ETV Bharat / city

ಬೆಳ್ತಂಗಡಿ: ವಿದ್ಯುತ್ ಶಾಕ್​ನಿಂದ ಮೂರ್ಛೆ ತಪ್ಪಿದ ಯುವಕ.. ಪೇಂಟರ್‌ ಸಮಯ ಪ್ರಜ್ಞೆಯಿಂದ ಉಳಿಯಿತು ಪ್ರಾಣ - Belthangady

ವಿದ್ಯುತ್​ ಶಾಕ್​ನಿಂದ ಮೂರ್ಛೆ ತಪ್ಪಿ ಬಿದ್ದಿದ್ದ ಯುವಕನ ಪ್ರಾಣ ಪೇಂಟರ್​ನ ಸಮಯಪ್ರಜ್ಞೆಯಿಂದ ಉಳಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ರಿಜ್ವನ್
ರಿಜ್ವನ್
author img

By

Published : Oct 2, 2021, 7:43 PM IST

Updated : Oct 2, 2021, 8:00 PM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ವಿದ್ಯುತ್ ತಂತಿಗೆ ತಾಗುವಂತಿದ್ದ ತೆಂಗಿನ ಗರಿ ತುಂಡರಿಸುವ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಮೂರ್ಛೆ ತಪ್ಪಿ ಬಿದ್ದ ಯುವಕನಿಗೆ ಸ್ಥಳೀಯ ಯುವಕನೊಬ್ಬ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ. ಬೆಳ್ತಂಗಡಿ ತಾಲೂಕಿನ ಕುಂಟಿನಿ ಬಳಿ ಈ ಘಟನೆ ನಡೆದಿದೆ.

ಕುಂಟಿನಿ ಸಮೀಪ ರಿಜ್ವನ್ ಎಂಬುವರು ತಮ್ಮ ಮನೆ ಸಮೀಪ ತೆಂಗಿನ ಮರದ ಗರಿ ವಿದ್ಯುತ್ ತಂತಿಗೆ ಬೀಳುವ ಸಂಭವವಿದ್ದುದನ್ನು ಗಮನಿಸಿ, ಅದನ್ನು ತುಂಡರಿಸಲು ಯತ್ನಿಸಿದ್ದಾರೆ. ಈ ವೇಳೆ ಗರಿ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ರಿಜ್ವನ್ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದು ಮೂರ್ಛೆ ತಪ್ಪಿದ್ದರು.

ಆಗ ಸಮೀಪದಲ್ಲಿಯೇ ಪೇಂಟಿಂಗ್​ ಕೆಲಸ ಮಾಡುತ್ತಿದ್ದ ಆಸೀಫ್​ ಎಂಬುವರಿ​ಗೆ ವಿಚಾರ ತಿಳಿದಿದೆ. ಕೂಡಲೇ ಅವರು ಸ್ಥಳಕ್ಕೆ ತೆರಳಿದ್ದಾರೆ. ರಿಜ್ವನ್ ಅವರನ್ನು ಬದುಕಿಸಲು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ತನ್ನ ಬಾಯಿಂದ ಕೃತಕ ಉಸಿರಾಟ ನೀಡಿ ಅವರ‌ನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಬಳಿಕ ರಿಜ್ವನ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸೀಫ್ ಅವರ ಈ ಮಾನವೀಯ ಹಾಗೂ ಸಮಯ ಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Oct 2, 2021, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.