ETV Bharat / city

ಮೈಸೂರಿನಲ್ಲಿ ವೀಕೆಂಡ್​ ಕರ್ಫ್ಯೂಗೆ ಹೋಟೆಲ್ ಮಾಲೀಕರ ಸಂಘ ವಿರೋಧ, ತೆರವಿಗೆ ಆಗ್ರಹ

author img

By

Published : Jan 6, 2022, 4:57 PM IST

ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇರುವುದರಿಂದ ಕರ್ಫ್ಯೂ ಅಗತ್ಯವಿರಲಿಲ್ಲ. ಹಾಗಾಗಿ ಈ ಕರ್ಫ್ಯೂ ಅವೈಜ್ಞಾನಿಕ ಎಂದು ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದರು.

mysore
ವೀಕೆಂಡ್

ಮೈಸೂರು: ನೈಟ್ ಹಾಗೂ ವೀಕೆಂಡ್​ ಕರ್ಫ್ಯೂ ಹೇರಿರುವುದು ಅವೈಜ್ಞಾನಿಕ. ಕೂಡಲೇ ಇದನ್ನು ತೆರವು ಮಾಡಬೇಕು ಎಂದು ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಒತ್ತಾಯಿಸಿದರು.

ನಗರದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇರುವುದರಿಂದ ಕರ್ಫ್ಯೂ ಅಗತ್ಯವಿರಲಿಲ್ಲ. ಹಾಗಾಗಿ ಈ ಕರ್ಫ್ಯೂ ಅವೈಜ್ಞಾನಿಕ ಎಂದು ಹೇಳಿದರು.

ಮೈಸೂರು ಪ್ರವಾಸೋದ್ಯಮದ ಜಿಲ್ಲೆ. ಹಾಗಾಗಿ ಪ್ರವಾಸಿಗರು ವೀಕೆಂಡ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ‌ ಮೈಸೂರಿಗೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮವನ್ನು ನೆಚ್ಚಿಕೊಂಡು ವ್ಯಾಪಾರಸ್ಥರು, ಮತ್ತು ಹೋಟೆಲ್ ಉದ್ಯಮದವರು‌ ಜೀವನ ನಡೆಸುತ್ತಾರೆ. ಸರ್ಕಾರ ವೀಕೆಂಡ್​ ಕರ್ಫ್ಯೂ ವಿಧಿಸಿರುವುದರಿಂದ ಹೋಟೆಲ್ ಉದ್ಯಮಕ್ಕೆ ತುಂಬಾ ತೊಂದರೆಯಾಗುತ್ತದೆ ಎಂದು ಹೇಳಿದರು.

ಹೋಟೆಲ್ ಉದ್ಯಮ ಈಗಾಗಲೇ ನೆಲ ಕಚ್ಚಿದೆ. ಆದರೂ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಜನರ ಆರೋಗ್ಯದ ಜೊತೆ ಜೀವನ ನಡೆಸುವುದೂ ಮುಖ್ಯವಾಗಿದೆ. ಹೀಗಾಗಿ ಕರ್ಫ್ಯೂ ಹೇರುತ್ತಿದ್ದರೆ ಜೀವನ ಮಾಡುವುದು ಹೇಗೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಹಾಗಾಗಿ ಸರ್ಕಾರ ಅರ್ಥ ಮಾಡಿಕೊಂಡು ಎಲ್ಲಿ ಹೆಚ್ಚು ಕೋವಿಡ್ ಕೇಸ್​ಗಳು ಇವೆಯೋ ಅಲ್ಲಿ ಲಾಕ್​ಡೌನ್ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: Omicron scare: ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ.. ಆದಾಯ ಖೋತಾ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.