ETV Bharat / city

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ

ದಾವಣಗೆರೆಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನ ಡಿಸಿಆರ್​ಬಿ ಪೊಲೀಸರು ಬಂಧಿಸಿದ್ದಾರೆ.

two arrest
ಇಬ್ಬರ ಬಂಧನ
author img

By

Published : Aug 11, 2022, 8:50 AM IST

ದಾವಣಗೆರೆ: ಕಾನೂನು ಬಾಹಿರವಾಗಿ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಡಿಸಿಆರ್​ಬಿ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಯಲ್ಲಮ್ಮ ನಗರದ 4ನೇ ಮೇನ್ 6ನೇ ಕ್ರಾಸ್ ಬಳಿ ನಡೆದಿದೆ.

ಎಸ್. ಅಶೋಕ ಹಾಗೂ ಅರಸನಾಳು ಹಾಲೇಶಿ ಬಂಧಿತರು. ಇವರು ದಾವಣಗೆರೆಯ ಯಲ್ಲಮ್ಮನಗರದ ಬಳಿ ಕಲರ್‌ ಜೆರಾಕ್ಸ್ ಮಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ‌ ಪೊಲೀಸರು, ಆರೋಪಿಗಳನ್ನ ಬಂಧಿಸಿ, ಬಂಧಿತರಿಂದ 1,20,700 ಮೌಲ್ಯದ ಖೋಟಾ ನೋಟು ಹಾಗು ಒಂದು ಕಲರ್ ಜೆರಾಕ್ಸ್ ಮಷಿನ್ ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಡಿಸಿಆರ್‌ಬಿ ಘಟಕದ ಪೊಲೀಸ್‌ ಉಪ ಅಧೀಕ್ಷಕ ಬಿ.ಎಸ್.ಬಸವರಾಜ್ ಹಾಗೂ ಡಿಸಿಆರ್‌ಬಿ ಘಟಕದ ಸಿಬ್ಬಂದಿ ದಾಳಿ ಮಾಡಿ ಪ್ರಕರಣ ಭೇದಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗುಂಡು ಹಾರಿಸಿ ಹೆಂಡತಿ ಕೊಂದ ಗಂಡ.. ಬೆಚ್ಚಿಬಿದ್ದ ಕೊಡಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.