ಮೈಸೂರು: ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಶಾಸಕ ಬಿ. ಹರ್ಷವರ್ಧನ್ ಹುಲ್ಲಹಳ್ಳಿ ಹೋಬಳಿಯ ಮಲ್ಲಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮತಕ್ಕಾಗಿ ಬರ್ತೀರಾ, ಗ್ರಾಮದ ಅಭಿವೃದ್ಧಿ ಮಾಡಕ್ಕಾಗಲ್ವ. ಶಾಲಾ ಮಕ್ಕಳು ಓಡಾಡೋದು ಹೇಗೆ? ಮಳೆ ಬಂದರೆ ರಸ್ತೇಲಿ ಓಡಾಡಕ್ಕಾಗಲ್ಲ. ಕುಡಿವ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ನಿಮ್ಮ ಕಾರ್ಯಕ್ರಮಗಳು ಇದ್ದರೆ ಮಾತ್ರ ಇಲ್ಲಿಗೆ ಬರ್ತೀರಾ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಲ್ಲಹಳ್ಳಿ, ನಂಜನಗೂಡು ಭಾಗಕ್ಕೆ ರಸ್ತೆ ಇಲ್ಲ. ದುರಸ್ತಿ ಮಾಡ್ತೀವಿ ಅಂತೀರಾ, ಆ ಮೇಲೆ ಇತ್ತ ತಿರುಗಿಯೂ ನೋಡಲ್ಲ ಎಂದು ರಸ್ತೆಯಲ್ಲೇ ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಶಾಸಕರು ರಸ್ತೆಯನ್ನು ಸರಿ ಮಾಡಿಸಿದ ಬಳಿಕ ಮತ ಕೇಳಲು ಬರ್ತೀನಿ ಎಂದು ಹರ್ಷವರ್ಧನ್ ಹೇಳಿದರು.
ಓದಿ: ಏಕಾಏಕಿ ಕುಸಿದ ಕೆರೆ ಏರಿ.. ರಸ್ತೆಯಿಂದ ಕೆರೆಗೆ ಬಿದ್ದ ನಂದಿನಿ ಹಾಲಿನ ವಾಹನ