ETV Bharat / city

ಹುದ್ದೆಗಾಗಿ ಜಟಾಪಟಿ... ಠಾಣೆ ಮೆಟ್ಟಿಲೇರಿದ ಕುವೆಂಪು ವಿವಿ ಕುಲಪತಿ-ಕುಲಸಚಿವ - ಕುವೆಂಪು ವಿಶ್ವವಿದ್ಯಾಲಯ

ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೀರಭದ್ರಪ್ಪ ಹಾಗೂ ಕುಲಸಚಿವ ಎಸ್.ಎಸ್.ಪಾಟೀಲ್ ಹುದ್ದೆ ವಿಚಾರವಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ‌ ದೂರು ದಾಖಲಿಸಿದ್ದಾರೆ.

Shivamogga
ಠಾಣೆ ಮೆಟ್ಡಿಲೇರಿದ ಕುವೆಂಪು ವಿವಿ ಕುಲಪತಿ-ಕುಲಸಚಿವ
author img

By

Published : May 13, 2021, 10:01 AM IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ ಹುದ್ದೆ ಜಟಾಪಟಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕುಲಪತಿ ಪ್ರೊ. ವೀರಭದ್ರಪ್ಪ ಹಾಗೂ ಕುಲಸಚಿವ ಎಸ್.ಎಸ್.ಪಾಟೀಲ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ‌ ದೂರು ದಾಖಲಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾನಿಲಯದ ಕುಲ ಸಚಿವ ಹುದ್ದೆಯಿಂದ ಎಸ್.ಎಸ್.ಪಾಟೀಲರನ್ನು ವರ್ಗಾವಣೆ ಮಾಡಿ, ಶ್ರೀಧರ್ ಎಂಬುವರನ್ನು ನೇಮಕ ಮಾಡಿ ಸೋಮವಾರ ಆದೇಶಿಸಲಾಗಿತ್ತು. ಶ್ರೀಧರ್​ ಅವರು ಮಂಗಳವಾರ ತಮ್ಮ ಅಧಿಕಾರ ಸ್ವೀಕಾರ ಮಾಡಿದರು. ಆದರೆ ಒಂದೇ ದಿನಕ್ಕೆ ಸರ್ಕಾರ ತನ್ನ ವರ್ಗಾವಣೆ ಆದೇಶವನ್ನು ಹಿಂಪಡೆದು, ಕುಲಸಚಿವ ಹುದ್ದೆಯಲ್ಲಿ ಎಸ್.ಎಸ್.ಪಾಟೀಲರನ್ನೇ ಮುಂದುವರೆಸಿತ್ತು.

ಬುಧವಾರ ಎಸ್.ಎಸ್.ಪಾಟೀಲ್​ ತಮ್ಮ ಕಚೇರಿಗೆ ಬಂದಿದ್ದಾರೆ. ಆದರೆ, ಕಚೇರಿ ಬೀಗದ ಕೀ ಶ್ರೀಧರ್ ಅವರ ಬಳಿಯಿತ್ತು. ಹೀಗಾಗಿ, ಕುಲಸಚಿವರು ತಮ್ಮ ಗಮನಕ್ಕೆ ತರದೇ ಕಚೇರಿಯ ಬೀಗ ಒಡೆದು ನಿಯಮ‌ ಮೀರಿ ಕಚೇರಿ ಪ್ರವೇಶಿಸಿದ್ದಾರೆ ಎಂದು ಕುಲಪತಿ ಪ್ರೊ. ವೀರಭದ್ರಪ್ಪ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕುಲಸಚಿವ ಎಸ್.ಎಸ್.ಪಾಟೀಲ್​, ಸರ್ಕಾರ‌ ನನ್ನ ವರ್ಗಾವಣೆ ರದ್ದು ಮಾಡಿದೆ. ಇದರಿಂದ ನಾನು ಅಧಿಕಾರಿ ಸ್ವೀಕಾರ ಮಾಡಿದ್ದೇನೆ. ನನ್ನ ಕರ್ತವ್ಯಕ್ಕೆ ಕುಲಪತಿ ಪ್ರೊ. ವೀರಭದ್ರಪ್ಪ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಓದಿ: ಲಾಕ್‌ಡೌನ್​ ನಡುವೆ ವಾರಕ್ಕೆ 2-3 ಕಲಾಪ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶಕ್ಕೆ ವಿರೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.