ETV Bharat / city

ನೀರಲ್ಲಿ ಬರೇ ಮೋಜು ಬೇಡ,ಈ ದೇಗುಲಗಳನ್ನೂ ಒಮ್ಮೆ ನೋಡಿ! ವಿಡಿಯೋ - undefined

ಇತಿಹಾಸ ಪ್ರಸಿದ್ಧ ತಲಕಾಡಿಗೆ ಬಂದು ಮೋಜು ಮಸ್ತಿ ಮಾಡುವುದನ್ನು ಬಿಟ್ಟು, ಇಲ್ಲಿನ ಐತಿಹಾಸಿಕ ದೇವಾಲಯಗಳನ್ನೂ ನೋಡಿ ಎಂದು ಸ್ಥಳೀಯ ಯುವಕರು ಮಾಡಿರುವ ವಿಡಿಯೋ ಅರ್ಥಪೂರ್ಣವಾಗಿದೆ.

ಐತಿಹಾಸಿಕ ದೇವಾಲಯ
author img

By

Published : Jun 6, 2019, 7:36 PM IST

ಮೈಸೂರು: ತಲಕಾಡಿಗೆ ಬರುವ ಪ್ರವಾಸಿಗರು ಕಾವೇರಿ ನದಿ ನೀರಲ್ಲಿ ಮೋಜು ಮಸ್ತಿ‌ ಮಾಡಿ ಹಿಂತಿರುಗಬೇಡಿ. ಗತಕಾಲದ ವೈಭವದ ಇತಿಹಾಸ ಸಾರುವ ಇಲ್ಲಿನ ಸುಪ್ರಸಿದ್ಧ ದೇವಸ್ಥಾನಗಳಿಗೂ ಭೇಟಿ ನೀಡಿ, ಶಿಲ್ಪ ವೈಭವ ಕಣ್ತುಂಬಿಕೊಳ್ಳಿ ಎಂದು ಸಾರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಮೈಸೂರು ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತಲಕಾಡು ನಿಸರ್ಗ ವೈಭವವನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ತಲಕಾಡಿನಲ್ಲಿ ಸಾವಿರ ವರ್ಷಗಳಷ್ಟು ಹಿಂದೆ ಗಂಗರು ಹಾಗೂ ಚಾಲುಕ್ಯ ರಾಜರುಗಳು ಕಟ್ಟಿಸಿದ ಪ್ರಸಿದ್ಧ ದೇವಾಲಯಗಳಾದ ವೈದ್ಯನಾಥೇಶ್ವರ, ಮರುಳೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಕೀರ್ತಿನಾರಾಯಣ ದೇವಾಲಯಗಳಿದ್ದು ಪುರಾತನ ಭಾರತದ ವೈಭವ ಸಾರುತ್ತಿವೆ. ಆದರೆ ಮೈಸೂರಿಗೆ ಬರುವ ಪ್ರವಾಸಿಗರು ತಲಕಾಡಿಗೆ ಬಂದು ಇಲ್ಲಿನ ಕಾವೇರಿ ನಿಸರ್ಗಧಾಮದಲ್ಲಿ ಮೋಜು-ಮಸ್ತಿ ಮಾಡಿ ದೇವಾಲಯಕ್ಕೆ ಹೋಗದೇ ವಾಪಸಾಗುತ್ತಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯುವಕರು ಡ್ರೋನ್​ ಮೂಲಕ ಇಲ್ಲಿನ ದೇವಾಲಗಳ ಸೌಂದರ್ಯವನ್ನು ಸಾರುತ್ತಿರುವ ವೀಡಿಯೋ

