ETV Bharat / city

ಕಟೀಲು ಶ್ರೀ ದುರ್ಗಾಪರಮೇಶ್ವರಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ 'ಆರಟ' ಸೇವೆಯೊಂದಿಗೆ ತೆರೆ - ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಅಪರೂಪದ 'ಆರಟ' ಸೇವೆಯೊಂದಿಗೆ ತೆರೆ ಎಳೆಯಲಾಯಿತು..

Kateelu Durgaaparameshwari fair ended today
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ
author img

By

Published : Apr 22, 2022, 2:22 PM IST

ಮಂಗಳೂರು (ದಕ್ಷಿಣ ಕನ್ನಡ) : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಅಪರೂಪದ 'ಆರಟ' ಸೇವೆಯೊಂದಿಗೆ ತೆರೆ ಎಳೆಯಲಾಯಿತು. ಬೆಳ್ಳಂಬೆಳಗ್ಗೆ ಅತ್ತೂರು-ಕೊಡೆತ್ತೂರು ಜನರ ನಡುವೆ ನಡೆಯುವ 'ಅಗ್ನಿಕೇಳಿ'ಯನ್ನು ನೋಡಲು ಸಾವಿರಾರು ಭಕ್ತರು ದೇವಸ್ಥಾನದ ರಥಬೀದಿಯಲ್ಲಿ ಸೇರಿದ್ದರು.

ಆರಟವನ್ನು ತೂಡೆದಾರ ('ಅಗ್ನಿಕೇಳಿ' ಆಚರಣೆ) ಸೇವೆಯೆಂದೂ ಕರೆಯುತ್ತಾರೆ. ಯುದ್ಧದ ಸನ್ನಿವೇಶವನ್ನು ಇಲ್ಲಿ ಮರುಸೃಷ್ಟಿ ಮಾಡಲಾಗುತ್ತದೆ. ತೆಂಗಿನ ಗರಿಯ ಸೂಟೆಗೆ (ತೆಂಗಿನ ಗರಿಯ ಒಂದು ಹಿಡಿ) ಬೆಂಕಿ ಹಚ್ಚಿ ಒಬ್ಬರ ಮೇಲೊಬ್ಬರು ಎಸೆಯುತ್ತಾ ಬೆಂಕಿ ಯುದ್ಧ ನಡೆಸುತ್ತಾರೆ. ಈ ಸನ್ನಿವೇಶವು ಭಾರಿ ಯುದ್ಧದ ಸನ್ನಿವೇಶವನ್ನು ನೆನಪಿಸುತ್ತದೆ. ಐತಿಹ್ಯದ ಪ್ರಕಾರ ಲೋಕಕಂಟಕನಾದ ಅರುಣಾಸುರನ ಸಂಹರಿಸಿದ ಕಟೀಲು ಶ್ರೀ ದುರ್ಗೆಯನ್ನು ಬೆಂಕಿಯಿಂದಲೇ ಸ್ವಾಗತ ಕೋರಲಾಗಿತ್ತಂತೆ. ಇದನ್ನೇ ಈಗ ತೂಟೆದಾರ ಸೇವೆ ಎನ್ನಲಾಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ

ಈ ಅಗ್ನಿಕೇಳಿಯಲ್ಲಿ ಅತ್ತೂರು-ಕೊಡೆತ್ತೂರು ಎರಡು ಊರಿನ ಜನರು ಪಾಲ್ಗೊಳ್ಳುತ್ತಾರೆ. ತೂಟೆದಾರದಲ್ಲಿ ಭಾಗವಹಿಸುವವರಿಗೆ ಕುಂಕುಮ ಹಾಗೂ ಹೂವು ನೀಡಲಾಗುತ್ತದೆ. ಈ ಆಟದಲ್ಲಿ ಭಾಗವಹಿಸುವವರೆಲ್ಲರೂ ಗಂಡಸರಾದರೂ ಹೂ ಮುಡಿಯುತ್ತಾರೆ. ದೇಹಕ್ಕೆ ಕುಂಕುಮ ಲೇಪನ ಮಾಡಿಕೊಳ್ಳುತ್ತಾರೆ. ಅಗ್ನಿಕೇಳಿಯಲ್ಲಿ ಬೆಂಕಿಯ ಸೂಟೆಯನ್ನು ಮೈಮೇಲೆ ಎಸೆಯಲಾಗುತ್ತಾದರೂ ತೂಟೆದಾರದಲ್ಲಿ ಈವರೆಗೆ ಯಾವುದೇ ಅನಾಹುತಗಳು ನಡೆದ ಉದಾರಹಣೆಗಳಿಲ್ಲ.

ಇದನ್ನೂ ಓದಿ: ರಾಜ್ಯ-ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ..

ತೂಟೆದಾರದಲ್ಲಿ ಭಾಗವಹಿಸುವವರೆಲ್ಲರೂ ಆಪ್ತರಾದರೂ ತೂಟೆದಾರದ ಸಂದರ್ಭ ಅಕ್ಷರಶಃ ವೈರಿಗಳಂತೆ ಕಾದಾಡುತ್ತಾರೆ. ಮೂರು ಸುತ್ತು ಬೆಂಕಿಯ ಪಂಜನ್ನು ಎಸೆಯುವ ಸನ್ನಿವೇಶ ನಡೆಯುತ್ತದೆ. ದೇವಾಲಯದ ರಥ ಬೀದಿಯಲ್ಲೊಮ್ಮೆ ಎರಡು ತಂಡಗಳು ಒಬ್ಬರ ಮೇಲೊಬ್ಬರು ಉರಿಯುವ ಪಂಜುಗಳನ್ನು ಎಸೆಯುತ್ತಾರೆ.

ಹೀಗೆ ಮೂರು ಸುತ್ತು ಪಂಜು ಎಸೆಯುವ ತೂಟೆದಾರ ಸೇವೆ ನಡೆಯುತ್ತದೆ. ಇದು ಅತಿರೇಕಕ್ಕೆ ಹೋಗದಂತೆ ಸಂಬಂಧಪಟ್ಟ ಗುತ್ತು ಬರ್ಕೆಯವರು ಹತೋಟಿಗೆ ತರುತ್ತಾರೆ. ಇದೊಂದು ರೌದ್ರ ಮನೋರಂಜನಾತ್ಮಕ ಸನ್ನಿವೇಶವಾದರೂ, ಇದರ ಹಿಂದೆ ಧಾರ್ಮಿಕ ಆಚರಣೆಯ ಹಿನ್ನೆಲೆಯಿದೆ. ದೂರದೂರುಗಳಿಂದ ಬಂದ ಭಕ್ತರು ಈ ತೂಟೆದಾರ ಸೇವೆಯನ್ನು ಕಣ್ತುಂಬಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.