ETV Bharat / city

ತುಂಗಾ ಅಣೆಕಟ್ಟು ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ, ಮೀನುಗಾರರ ವಿರೋಧ - Eco tourism resorts

ಶಿವಮೊಗ್ಗ ತುಂಗಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಬೋಟಿಂಗ್​ಗೆ ಚಾಲನೆ ನೀಡಿದ ಬೆನ್ನಲ್ಲೇ ಮೀನುಗಾರರಿಂದ ವಿರೋಧ ವ್ಯಕ್ತವಾಗಿದೆ.

B. Y. Raghavendra
ಬಿ.ವೈ. ರಾಘವೇಂದ್ರ:
author img

By

Published : Jul 1, 2022, 6:52 PM IST

ಶಿವಮೊಗ್ಗ: ಜಂಗಲ್ ರೆಸಾರ್ಟ್ ವತಿಯಿಂದ ಇಂದು ತುಂಗಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಬೋಟಿಂಗ್​ಗೆ ಸಕ್ರೆಬೈಲು ಆನೆ ಬಿಡಾರದ ಹಿನ್ನೀರಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ಕೊಟ್ಟರು. ಬಳಿಕ ಬೋಟ್​ನಲ್ಲಿ ಕುಳಿತು ಹಿನ್ನೀರಿನಲ್ಲಿ ಒಂದು ಸುತ್ತು ಹಾಕಿ ಬಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಸಕ್ರೆಬೈಲು ಜಂಗಲ್ ರೆಸಾರ್ಟ್​ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಈಗ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ರೆಸಾರ್ಟ್​ನಲ್ಲಿ ಕೇವಲ ವಸತಿಗೆ ಮಾತ್ರ ಅವಕಾಶ ಇತ್ತು. ಈಗ ಬೋಟಿಂಗ್​ಗೂ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಈ ಭಾಗದಲ್ಲಿ ಪ್ರವಾಸಿಗರು ಹೆಚ್ಚು ಬರುವ ಸಾಧ್ಯತೆ ಇದೆ ಎಂದರು.

ತಲೆಗೆ ಗಾಯ ಮಾಡಿಕೊಂಡ ಸಂಸದ: ಹಿನ್ನೀರಿನಲ್ಲಿ ಪ್ರಯಾಣ ಮಾಡಿ ಬಂದು ಬೋಟ್​ನಿಂದ ಇಳಿಯುವಾಗ ರಾಘವೇಂದ್ರ ಅವರ ತಲೆಗೆ ಬೋಟ್​ನ ಮೊಳೆ ತಾಗಿ ಸಣ್ಣ ಗಾಯವಾಯಿತು.

ಬೋಟಿಂಗ್​ಗೆ ವಿರೋಧ: ಬೋಟಿಂಗ್​ ಮಾಡುವುದರಿಂದ ಮೀನಿಗೆ ಬಲೆ ಹಾಕುವುದು ಕಷ್ಟ. ಮೀನುಗಳು ಮೊಟ್ಟೆ ಇಡುವುದಿಲ್ಲ ಎಂದು ಸಂಘದ ಕಾರ್ಯದರ್ಶಿ ಮಹೇಶ್ ತಿಳಿಸಿದರು.

ಜಂಗಲ್ ರೆಸಾರ್ಟ್

ಈ ಹಿಂದೆಯೂ ಇಲ್ಲಿ ಬೋಟಿಂಗ್​ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತ ಮೀನುಗಾರಿಕೆಗೆ ತೊಂದರೆ ಆಗುತ್ತದೆ ಮತ್ತು ನಗರಕ್ಕೆ ಇಲ್ಲಿಂದಲೇ ಪೂರೈಕೆಯಾಗುವ ಕುಡಿಯುವ ನೀರಿಗೆ ಆಯಿಲ್​, ಡೀಸೆಲ್​ ಸೇರುತ್ತದೆ ಎಂದು ರದ್ದು ಮಾಡಿತ್ತು.

ಇದನ್ನೂ ಓದಿ: ಓದಲು ಸರಿಯಾದ ಕಟ್ಟಡವೇ ಇಲ್ಲ: ವಿದ್ಯಾರ್ಥಿಗಳಿಗೆ ಬಯಲಲ್ಲೇ ಪಾಠ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.