ETV Bharat / city

ರಕ್ಷಾ ಬಂಧನ ಆಚರಣೆಗೆ ಆನ್​ಲೈನ್ ಟಚ್ ನೀಡಿದ ಅಂಚೆ ಇಲಾಖೆ; ಯೋಧರಿಗೂ ರಾಖಿ ಕಳುಹಿಸುವ ಅವಕಾಶ - ರಕ್ಷಾ ಬಂಧನ ಆಚರಣೆ

ಈ ಬಾರಿ ಕೊರೊನಾ ಅಡ್ಡಿಯಿಂದಾಗಿ ರಕ್ಷಾ ಬಂಧನ ಆಚರಣೆ ಕಷ್ಟವಾಗಿದೆ. ಈ ಸಂದರ್ಭದಲ್ಲಿ ರಕ್ಷಾಬಂಧನ ಸಂಭ್ರಮಿಸಲು ಅಂಚೆ ಇಲಾಖೆ ವ್ಯವಸ್ಥೆ ಮಾಡಿದೆ. ರಾಖಿ ಹಬ್ಬಕ್ಕೆ ಆನ್​ಲೈನ್ ಟಚ್ ನೀಡುವ ಮೂಲಕ ಅಂಚೆ ಇಲಾಖೆ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ..

Arrangement for Online Raksha Bandhana by Postal department
ರಕ್ಷಾ ಬಂಧನ
author img

By

Published : Jul 28, 2020, 4:02 PM IST

Updated : Jul 28, 2020, 7:04 PM IST

ಮಂಗಳೂರು: ದೇಶಾದ್ಯಂತ ಅಗಸ್ಟ್​ 3ರಂದು ರಕ್ಷಾ ಬಂಧನದ ಸಂಭ್ರಮವಿರುತ್ತದೆ. ಈ ಸಂದರ್ಭದಲ್ಲಿ ಸಹೋದರ, ಸಹೋದರಿಯರು ರಾಖಿ ಕಟ್ಟಿಸಿಕೊಂಡು ಸಂಭ್ರಮಪಡುತ್ತಾರೆ. ಎಲ್ಲಿಯೋ ಇರುವ ಸಹೋದರ, ಸಹೋದರಿಗೆ ರಾಖಿ ಕಳುಹಿಸಲು ಈ ಬಾರಿ ಕೊರೊನಾ ಅಡ್ಡಿಯಾಗಿದೆ. ಈ ಹಿನ್ನೆಲೆ ಭಾರತೀಯ ಅಂಚೆ ಇಲಾಖೆ ಆನ್​ಲೈನ್ ರಾಖಿ ಮಾರಾಟಕ್ಕೆ ಮುಂದಾಗಿದೆ.

ಸಹೋದರ‌, ಸಹೋದರಿಯರ ನಡುವೆ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುವ ರಕ್ಷಾ ಬಂಧನ ಹಬ್ಬ ಮತ್ತೆ ಬಂದಿದೆ. ಕೊರೊನಾ ಕಾರಣದಿಂದ ರಕ್ಷಾ ಬಂಧನ ಹಬ್ಬವನ್ನು ದೂರದಲ್ಲಿರುವ ಸಹೋದರ ಸಹೋದರಿಯರ ಜೊತೆಗೆ ಆಚರಿಸಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ಈ ಬಾರಿ ಹೊಸ ಪ್ರಯತ್ನ ಆರಂಭಿಸಿದೆ. ಆನ್​ಲೈನ್ ಮೂಲಕ ರಕ್ಷಾ ಬಂಧನವನ್ನು ಪ್ರೀತಿಪಾತ್ರರಿಗೆ ಕಳುಹಿಸುವ ಯೋಜನೆ ರೂಪಿಸಿದೆ. ಕರ್ನಾಟಕ ವೃತ್ತದ ಅಂಚೆ ಇಲಾಖೆ ಈ ಯೋಜನೆ ರೂಪಿಸಿದ್ದು, ಅದರಂತೆ https://karnatakapost.gov.in/Rakhi_Post/ ಜಾಲತಾಣದಲ್ಲಿ ರಾಖಿಯನ್ನು ಪ್ರೀತಿ ಪಾತ್ರರಿಗೆ ಕಳುಹಿಸಲು ಸಾಧ್ಯವಾಗಲಿದೆ.

