ETV Bharat / city

ಶಾಸಕರ ಕಾಲಿಗೆರಗಿದ ಕೊರೊನಾ ಮುಕ್ತರು: ಮತ್ತೊಮ್ಮೆ ಮನ ಗೆದ್ದ ರೇಣುಕಾಚಾರ್ಯ - Kittur Rani Channamma Residential School

ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಸೆಂಟರ್ ನಿಂದ ಇಂದು 25 ಜನ ಸೋಂಕು ಮುಕ್ತರಾಗಿ ಬಿಡುಗಡೆಗೊಂಡರು. ಅವರನ್ನು ಶಾಸಕ ರೇಣುಕಾಚಾರ್ಯ ಹೂವಿನ ಮಳೆಗರೆದು ಆತ್ಮೀಯವಾಗಿ ಬೀಳ್ಕೊಟ್ಟರು.

mla-renukacharya-flower-rain
ಹೂ-ಮಳೆ ಸುರಿಸಿ ಬೀಳ್ಕೊಡುಗೆ
author img

By

Published : Jun 3, 2021, 10:10 PM IST

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬೆಳಗ್ಗೆ ಚಪಾತಿ ಉಜ್ಜಿ ಕೊರೊನಾ ಸೋಂಕಿತರಿಗೆ ನೀಡಿ ರಾಜಕಾರಣಿಗಳು ಹಾಗು ಜ‌ನರ ಪ್ರಶಂಸೆಗೆ ಪಾತ್ರರಾಗಿದ್ದರು.‌ ಇದೀಗ ಮತ್ತೊಮ್ಮೆ ಅವರು ಜನರ ಗಮನವನ್ನು ತಮ್ಮತ್ತ ಸೆಳೆಯುವ ಕೆಲಸ ಮಾಡಿದ್ದಾರೆ.

ಹೂ-ಮಳೆ ಸುರಿಸಿ ಬೀಳ್ಕೊಡುಗೆ

ಓದಿ: ಆಲ್​ರೌಂಡರ್​ ರೇಣುಕಾ: ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಪಾತಿ ತಯಾರಿಸಿದ ಶಾಸಕ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ನಿಂದ ಇಂದು 25 ಜನ ಸೋಂಕು ಮುಕ್ತರಾಗಿ ಬಿಡುಗಡೆಗೊಂಡರು. ಸೋಂಕು ಮುಕ್ತರಾಗಿ ಬಿಡುಗಡೆಯಾದವರನ್ನು ಶಾಸಕ ರೇಣುಕಾಚಾರ್ಯ ಹೂವಿನ ಮಳೆಗರೆದು ಆತ್ಮೀಯವಾಗಿ ಬೀಳ್ಕೊಟ್ಟರು.

ಬಳಿಕ ಕೊರೊನಾ ಮುಕ್ತರಾದವರು ಒಬ್ಬೊಬ್ಬರಾಗಿ ಶಾಸಕ ರೇಣುಕಾಚಾರ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಮನೆಯತ್ತ ಹೆಜ್ಜೆ ಹಾಕಿದರು. ಈ ದೃಶ್ಯಗಳನ್ನು ಗಮನಿಸಿದ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೂ ಪುಷ್ಪವೃಷ್ಟಿ ಮೂಲಕ ಬೀಳ್ಕೊಡುಗೆ ನೀಡಿ ಉಳಿದ ಸೋಂಕಿತ ಬಂಧುಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಾಸಕರು ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.