ಮೈಸೂರು: ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಮೈಸೂರಿಗೆ ಬರುವವರ ಆರೋಗ್ಯ ತಪಾಸಣೆ ಮಾಡುವ ಸ್ಥಳವನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪರಿಶೀಲಿಸಿದರು.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಸಂತೇಮಾಳ ಮತ್ತು ಮೂಗೂರು ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಸಾರ್ವಜನಿಕರಿಗೆ ವೈದ್ಯಕೀಯ ತಪಾಸಣಾ ಸ್ಥಳ ಪರಿಶೀಲನೆ ನಡೆಸಿದರು. ಈಗಾಗಲೇ ಮೈಸೂರಿನಿಂದ ತಮ್ಮ ರಾಜ್ಯ ಹಾಗೂ ಜಿಲ್ಲೆಗಳಿಗೆ ತೆರಳಲು ಮತ್ತು ಮೈಸೂರಿಗೆ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ ಬರಲು ಜನರಿಗೆ ಸಂತಸವಾಗಿದೆ. ಲಾಕ್ಡೌನ್ನಿಂದ ಒಂದೇ ಕಡೆ 40 ದಿನಗಳನ್ನು ದೂಡಿರುವ ಕಾರ್ಮಿಕರಂತೂ ಹೈರಾಣಾಗಿದ್ದಾರೆ ಎಂದರು. ಅಲ್ಲದೆ ತಿ.ನರಸೀಪುರದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪಡಿತರ ಕಿಟ್ಅನ್ನು ಅಭಿರಾಮ್ ಜಿ. ಶಂಕರ್ ವಿತರಿಸಿದರು.
10 ಜನ ಆಗಮನ: ಮೈಸೂರಿಗೆ ಇಂದು ಕೇವಲ 10 ಜನರು ಮಾತ್ರ ಆಗಮಿಸಿದ್ದಾರೆ. ಅವರನ್ನು ರಿಂಗ್ ರಸ್ತೆ ಚೆಕ್ ಪೋಸ್ಟ್ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. 10 ಜನರನ್ನೂ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಇಂದು ಮೈಸೂರಿನಿಂದ ಯಾರೂ ಹೊರ ಜಿಲ್ಲೆಗೆ ಹೋಗಿಲ್ಲ. ಹೊರ ಜಿಲ್ಲೆಗೆ ತೆರಳುವವರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ.