ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಂಡಿರುವ ಡೆಂಘೀ ಕಾಯಿಲೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಸಮಿತಿ ಕಾರ್ಯಕರ್ತರು ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ ಕಾರ್ಯಕ್ರಮ ಇಂದು ನಗರದ ಮಲ್ಲಿಕಟ್ಟೆಯ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯರಾಮ್, 'ಡೆಂಘೀವಿನಲ್ಲಿ ನಾಲ್ಕು ವಿಧದ ವೈರಸ್ಗಳಿವೆ. ಇದು ಡೆಂಘೀ ಸಾಮಾನ್ಯ ಜ್ವರ, ರಕ್ತಸ್ರಾವ ಜ್ವರ ಹಾಗೂ ಪ್ರಜ್ಞೆ ತಪ್ಪುವ ಜ್ವರ. ಸಾಮಾನ್ಯ ಜ್ವರಕ್ಕಿಂತ ಉಳಿದೆರಡು ಜ್ವರಗಳು ತುಂಬಾ ಅಪಾಯಕಾರಿ. ಅಪಾಯಕಾರಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಒಂದು ವೇಳೆ ಚಿಕಿತ್ಸೆ ತೆಗೆದುಕೊಳ್ಳಲು ಹಿಂಜರಿದರೆ ಸಾವು ಸಂಭವಿಸುವ ಸಾಧ್ಯತೆಗಳೂ ಹೆಚ್ಚಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ನಿಂದ ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ.. - ಸೊಳ್ಳೆ ಪರದೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಂಡಿರುವ ಡೆಂಘೀ ಕಾಯಿಲೆ ಕುರಿತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಸಮಿತಿ ಕಾರ್ಯಕರ್ತರು ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಲ್ಬಣಗೊಂಡಿರುವ ಡೆಂಘೀ ಕಾಯಿಲೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಸಮಿತಿ ಕಾರ್ಯಕರ್ತರು ಡೆಂಘೀ ನಿಯಂತ್ರಣ ಜಾಗೃತಿ ಅಭಿಯಾನ ಕಾರ್ಯಕ್ರಮ ಇಂದು ನಗರದ ಮಲ್ಲಿಕಟ್ಟೆಯ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯರಾಮ್, 'ಡೆಂಘೀವಿನಲ್ಲಿ ನಾಲ್ಕು ವಿಧದ ವೈರಸ್ಗಳಿವೆ. ಇದು ಡೆಂಘೀ ಸಾಮಾನ್ಯ ಜ್ವರ, ರಕ್ತಸ್ರಾವ ಜ್ವರ ಹಾಗೂ ಪ್ರಜ್ಞೆ ತಪ್ಪುವ ಜ್ವರ. ಸಾಮಾನ್ಯ ಜ್ವರಕ್ಕಿಂತ ಉಳಿದೆರಡು ಜ್ವರಗಳು ತುಂಬಾ ಅಪಾಯಕಾರಿ. ಅಪಾಯಕಾರಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಒಂದು ವೇಳೆ ಚಿಕಿತ್ಸೆ ತೆಗೆದುಕೊಳ್ಳಲು ಹಿಂಜರಿದರೆ ಸಾವು ಸಂಭವಿಸುವ ಸಾಧ್ಯತೆಗಳೂ ಹೆಚ್ಚಿದೆ ಎಂದು ಎಚ್ಚರಿಸಿದರು.
ಈ ಸಂದರ್ಭ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯರಾಮ್ ಮಾತನಾಡಿ, ಡೆಂಗ್ಯು ಹಗಲು ಕಚ್ಚುವ ಈಡೀಸ್ ಎಂಬ ಸೊಳ್ಳೆಯಿಂದ ಹರಡುತ್ತದೆ. ಈ ಸೊಳ್ಳೆಯು ಮನುಷ್ಯರಿಗೆ ಕಚ್ಚುವುದರಿಂದ ವೈರಸ್ ಸೋಂಕು ಹರಡಿ ಡೆಂಗ್ಯು ಬರುತ್ತದೆ. ಡೆಂಗ್ಯವಿನಲ್ಲಿ ನಾಲ್ಕು ವಿಧದ ವೈರಸ್ ಗಳಿವೆ. ಡೆಂಗ್ಯವಿನಲ್ಲಿ ಮೂರು ರೀತಿಯ ಕಾಯಿಲೆಗಳನ್ನು ನಾವು ಕಾಣಬಹುದು ಡೆಂಗ್ಯು ಸಾಮಾನ್ಯ ಜ್ವರ, ಡೆಂಗ್ಯು ರಕ್ತಸ್ರಾವದ ಜ್ವರ ಹಾಗೂ ಡೆಂಗ್ಯು ಪ್ರಜ್ಞೆ ತಪ್ಪುವ ಜ್ವರ. ಸಾಮಾನ್ಯ ಡೆಂಗ್ಯು ಜ್ವರದಲ್ಲಿ ಯಾವುದೇ ಅಪಾಯ ಇಲ್ಲ. ಸಾಮಾನ್ಯ ಡೆಂಗ್ಯು ಜ್ವರದ ಲಕ್ಷಣ ಇದ್ದಕ್ಕಿದ್ದಂತೆ ಬರುವ ತೀವ್ರಸ್ವರೂಪದ ಜ್ವರ ಜೊತೆಗೆ ಮಾಂಸಖಂಡಗಳ ನೋವು, ಹಣೆಯಭಾಗದಲ್ಲಿ ನೋವು ಹಾಗೂ ಕಣ್ಣುಗುಡ್ಡೆಗಳಲ್ಲಿ ನೋವು. ಆದರೆ ಡೆಂಗ್ಯುವಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜ್ವರಕ್ಕೆ ಮಾತ್ರ ಔಷಧಿ ನೀಡಲಾಗುತ್ತದೆ. ಅಲ್ಲದೆ ಕಡ್ಡಾಯವಾಗಿ ಒಂದು ವಾರದ ರೆಸ್ಟ್ ಪಡೆದುಕೊಳ್ಳಬೇಕು. ಜೊತೆಗೆ ದ್ರವರೂಪದ ಆಹಾರ ಸೇವನೆ. ಇದಿಷ್ಟೇ ಸಾಕು. ಬೇರೆ ಯಾವ ಚಿಕಿತ್ಸೆಯೂ ಬೇಡ ಎಂದು ಹೇಳಿದರು.
