ಶಿವಮೊಗ್ಗ: ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರಿಗೆ ಶೀಘ್ರದಲ್ಲಿಯೇ ಪರಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಶಿಕಾರಿಪುರದಲ್ಲಿ ಮಾತನಾಡಿದ ಅವರು, ಕೆಎಫ್ ಡಿ ತುತ್ತಾಗಿ ಮೃತರಾದವರಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು. ಇನ್ನೂ ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು ಮಾಡಲಾಗಿದೆ ಎಂದರು. ಇದೇ ವೇಳೆ, ಸಿಎಂ ಶಿಕಾರಿಪುರದಿಂದ ದಾವಣಗೆರೆಗೆ ತೆರಳುವ ಮುನ್ನ ತಮ್ಮ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿ ಹಾಗೂ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.