ಮೈಸೂರು : ಟೊಮ್ಯಾಟೊ ಜ್ವರ ಒಂದು ವೈರಲ್ ಡಿಸಿಸ್ ಅಷ್ಟೇ.. ಕೆಲ ದಿನ ಇರುತ್ತದೆ, ಆಮೇಲೆ ಹೋಗುತ್ತೆ. ಈ ಕುರಿತು ಯಾರು ಭಯಪಡುವ ಅಗತ್ಯವಿಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕೇರಳದಲ್ಲಿ ಕಂಡುಬಂದ ಟೊಮ್ಯಾಟೊ ಜ್ವರದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೊಮ್ಯಾಟೊ ಜ್ವರದ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸದ್ಯಕ್ಕೆ ಕೇರಳದಲ್ಲಿ ಮಾತ್ರ ಕಂಡು ಬಂದಿದೆ. ಮೈಸೂರಿಗೆ ಇನ್ನೂ ಸಹ ಹರಡಿಲ್ಲ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.
ರಮ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷಗಳಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ. ಈ ವಿಚಾರವನ್ನ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಡಿ.ಕೆ.ಶಿವಕುಮಾರ್, ಎಂ.ಬಿ ಪಾಟೀಲ್ ಸೇರಿದಂತೆ ಹಿರಿಯ ನಾಯಕರು ಮಾತನಾಡಿದ್ದಾರೆ. ಅನವಶ್ಯಕವಾಗಿ ಈ ವಿಚಾರ ಮುಂದುವರೆಸುವುದು ಬೇಡ ಎಂದರು.
ಇದನ್ನೂ ಓದಿ: ಬೆಳಗಾವಿ ಮೆಡಿಕಲ್ ಕಾಲೇಜಲ್ಲಿ ಸೀನಿಯರ್ಸ್-ಜ್ಯೂನಿಯರ್ಸ್ ನಡುವೆ ಮಾರಾಮಾರಿ.. 15 ವಿದ್ಯಾರ್ಥಿಗಳು ಸಸ್ಪೆಂಡ್