ವಿಡಿಯೋ ವೈರಲ್:
ಸುಂದರ ಶಿಲ್ಪ ವೈಭವವನ್ನು ಸಾರುವ ಇಂತಹ ದೇವಾಲಯಗಳನ್ನು ನೋಡದೇ ಪ್ರವಾಸಿಗರು ಬರೀ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ಕೊಟ್ಟು ಹಿಂತಿರುಗುವುದರಿಂದ ಸ್ಥಳೀಯ ಯುವಕರು ಬೇಸರಗೊಂಡಿದ್ದಾರೆ. ಹೀಗಾಗಿ ಪ್ರವಾಸಿಗರನ್ನು ಸೆಳೆಯಲು ಇಲ್ಲಿನ ಯುವಕರೇ ದೇವಾಲಯಗಳ ಸುತ್ತ ಇರುವ, ನೈಸರ್ಗಿಕ ಸೊಬಗು ಹಾಗೂ ದೇವಾಲಯದ ಒಳಗಿರುವ ಸುಂದರ ಶಿಲ್ಪ ಕಲೆಗಳನ್ನು ಒಮ್ಮೆ ನೋಡಿ ಎಂದು ಸಾರುವ ವಿಡಿಯೋವನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

Intro:ಮೈಸೂರು: ತಲಕಾಡಿಗೆ ಬರುವ ಪ್ರವಾಸಿಗರು ಕಾವೇರಿ ನದಿ ದಡದಲ್ಲಿ ಮೋಜು ಮಸ್ತಿ‌ ಮಾಡಿ ಹೋಗಬೇಡಿ, ದೇವಸ್ಥಾನಕ್ಕೂ ಭೇಟಿ ನೀಡಿ ಶಿಲ್ಪ ವೈಭೋಗವನ್ನು ಕಣ್ತುಂಬಿಕೊಳ್ಳಿ ಎಂದು ಸಾರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.Body:ಮೈಸೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತಲಕಾಡು ನಿಸರ್ಗ ವೈಭವವನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಪ್ರವಾಸಿಗರ ಗಮನ ಸೆಳೆಯುತ್ತಿದೆ.
ತಲಕಾಡಿನಲ್ಲಿ ಹಿಂದಿನ ಗಂಗ ಹಾಗೂ ಚಾಲುಕ್ಯ ರಾಜರು ಕಟ್ಟಿಸಿದ ಪ್ರಸಿದ್ಧ ದೇವಾಲಯಗಳಾದ
ವೈದ್ಯನಾಥೇಶ್ವರ, ಮರುಳೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಕೀರ್ತಿ ನಾರಾಯಣ ಈ ಐದು ದೇವಾಲಯಗಳು ತಲಕಾಡಿನಲ್ಲಿದ್ದು ಪುರಾತನ ವೈಭವವನ್ನು ಸಾರುತ್ತಿವೆ.‌
ಆದರೆ ಮೈಸೂರಿಗೆ ಬರುವ ಪ್ರವಾಸಿಗರು ತಲಕಾಡಿಗೆ ಬಂದು ಇಲ್ಲಿ ಕಾವೇರಿ ನಿಸರ್ಗಧಾಮದಲ್ಲಿ ಮೋಜು-ಮಸ್ತಿ ಮಾಡಿ ದೇವಾಲಯಕ್ಕೆ ಹೋಗದೆ ವಾಪಸ್ ಆಗುತ್ತಾರೆ.

ವಿಡಿಯೋ ವೈರಲ್:- ಸುಂದರ ಶಿಲ್ಪ ವೈಭವವನ್ನು ಸಾರುವ ಇಂತಹ ದೇವಾಲಯಗಳನ್ನು ನೋಡದೆ ಪ್ರವಾಸಿಗರು ಬರಿ ಕಾವೇರಿ ನಿಸರ್ಗಧಾಮಕ್ಕೆ ಭೇಟಿ ಕೊಟ್ಟು ವಾಪಸ್ ಆಗುತ್ತಿರುವುದರಿಂದ ಬೇಸರಗೊಂಡ ಸ್ಥಳೀಯ ಯುವಕರು ಇಲ್ಲಿಯ ದೇವಾಲಯದ ಸುತ್ತ ಇರುವ ನೈಸರ್ಗಿಕ ಸೊಬಗು ಹಾಗೂ ದೇವಾಲಯದ ಒಳಗಿರುವ ಸುಂದರ ಶಿಲ್ಪ ಕಲೆಗಳನ್ನು ಒಮ್ಮೆ ನೋಡಿ ಎಂದು ಸಾರುವ ವಿಡಿಯೋವನ್ನು ದ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.