ಶಿವಮೊಗ್ಗ: ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಇಡೀ ಜೀವನ ಪೂರ್ತಿ ನಿಮ್ಮ ಕೆಲಸಗಳನ್ನ ಮಾಡಿದರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಭದ್ರಾವತಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರ ಮಾಡಿ, ಮೆರವಣಿಗೆಯಲ್ಲಿ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಕ್ಷೇತ್ರದಲ್ಲಿ ಪಾದವನ್ನು ಇಟ್ಟಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದೊಂದಿಗೆ ಇನ್ನಷ್ಟು ಕೆಲಸ ಮಾಡುತ್ತೇನೆ. ಕ್ರಮ ಸಂಖ್ಯೆ ಮೂರು ಕಮಲದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅಮಿತ್ ಶಾ ಅವರ ನೇತೃತ್ವದಲ್ಲಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೇ ಮಾಡುತ್ತೇವೆ. ಹಾಗಾಗಿ ಇಲ್ಲಿ ಸೇರಿರುವ ಎಲ್ಲಾ ಬಂಧುಗಳು ಕೂಡ ನಾನೇ ರಾಘವೇಂದ್ರ ಅಂದುಕೊಂಡು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ಪ್ರತಿ ಬೂತ್ನಲ್ಲಿಯೂ ಹತ್ತತ್ತೂ ಮತಗಳನ್ನ ಹೆಚ್ಚಿಗೆ ಕೊಡಿಸುವ ಮೂಲಕ ರಾಘವೇಂದ್ರ ಅವರನ್ನ ಸಂಸದರನ್ನಾಗಿ ಮಾಡಿ, ನರೇಂದ್ರ ಮೋದಿಯವರನ್ನ ಪ್ರಧಾನಿಯಾಗಿ ಮಾಡೋಣ ಎಂದರು.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೆವು. ಆದರೆ ಭದ್ರಾವತಿಯಲ್ಲಿ ಸೋತಿದ್ದೆವು. ಈಗ ಭದ್ರಾವತಿಯಲ್ಲೂ ಸಹ ಗೆಲ್ಲತ್ತೇವೆ. ಅತಿ ಹೆಚ್ಚಿನ ಮತಗಳು ಭದ್ರಾವತಿಯಿಂದ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.