Body:ರಕ್ತಸ್ರಾವದ ಜ್ವರದಲ್ಲಿ ಈ ಹಿಂದೆ ಹೇಳಿದ ಎಲ್ಲಾ ಡೆಂಗ್ಯುವಿನ ಲಕ್ಷಣಗಳು ಇರುತ್ತವೆ. ಅದರ ಜೊತೆಗೆ ಮುಖದಲ್ಲಿ ಕೆಂಪು ಹಾಗೂ ಎದೆ, ತೋಳಿನ ಬೆನ್ನಿನ ಭಾಗದಲ್ಲಿ ಕೆಂಪು ಕಾಣುತ್ತದೆ. ಅಲ್ಲದೆ ಸೂಜಿ ಮೊನೆ ಗಾತ್ರದಲ್ಲಿ ದಪ್ಪಗಾಗಿ ಕಾಣುತ್ತದೆ. ಕೆಲವರಲ್ಲಿ ಮೂಗು, ಒಸಡಿನಲ್ಲಿ ರಕ್ತ ಕಾಣುತ್ತದೆ. ಮೂತ್ರ ಕೆಂಪಗಾಗಬಹುದು, ಮಲವಿಸರ್ಜನೆ ಕಪ್ಪಾಗಬಹುದು. ಇದು ಅಪಾಯಕಾರಿ. ಈ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಜಯರಾಮ್ ಹೇಳಿದರು.
ಪ್ಲೇಟ್ಲೆಟ್ ಪರೀಕ್ಷೆಯನ್ನು ಮಾಡಲೇಬೇಕು ಎಂದಿಲ್ಲ. ಡೆಂಗ್ಯು ಬಂದಾಗ ಪ್ಲೇಟ್ಲೆಟ್ ಕಡಿಮೆಯಾದರೂ, ರೋಗಿಯನ್ನು ಸರಿಯಾಗಿ ನಿರ್ವಹಣೆ ಮಾಡಿದಾಗ ಅಷ್ಟೇ ವೇಗದಲ್ಲಿ ಪ್ಲೇಟ್ಲೆಟ್ ಏರಿಕೆಯಾಗುತ್ತದೆ. ಹಾಗೆಯೇ ರೋಗ ಬರದಂತೆ ಜಾಗ್ರತೆ ವಹಿಸಲು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೆ ಸಾಕು. ವಾರಕ್ಕೊಮ್ಮೆ ನಮ್ಮ ಸುತ್ತಲೂ ಪರೀಕ್ಷೆ ಮಾಡಿ ನೀರು ನಿಂತಿದ್ದರೆ ಅದನ್ನು ಬರಿದು ಮಾಡಿದರೆ ಸಾಕು ಸೊಳ್ಳೆ ಉತ್ಪತ್ತಿಯಾಗುವ ಲಾರ್ವಾ ಅದರಲ್ಲಿದ್ದಲ್ಲಿ ಅದು ನಾಶವಾಗುತ್ತದೆ. ಇದರಿಂದ ರೋಗ ಹರಡುವ ಪ್ರಮಾಣ ತನ್ನಿಂದ ತಾನಾಗಿಯೇ ಕಡಿಮೆಯಾಗುತ್ತದೆ. ಅಲ್ಲದೆ ಮುನ್ನೆಚ್ಚರಿಕೆಗಾಗಿ ನಾವು ಮೈಮುಚ್ಚುವ ಬಟ್ಟೆ ಧರಿಸಿ, ದೇಹದ ಭಾಗಗಳು ಹೊರಗಡೆ ಕಾಣುವಲ್ಲಿಗೆ ಒಡೊಮಸ್ ಆಯಿಂಟ್ ಮೆಂಟ್, ಕಹಿಬೇವಿನ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನೂ ಬಳಸಬಹುದು. ಅಲ್ಲದೆ ಸೊಳ್ಳೆಗಳು ಬರದಂತೆ ಧೂಪದ ಹೊಗೆ, ಕಹಿಬೇವಿನ ಹೊಗೆ, ಸೊಳ್ಳೆ ಬತ್ತಿ, ಗುಡ್ ನೈಟ್ ಮುಂತಾದವುಗಳನ್ನು ಬಳಸಬಹುದು ಎಂದು ಜಯರಾಮ್ ಜಾಗೃತಿ ಮೂಡಿಸಿದರು.
ಈ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೋಬೊ, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.
Reporter_Vishwanath Panjimogaru
Conclusion: