ETV Bharat / crime

ಒಂಟಿ ತೋಳದ ಮಾದರಿಯಲ್ಲಿ ದಾಳಿ; ಕೊಯಮತ್ತೂರು ಕಾರ್​ ಸ್ಫೋಟದ ತನಿಖೆ ವೇಳೆ ಮಹತ್ವದ ಅಂಶ ಬೆಳಕಿಗೆ!

ಉಕ್ಕಡಂ ಕಾರ್ ಸ್ಫೋಟವು ಒಂಟಿ ತೋಳದ ದಾಳಿ ವಿಧಾನವನ್ನು ಹೋಲುತ್ತದೆ ಎಂದು ಕೊಯಮತ್ತೂರು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

author img

By

Published : Oct 29, 2022, 9:25 AM IST

Coimbatore blast is similar to the "lone wolf attack" method
ಒಂಟಿ ತೋಳದ ದಾಳಿ ರೀತಿಯಲ್ಲಿ ಕೊಯಮತ್ತೂರು ಕಾರ್​ ಸ್ಫೋಟ

ಕೊಯಮತ್ತೂರು: ಕೊಯಮತ್ತೂರು ಪೊಲೀಸರು ಅಕ್ಟೋಬರ್ 23 ರಂದು ನಡೆದ ಕಾರ್ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರು ಜನರನ್ನು ಬಂಧಿಸಿದ್ದಾರೆ. ಈ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿ ಸ್ಫೋಟಕಗಳನ್ನು ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಶಂಕಿಸಲಾಗಿದೆ.

ಬಂಧಿತ ಆರೋಪಿಗಳನ್ನು ಮೊಹಮ್ಮದ್ ಧಾಲ್ಹಾ, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ರಿಯಾಸ್, ಫಿರೋಜ್ ಇಸ್ಮಾಯಿಲ್, ಮೊಹಮ್ಮದ್ ನವಾಜ್ ಇಸ್ಮಾಯಿಲ್ ಮತ್ತು ಅಫ್ಸರ್ ಖಾನ್ ಅಲಿಯಾಸ್ ಅಪ್ಸರ್ ಖಾನ್ ಎಂದು ಗುರುತಿಸಲಾಗಿದೆ. ಈ ಎಲ್ಲ ಬಂಧಿತರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಕೊಯಮತ್ತೂರು ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.

Coimbatore blast is similar to the

ಕಾರು ಸ್ಫೋಟದ ಘಟನೆ ಒಂಟಿ ತೋಳ ಮಾಡುವ ದಾಳಿ ವಿಧಾನವನ್ನು ಹೋಲುತ್ತದೆ ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ಜಮೀಶಾ ಮುಬೀನ್ ತನ್ನ ನಿಕಟ ಸಂಬಂಧಿಗಳಾದ ಅಜರುದ್ದೀನ್ ಮತ್ತು ಅಫ್ಸರ್ ಖಾನ್ ಜೊತೆಗೆ ಇತ್ತೀಚೆಗೆ ಕೊಟ್ಟೈಮೇಡು ಕೋನಿಯಮ್ಮನ್ ದೇವಸ್ಥಾನ ಸೇರಿದಂತೆ ನಗರದ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದ್ದರು ಎಂಬ ವಿಷಯವೂ ತನಿಖೆ ವೇಳೆ ಬಯಲಿಗೆ ಬಂದಿದೆ.

ದೇವಸ್ಥಾನದ ಮೇಲೆ ದಾಳಿ ನಡೆಸುವ ಉದ್ದೇಶದಿಂದಲೇ ಈ ಆತ್ಮಹತ್ಯಾ ಬಾಂಬ್​​ ದಾಳಿ ನಡೆದಿರಲೂ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನು ಓದಿ: ಕಟ್ಟಡದಿಂದ ಬಿದ್ದ ಯುವಕನಿಗೆ ಚಿಕಿತ್ಸೆ ಸಿಗದೇ ಸಾವು.. ವೈದ್ಯರ ವಿರುದ್ಧ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.