ETV Bharat / city

ಶಿವಮೊಗ್ಗದ ಈ ಕುಟುಂಬದಲ್ಲಿ 400 ವರ್ಷಗಳಿಂದ ಗೌರಿ ಪ್ರತಿಷ್ಠಾನ - ಶಿವಮೊಗ್ಗದ ಈ ಕುಟುಂಬದಲ್ಲಿ 400 ವರ್ಷಗಳಿಂದ ಗೌರಿ ಪ್ರತಿಷ್ಠಾನ

ಗೌರಿ ಹಬ್ಬದ ದಿನ ಜಗದೀಶ್ ಅವರಿಗೆ ಮಗಳು ಹುಟ್ಟಿದ ಕಾರಣ ಮಗಳಿಗೆ ಗೌರಿ ಅಂತಾ ಹೆಸರಿಟ್ಟಿದ್ದಾರೆ. ಈ ವರ್ಷ ಜಗದೀಶ್ ಮದುವೆಯಾಗಿ 25 ವರ್ಷ ಸಂದ ಕಾರಣ 106 ಸುಮಂಗಲಿಯರಿಗೆ ಬಾಗಿನ ನೀಡಿ ಗೌರವಿಸಿದ್ದಾರೆ. ಇವರ ಮನೆಗೆ ಕೋಡಿಮಠದ ಸ್ವಾಮಿಜೀಗಳು ಬಂದು ಗೌರಿ ದರ್ಶನ ಪಡೆದು ಪೂಜೆ ನಡೆಸಿರುವುದು ವಿಶೇಷವಾಗಿದೆ..

A Family celebrating Gowri pooja from 400 years in kunchenahalli, shimoga
ಶಿವಮೂಗ್ಗದ ಈ ಕುಟುಂಬದಲ್ಲಿ 400 ವರ್ಷಗಳಿಂದ ಗೌರಿ ಪ್ರತಿಷ್ಠಾನ
author img

By

Published : Sep 11, 2021, 8:35 PM IST

Updated : Sep 11, 2021, 10:10 PM IST

ಶಿವಮೊಗ್ಗ : ತಾಲೂಕಿನ ಕುಂಚೇನಹಳ್ಳಿಯ ಜಗದೀಶ್ ಎಂಬುವರ ಮನೆಯಲ್ಲಿ ಕಳೆದ 400 ವರ್ಷಗಳಿಂದ ಗೌರಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಮನೆಯಲ್ಲಿ ಗೌರಿ ಹಬ್ಬದ ದಿನ ಗೌರಿ ಮೂರ್ತಿ ಪ್ರತಿಷ್ಠಾಪಿಸುತ್ತಾರೆ. ಗಣಪತಿಗೆ ಮಾಡುವ ಸಿಂಗಾರದಂತೆ ಗೌರಿಗೂ ಹೂ ಹಾಗೂ ವಿವಿಧ ಬಣ್ಣಗಳಿಂದ ಸಿಂಗಾರ ಮಾಡುತ್ತಾರೆ.

ಶಿವಮೊಗ್ಗದ ಈ ಕುಟುಂಬದಲ್ಲಿ 400 ವರ್ಷಗಳಿಂದ ಗೌರಿ ಪ್ರತಿಷ್ಠಾನ

ಜಗದೀಶ್ ಅವರ ಕುಟುಂಬ ಸುಮಾರು 400 ವರ್ಷಗಳ ಹಿಂದೆ ವಿಜಯಪುರದಿಂದ ವಲಸೆ ಬಂದು ಕುಂಚೇನಹಳ್ಳಿಯಲ್ಲಿ ನೆಲೆಸಿದೆ. ಅಂದಿನಿಂದ ಇಂದಿನವರೆಗೂ ಇವರ ಕುಟುಂಬಸ್ಥರು ಗೌರಿ ಪೂಜೆ ನಡೆಸಿಕೊಂಡು ಬಂದಿದ್ದಾರೆ.

ಪ್ರತಿಷ್ಠಾಪಿಸಿರುವ ಗೌರಿ ಆನೆ‌ ಮೇಲೆ ಕುಳಿತು ಕೊಂಡಿದ್ದಾಳೆ. ಇದರಿಂದ ಈಕೆಗೆ ಗಜಗೌರಿ ಎಂದು ಕರೆಯುತ್ತಾರೆ. ಈ ಮೂರ್ತಿಯನ್ನು ಮರದಿಂದ ನಿರ್ಮಾಣ ಮಾಡಲಾಗಿದೆ. ಆದರೆ, ಮುಖ ಮಾತ್ರ ಮಣ್ಣಿನಿಂದ ಮಾಡಲಾಗಿದೆ.

ನಿರ್ಮಾಣವಾದಾಗ ಗೌರಿಮೂರ್ತಿ ಯಾವ ಬಣ್ಣದಲ್ಲಿತ್ತೋ ಈಗಲೂ ಅದೇ ಬಣ್ಣದಲ್ಲಿ ಇರುವುದು ವಿಶೇಷ. ಪ್ರತಿ ವರ್ಷ ಪೂಜೆ ಸಲುವಾಗಿ ಗ್ರಾಮಸ್ಥರು, ಸ್ನೇಹಿತರು, ಬಂಧು ಮಿತ್ರರನ್ನು ಪೂಜೆಗೆ ಆಹ್ವಾನಿಸುತ್ತಾರೆ.

ಗೌರಿ ಹಬ್ಬದ ದಿನ ಜಗದೀಶ್ ಅವರಿಗೆ ಮಗಳು ಹುಟ್ಟಿದ ಕಾರಣ ಮಗಳಿಗೆ ಗೌರಿ ಅಂತಾ ಹೆಸರಿಟ್ಟಿದ್ದಾರೆ. ಈ ವರ್ಷ ಜಗದೀಶ್ ಮದುವೆಯಾಗಿ 25 ವರ್ಷ ಸಂದ ಕಾರಣ 106 ಸುಮಂಗಲಿಯರಿಗೆ ಬಾಗಿನ ನೀಡಿ ಗೌರವಿಸಿದ್ದಾರೆ. ಇವರ ಮನೆಗೆ ಕೋಡಿಮಠದ ಸ್ವಾಮಿಜೀಗಳು ಬಂದು ಗೌರಿ ದರ್ಶನ ಪಡೆದು ಪೂಜೆ ನಡೆಸಿರುವುದು ವಿಶೇಷವಾಗಿದೆ.

Last Updated : Sep 11, 2021, 10:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.