ಮಂಗಳೂರು : ಇಂದು ದೇಶದೆಲ್ಲೆಡೆ ಅಕ್ಷಯ ತೃತೀಯವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿರುವುದರಿಂದ ಇಂದು ಹಲವು ಮಂದಿ ಬಂಗಾರ ಖರೀದಿಸಿ ಖುಷಿಪಟ್ಟರು.
ಮಂಗಳೂರಿನ ಚಿನ್ನದಂಗಡಿಗಳಲ್ಲಿ ಬಂಗಾರ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಸಣ್ಣಸಣ್ಣ ಚಿನ್ನದಂಗಡಿಗಳು, ಕಾರ್ಪೊರೇಟ್ ಕಂಪನಿಗಳ ಚಿನ್ನದ ಮಳಿಗೆಗಳಲ್ಲಿ ಬಂಗಾರ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದರು. ಕೆಲವರು ಎರಡು 3 ದಿನಗಳ ಮೊದಲೇ ಬುಕ್ಕಿಂಗ್ ಮಾಡಿ ಖರೀದಿಸಿದರೆ, ಇನ್ನೂ ಹಲವರು ಅಂಗಡಿಗೇ ಬಂದು ಚಿನ್ನ ಖರೀದಿಸಿದರು.
ಖರೀದಿಯ ವಿಚಾರದಲ್ಲಿಯೂ ಧರ್ಮದ ವಿಚಾರಗಳು ಮುನ್ನೆಲೆಗೆ ಬಂದಿವೆ. ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಿಂದೂಗಳ ಅಂಗಡಿಗಳಲ್ಲಿ ಚಿನ್ನ ಖರೀದಿಸುವಂತೆ ಮನವಿ ಮಾಡಿದ್ದರು. ಇದೆಲ್ಲದರ ಮಧ್ಯೆ ಯಾವುದೇ ಆತಂಕವಿಲ್ಲದೇ ಮಂಗಳೂರಿನಲ್ಲಿ ಅಕ್ಷಯ ತೃತೀಯ ದಿನದಂದು ಎಲ್ಲ ಅಂಗಡಿಗಳಲ್ಲಿ ಜನರು ಚಿನ್ನವನ್ನು ಖರೀದಿಸಿದ್ದಾರೆ.
ಓದಿ: ಉತ್ತರಪ್ರದೇಶದಲ್ಲಿ ಮುಸ್ಲಿಮರ ಮೇಲೆ ಹಿಂದೂ ಯುವ ವಾಹಿನಿ, ಬಿಜೆಪಿಯಿಂದ ಪುಷ್ಪವೃಷ್ಟಿ