ರಕ್ಷಾ ಬಂಧನಕ್ಕೆ ಆನ್​ಲೈನ್ ಟಚ್

ಇದರಲ್ಲಿ ರಿಕ್ವೆಸ್ಟ್/ರಿಜಿಸ್ಟ್ರೇಷನ್ ವಿಭಾಗದಲ್ಲಿ ರಾಖಿ ಕಳುಹಿಸುವವರ ವಿಳಾಸ, ಸಂಪರ್ಕ ಸಂಖ್ಯೆ ಬರೆದು ರಾಖಿ ವಿನ್ಯಾಸಗಳನ್ನು ಆಯ್ದುಕೊಳ್ಳಬೇಕಿದೆ. ಅದರ ಬಳಿಕ ರಾಖಿ ಸಂದೇಶಗಳು ಇದ್ದು ಅದರಲ್ಲಿ ಬೇಕಾದ ಸಂದೇಶ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸ್ವಂತ ಸಂದೇಶ ಬರೆಯಬಹುದಾಗಿದೆ. ಅದರ ಬಳಿಕ ರಾಖಿ ಕಳುಹಿಸುವ ಸಹೋದರ, ಸಹೋದರಿಯರ ವಿಳಾಸ ಬರೆದು ಅದರಲ್ಲಿ ಸೂಚಿಸಿದಂತೆ ರೂಪಾಯಿ 100 ಪಾವತಿಸಬೇಕಾಗಿದೆ. ಇಷ್ಟಾದ ಬಳಿಕ ಅಂಚೆ ಇಲಾಖೆ ಸಂಬಂಧಿಸಿದವರಿಗೆ ಆಯ್ಕೆ ಮಾಡಿದ ರಾಖಿಯನ್ನು ಮತ್ತು ಸಂದೇಶದ ಮುದ್ರಿತ ಪತ್ರವನ್ನು ತಲುಪಿಸಲಿದೆ.

ರಕ್ಷಾ ಬಂಧನವನ್ನು ಕೇವಲ ಸಹೋದರ, ಸಹೋದರಿಯರಿಗೆ ಮಾತ್ರವಲ್ಲದೆ ದೇಶ ಕಾಯುವ ಯೋಧರಿಗೂ ಕಳುಹಿಸಬಹುದಾಗಿದೆ. ಯೋಧರಿಗೆ ಕಳುಹಿಸುವ ರಕ್ಷಾ ಬಂಧನದ ಸಂದೇಶವು ಇದರಲ್ಲಿ ಅಡಕವಾಗಿದೆ. ಯೋಧರಿಗೆ ಕಳುಹಿಸುವ ರಾಖಿಯನ್ನು ಅಂಚೆ ಇಲಾಖೆಯಿಂದ ಯೋಧರಿಗೆ ಮುಟ್ಟಿಸಲಾಗುತ್ತದೆ. ಯೋಧರಿಗೆ ರಾಖಿ ಕಳುಹಿಸುವ ಹೊಸ ಪ್ರಯತ್ನ ಅಂಚೆ ಇಲಾಖೆ ಆರಂಭಿಸಿದೆ.

ಈ ಬಾರಿ ಕೊರೊನಾ ಕಾರಣದಿಂದ ರಕ್ಷಾ ಬಂಧನ ಕಟ್ಟಲು ಹಲವರಿಗೆ ಅಸಾಧ್ಯವಾದ ಸಂದರ್ಭದಲ್ಲಿ ಅಂಚೆ ಇಲಾಖೆ ಈ ವ್ಯವಸ್ಥೆ ಮಾಡಿದೆ. ಜುಲೈ 31ರವರೆಗೆ ಮಾತ್ರ ಇದನ್ನು ಕಳುಹಿಸುವ ವ್ಯವಸ್ಥೆ ಇದೆ. ಕೊರೊನಾ ಸಂದರ್ಭದಲ್ಲಿ ರಕ್ಷಾ ಬಂಧನಕ್ಕೆ ಆನ್​ಲೈನ್ ಟಚ್ ನೀಡುವ ಮೂಲಕ ಅಂಚೆ ಇಲಾಖೆ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

Last Updated : Jul 28, 2020, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.