ETV Bharat / city

ನಂಜುಂಡೇಶ್ವರನ ದರ್ಶನಕ್ಕೆ ಭಕ್ತ ಸಮೂಹ: ಒಂದೂವರೆ ತಿಂಗಳಲ್ಲಿ ಕೋಟಿ ಕೋಟಿ ದೇಣಿಗೆ ಸಂಗ್ರಹ

ಕೇವಲ ಒಂದೂವರೆ ತಿಂಗಳಲ್ಲಿ ನಂಜುಂಡೇಶ್ವರನ ಹುಂಡಿಯಲ್ಲಿ 1.41 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.

ನಂಜುಂಡೇಶ್ವರನ ದರ್ಶನಕ್ಕೆ ಭಕ್ತ ಸಮೂಹ
ನಂಜುಂಡೇಶ್ವರನ ದರ್ಶನಕ್ಕೆ ಭಕ್ತ ಸಮೂಹ
author img

By

Published : Jun 11, 2022, 10:41 AM IST

Updated : Jun 11, 2022, 12:35 PM IST

ಮೈಸೂರು: ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಅಂತೆಯೇ ಒಂದೂವರೆ ತಿಂಗಳಿನಲ್ಲಿ ನಂಜುಂಡೇಶ್ವರ ಹುಂಡಿಯಲ್ಲಿ ಕೋಟಿ ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

1.41 ಕೋಟಿ ಸಂಗ್ರಹ: ಭಕ್ತರು ನಗದು, ಚಿನ್ನಾಭರಣಗಳನ್ನು ಕಾಣಿಕೆಯಾಗಿ ನೀಡಿ ನಂಜುಂಡೇಶ್ವರನ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ಕೇವಲ ಒಂದೂವರೆ ತಿಂಗಳಲ್ಲಿ ದೇವಾಲಯದಲ್ಲಿನ 12 ಹುಂಡಿಗಳಲ್ಲಿ 1 ಕೋಟಿ 41 ಲಕ್ಷದ 15 ಸಾವಿರ ರೂ. ಭಕ್ತರು ದೇಣಿಗೆ ಸಂಗ್ರಹವಾಗಿದೆ. ಜೊತೆಗೆ 125 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ, 32 ವಿದೇಶಿ ಕರೆನ್ಸಿಗಳು, ನಿಷೇಧಿತ 1000 ರೂ. ಮುಖಬೆಲೆ 2 ನೋಟುಗಳು, 500 ರೂ.ಮುಖಬೆಲೆಯ 12 ನೋಟು ಸೇರಿದಂತೆ ಒಟ್ಟಾರೆ 8 ಸಾವಿರ ಹುಂಡಿಯಲ್ಲಿದೆ.

ನಂಜುಂಡೇಶ್ವರ ದೇವಸ್ಥಾನ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿ ಶುಕ್ರವಾರ ರಾತ್ರಿಯವರೆಗೆ ಹುಂಡಿ ಎಣಿಕೆ ಮಾಡಿದರು.

(ಇದನ್ನೂ ಓದಿ: 1.25 ಲಕ್ಷ ಮಾವಿನ ಹಣ್ಣಿನ ನೈವೇದ್ಯ: ವಿಶ್ವ ದಾಖಲೆ ಬರೆದ ವಡೋದರ ವ್ರಜಧಾಮ ಅಧ್ಯಾತ್ಮಿಕ ಸಂಕುಲ)

Last Updated : Jun 11, 2022, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.