಿ‌ ಕನ್ನ ಹಾಕುತ್ತಿದ್ದ. ಅದೇ ರೀತಿ ನಿನ್ನೆ ಸಹ ಖಾಲಿ ಮನೆಗಳ ಹುಡುಕಾಟದಲ್ಲಿ ಇರುವಾಗ ಗಸ್ತಿನಲ್ಲಿದ ಪೊಲೀಸರ ಕೈಗೆ ಸಿಕ್ಕಿಬಿದ್ದಿದಾನೆ. ಈ ವೇಳೆ ವಿಚಾರಿಸಿದಾಗ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ. ಸಾಗರ ಗ್ರಾಮಾಂತರ ಇನ್‌ಸ್ಟೆಕ್ಟರ್‌ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಳ್ಳನನ್ನು ಹಿಡಿದ ತಂಡಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.