ಭಟ್ಕಳ: ಅಕ್ರಮವಾಗಿ ದನದ ಮಾಂಸವನ್ನು ಇನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಶಿರಾಲಿ ಚೆಕ್ ಪೋಸ್ಟ್ನಲ್ಲಿ ಕಾರನ್ನು ಅಡ್ಡಗಟ್ಟಿ ದನದ ಮಾಂಸ ವಶಕ್ಕೆ ಪಡೆದು, ಇಬ್ಬರು ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಓದಿ: ಸೋಂಕು ಹೆಚ್ಚಳ: ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ- ಸಿಎಂ,ಆರೋಗ್ಯ ಸಚಿವರಿಗೆ ಪತ್ರ ಬರೆದ ದೇವೇಗೌಡರು
ಬಂಧಿತ ಆರೋಪಿಗಳು ಹಾವೇರಿ ಮೂಲದ ಸಾಧಿಕ ಲೋಹಾರ್ ಹಾಗೂ ಮೊಹಮ್ಮದ್ ರಿಜ್ವಾನ್ ಮನವಳ್ಳಿ ಎಂದು ತಿಳಿದು ಬಂದಿದೆ. ಇಬ್ಬರು ಸಿಲ್ವರ್ ಬಣ್ಣದ ಇನೋವಾ ಕಾರಿನಲ್ಲಿ ಸುಮಾರು 80 ಸಾವಿರ ರೂ. ಮೌಲ್ಯದ 400 ಕೆಜಿ ಗೋ ಮಾಂಸವನ್ನು ಸಾಗಾಟ ಮಾಡುತ್ತಿರುವಾಗ ಶಿರಾಲಿ ಚೆಕ್ ಪೋಸ್ಟ್ನಲ್ಲಿ ಕಾರನ್ನು ಅಡ್ಡಗಟ್ಟಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.