ಮೈಸೂರು: ನಮಗೆ 48 ಕೆ.ಎಲ್ ಆಕ್ಸಿಜನ್ ಬೇಕು. ಆದರೆ ಜಿಲ್ಲೆಯಲ್ಲೀಗ ಕೇವಲ 19 ಕೆ.ಎಲ್ ಆಕ್ಸಿಜನ್ ಇದೆ. ಸದ್ಯ ಆಕ್ಸಿಜನ್ ಕೊರತೆಯಿದ್ದು, ಹೆಚ್ಚಿನ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಚಾಮರಾಜ ಕ್ಷೇತ್ರದ ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಲಾಗುತ್ತದೆ. ಅಲ್ಲಿನ ಕಾರ್ಪೋರೇಟರ್ಗಳಿಗೆ 5 ಲಕ್ಷ ಹಣ ನೀಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಯಾನಿಟೈಸ್ ಮಾಡಲು ಸೂಚಿಸುತ್ತೇವೆ. ಜೊತೆಗೆ ಕ್ಷೇತ್ರದ ಶಾಸಕರನ್ನು ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾಗಿ ಮಾಡುತ್ತೇವೆ. ಈ ಶಾಸಕರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಕೋವಿಡ್ ವಿಚಾರದಲ್ಲಿ ಜನರು ಪ್ಯಾನಿಕ್ ಆಗುತ್ತಿದ್ದಾರೆ. ಎಲ್ಲರಿಗೂ ಆಕ್ಸಿಜನ್ ಬೇಕು ಅಂದುಕೊಳ್ಳುತ್ತಿದ್ದಾರೆ. ಇದು ತಪ್ಪು. ಸಾಮಾನ್ಯವಾಗಿ ಮನೆಯಲ್ಲೇ ಚಿಕಿತ್ಸೆ ಪಡೆದರೆ ಈ ಸಮಸ್ಯೆ ತಪ್ಪಲಿದೆ. ಸಮಸ್ಯೆಯಾದವರಿಗೆ ಮಾತ್ರ ಆಕ್ಸಿಜನ್ ಬಳಸಿದರೆ ಒಳ್ಳೆಯದು ಎಂದರು.
ಓದಿ: ಆರೋಪಗಳಿಂದ ಬಹಳ ನೊಂದಿದ್ದೇನೆ: ಭಾವುಕರಾದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