ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ನಡೆಯುವ ಶುಕ್ರವಾರದ ಪ್ರಾರ್ಥನೆಯನ್ನು ಬೇಗ ಮುಗಿಸಲಾಯಿತು.
ನಗರದ ಬಾವುಟ ಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಪ್ರತಿ ಶುಕ್ರವಾರ ಸಾವಿರಕ್ಕೂ ಅಧಿಕ ಮಂದಿ ಪ್ರಾರ್ಥನೆ ನೆರವೇರಿಸುತ್ತಾರೆ. ಆದರೆ ಇಂದು 100-200 ಮಂದಿ ಮಾತ್ರ ಪ್ರಾರ್ಥನೆ ನೆರವೇರಿಸಿದರು.
ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಪರಿಣಾಮ ಇಂದು ಎಲ್ಲಾ ಮಸೀದಿಗಳಲ್ಲಿಯೂ ಒಂದು ಗಂಟೆಗಳ ಕಾಲ ನಡೆಯುವ ಪ್ರಾರ್ಥನೆಯನ್ನು ದೀರ್ಘಗೊಳಿಸದೆ ಶೀಘ್ರವಾಗಿ ನೆರವೇರಿಸಲಾಯಿತು.