ETV Bharat / city

ಹಾರ ಹಾಕುವಾಗ ಕೈ ತಾಗಿದ್ದಕ್ಕೆ ಕೋಪಗೊಂಡ ವಧು: ಬೆಳ್ತಂಗಡಿಯಲ್ಲಿ ಅಷ್ಟಕ್ಕೇ ಮುರಿದುಬಿತ್ತು ಮದುವೆ!

ಹಾರ ಹಾಕುವಾಗ ಕೈ ತಾಗಿತೆಂದು ನೆಪವೊಡ್ಡಿ ಕೋಪಗೊಂಡ ವಧು ಮದುವೆ ನಿರಾಕರಿಸಿದ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

Belthangady
ಬೆಳ್ತಂಗಡಿ
author img

By

Published : May 28, 2022, 6:51 AM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ಮದುವೆಯ ವೇಳೆ ಮದು ಮಗಳ ಕೊರಳಿಗೆ ಮದುಮಗ ಹಾರ ಹಾಕುವಾಗ ಕೈತಾಗಿತೆಂದು ಕೋಪಗೊಂಡು ಹಾರವನ್ನು ಕುತ್ತಿಗೆಯಿಂದ ಬಿಸಾಡಿ ವಧು ಮದುವೆ ನಿರಾಕರಿಸಿದ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿಯ ಕಲ್ಯಾಣ ಮಂಟಪವೊಂದರಲ್ಲಿ ನಾರಾವಿಯ ವರನಿಗೆ ಮೂಡುಕೊಣಾಜೆಯ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಸಂಪ್ರದಾಯದಂತೆ ವಧುವಿಗೆ ವರನು ಹಾರ ಹಾಕುವಾಗ ಅವಳ ಕೈಗೆ ವರನ ಕೈತಾಗಿತೆಂದು ಕೋಪಗೊಂಡ ವಧು ಹಾರವನ್ನು ಕುತ್ತಿಗೆಯಿಂದ ತೆಗೆದು ಬಿಸಾಡಿ ವರನಿಗೆ ಬೈದಿದ್ದಾಳೆ. ಈ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಉಂಟಾಗಿ ವರನ ಹಾಗೂ ವಧುವಿನ ಕಡೆಯವರ ನಡುವೆ ಗಲಾಟೆ ನಡೆದಿದೆ.

ನಂತರ ವೇಣೂರು ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಪಡಿಸಿದರೂ ಮದು ಮಗ ಮದುವೆಯನ್ನು ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ ಮದುವೆಗೆಂದು ಸುಮಾರು ಸಾಲ ಮಾಡಿದ್ದು ಖರ್ಚಾದ ಎಲ್ಲಾ ಹಣವನ್ನು ಹುಡುಗಿಯ ಕಡೆಯವರೇ ನೀಡಬೇಕು ಎಂದು ಹಠ ಹಿಡಿದಿದ್ದಾನೆ. ಈ ಬಗ್ಗೆ ಎರಡೂ ಕಡೆಯವರನ್ನೂ ಮನವೊಲಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಾಳಿ ಕಟ್ಟುವ ಶುಭ ವೇಳೆ ವಧು ಯುಟರ್ನ್​.. ಪಕ್ಕದ ಮನೆಯವನನ್ನೇ ಮದುವೆ ಆಗೋದಾಗಿ ಹೈಡ್ರಾಮಾ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.