ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನೀರಿನ ಘಟಕ ಕೂರಿಸಲು ಗ್ರಾಮಸ್ಥರಲ್ಲಿ ಗೊಂದಲ ಸೃಷ್ಟಿಯಾದ ಬೆನ್ನಲ್ಲೇ ಗ್ರಾಪಂ ಸದಸ್ಯನೊಬ್ಬ ಸ್ಥಳ ನಿಗದಿಗಾಗಿ ಗ್ರಾಮದ ಮನೆ ಮನೆಗೆ ತೆರಳಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾನೆ.
ಗ್ರಾಮ ಪಂಚಾಯತ್ ಸದಸ್ಯ ಚೇತನ್ ಕುಮಾರ್ ಪೋಲಿಂಗ್ ಮಾದರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸ್ಥಳ ನಿಗದಿಗಾಗಿ ಜನಮತ ಕಾರ್ಯಕ್ಕೆ ಮುಂದಾದವರು.
ಅರೇಹಳ್ಳಿ ಗ್ರಾಮದ ಗೋಮಾಳದ ದೇವಸ್ಥಾನದ ಬಳಿ ಹಾಗೂ ಮೂರ್ತಿಯಪ್ಪ ಮನೆಯ ಬಳಿ ನೀರಿನ ಘಟಕ ನಿರ್ಮಾಣದ ಬಗ್ಗೆ ಗೊಂದಲ ಉಂಟಾಗಿತ್ತು.
ಇದರಿಂದ ಚೇತನ್ಕುಮಾರ್ ಅವರು ಜನಾಭಿಪ್ರಾಯ ಸಂಗ್ರಹಕ್ಕಾಗಿ ಪೋಲಿಂಗ್ ಮಾದರಿಯಲ್ಲಿ ಯಾವ ಸ್ಥಳದಲ್ಲಿ ಘಟಕ ಆರಂಭಿಸಲು ಜನರ ಸಹಮತವಿದೆ ಎಂದು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಮುಂದುವರೆದು ಘಟಕ ನಿರ್ಮಾಣಕ್ಕೆ ವಿರೋಧ ಇರುವವರು ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಚೇತನ್ ತಿಳಿಸಿದ್ದಾರೆ.