ಮಂಗಳೂರು: ಕರ್ಣಾಟಕ ಬ್ಯಾಂಕ್‌ಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಒಲಿದು ಬಂದಿದೆ. ‘ಕೆಬಿಎಲ್ ವಿಕಾಸ್’ ಎಂಬ ಪರಿವರ್ತನಾ ಪ್ರಕ್ರಿಯೆಯ ಫಲಶ್ರುತಿಯಾಗಿ 'ಡಿಎಕ್ಸ್ 2021- ಡಿಜಿಟಲ್ ಟ್ರಾನ್ಸ್ಫರ್ಮೇಷನ್ ಅವಾರ್ಡ್' ಅನ್ನು ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಂಸ್ಥೆಯಿಂದ ಪ್ರದಾನ ಮಾಡಲಾಗಿದೆ.
ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ ಬ್ಯಾಂಕ್ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ.ಎಂ.ಎಸ್ '2017ರಲ್ಲಿ ಕರ್ಣಾಟಕ ಬ್ಯಾಂಕ್ ‘ಕೆಬಿಎಲ್ ವಿಕಾಸ್’ ಎನ್ನುವ ಹೆಸರಿನಲ್ಲಿ ಪ್ರಾರಂಭಿಸಿದ ಸಮಗ್ರ ಪರಿವರ್ತನೆಯ ಪ್ರಕ್ರಿಯೆಯು, ಡಿಜಿಟಲ್ ವ್ಯವಹಾರಗಳ ಅನುಷ್ಠಾನದಲ್ಲಿ ಬ್ಯಾಂಕ್ ಸಕ್ರಿಯಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದರ ಜೊತೆಗೆ ನಮ್ಮ ಬ್ಯಾಂಕಿನ ಉತ್ಪನ್ನಗಳು ಹಾಗೂ ಪರ್ಯಾಯ ಸೇವಾ ವಾಹಿನಿಗಳಾದ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಇತ್ಯಾದಿಗಳು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ನ ಉತ್ತಮ ಅನುಭೂತಿ ನೀಡುತ್ತಿವೆ. ‘ಕೆಬಿಎಲ್ ವಿಕಾಸ್’ನ ಮುಂದಿನ ಭಾಗವಾಗಿ ಬ್ಯಾಂಕ್ ಇತ್ತೀಚೆಗೆ ‘ಕೆಬಿಎಲ್ ನೆಕ್ಸ್ಟ್' ಎನ್ನುವ ಹೊಸ ಡಿಜಿಟಲ್ ಪರಿವರ್ತನಾ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ನಮ್ಮ ಬ್ಯಾಂಕ್ ಭವಿಷ್ಯದ ಡಿಜಿಟಲ್ ಬ್ಯಾಂಕ್ ಆಗಿ ಹೊರಹೊಮ್ಮುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ; ಶ್ರೀಮಂತಿಕೆಯಲ್ಲಿ ಅದಾನಿ, ಅಂಬಾನಿ ನಂತರದ ಸ್ಥಾನಕ್ಕೆ ಇಳಿಕೆ..