ETV Bharat / city

ವಿರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕೋಟಿ ಚೆನ್ನಯ್ಯ ಜನ್ಮಸ್ಥಾನ ಟ್ರಸ್ಟ್ ಸದಸ್ಯರು

author img

By

Published : Jan 30, 2021, 7:39 PM IST

ಪಡುಮಲೆ ಕ್ಷೇತ್ರ ಜೀಣೋದ್ಧಾರಗೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿರೇಂದ್ರ ಹೆಗ್ಗಡೆಯವರು, ತಿರುಮಲೆ, ಶಬರಿಮಲೆಯಂತೆ ಪಡುಮಲೆಯೂ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದೆ ಎಂದರು..

Koti Chennaiyya Trust member
ವಿರೇಂದ್ರ ಹೆಗ್ಗಡೆ ಭೇಟಿ ಮಾಡಿದ ಚೆನ್ನಯ್ಯ ಟ್ರಸ್ಟ್ ಸದಸ್ಯರು

ಪುತ್ತೂರು : ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಸದಸ್ಯರು ಕಿಯೋನಿಕ್ಸ್ ಅಧಕ್ಷ ಹರಿಕೃಷ್ಣ ಬಂಟ್ವಾಳ್ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು.

ಪಡುಮಲೆ ಕ್ಷೇತ್ರ ಜೀಣೋದ್ಧಾರಗೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿರೇಂದ್ರ ಹೆಗ್ಗಡೆಯವರು, ತಿರುಮಲೆ, ಶಬರಿಮಲೆಯಂತೆ ಪಡುಮಲೆಯೂ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದೆ ಎಂದು ಹೇಳಿದರು.

ಬಳಿಕ ಧರ್ಮಸ್ಥಳದ ಕನ್ಯಾಡಿ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಟ್ರಸ್ಟ್​ನ ಸದಸ್ಯರು ಪಡುಮಲೆ ಕ್ಷೇತ್ರದ ಬಗ್ಗೆ ಹಾಗೂ ಮುಂದಿನ ಕಾರ್ಯ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ಟ್ರಸ್ಟ್‌ನ ಗೌರವಾಧ್ಯಕ್ಷರಾದ ವಿಟ್ಲದ ಮಾಜಿ ಶಾಸಕ ರುಕ್ಮಯ ಪೂಜಾರಿ, ಉಪಾಧ್ಯಕ್ಷ ವಿಜಯಕುಮಾರ್ ಸೊರಕೆ, ಪ್ರಕಾಶ್ ಅಂಚನ್, ಶೇಖರ್ ನಾರಾವಿ, ಶ್ರೀಧರ್ ಪಟ್ಲ, ರತನ್ ನಾಯಕ್, ವಿಶ್ವನಾಥ ಸುವರ್ಣ, ಕೋಶಾಧಿಕಾರಿ ಶೈಲೇಶ್ ಕುಮಾರ್, ನ್ಯಾಯವಾದಿಗಳಾದ ಭಗೀರಥ, ಅನಿಲ್ ಕುಮಾರ್ ಉಪ್ಪಿನಂಗಡಿ, ವೇದನಾಥ ಸುವರ್ಣ, ನವೀನ್ ರೈ ಪುತ್ತೂರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.