ಕಾರವಾರ: ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ನಿವೃತ್ತ ಆರ್ಎಫ್ಒ ಒಬ್ಬರು, ಮಗನಂತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಸಮೀಪದ ರೈಲ್ವೆ ಹಳಿ ಮೇಲೆ ನಡೆದಿದೆ.
ಓದಿ: ನಾಳೆಯಿಂದ ಪೂರ್ಣ ಪ್ರಮಾಣದ ಸಾರಿಗೆ ಸೇವೆ: ಡಿಸಿಎಂ ಸವದಿ ಘೋಷಣೆ
ಅಂಕೋಲಾದ ಪಳ್ಳಿಕೇರಿ ನಿವಾಸಿ ಗಜಾನನ ನಾಯ್ಕ (70) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ ಎರಡು ವರ್ಷದ ಹಿಂದೆ 25 ವರ್ಷದ ಮಗ ವಿನಾಯಕ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ತಂದೆ ಇಂದು ಹಟ್ಟಿಕೇರಿ ಸಮೀಪದ ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯಲ್ಲಿ ಗಜಾನನ ಅವರ ರುಂಡ - ಮುಂಡ ಬೇರ್ಪಟ್ಟಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.