ಬೆಂಗಳೂರು: ವಿಜಯ ದಿವಸ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಶ್ರೀಮತಿ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಸಲಾಯ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಸೇನಾಧಿಕಾರಿಗಳು ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಯಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಆಯುಕ್ತರು, ಬಿಬಿಎಂಪಿ ಕಮಿಷನರ್ ,ಎನ್.ಸಿ.ಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಷ್ಪ ನಮನ ಸಲ್ಲಿಕೆ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ ಹುತಾತ್ಮ ಯೋಧರ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳಷ್ಟು ಸಂತೋಷವಾಗಿದೆ. ಹಾಗೆ ಅತ್ಯಂತ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ, ಹುತಾತ್ಮ ಯೋಧರ ಕುಟುಂಬದ ಜೊತೆ ಸರ್ಕಾರ ಇದ್ದು, ಎಲ್ಲಾ ಸವಲತ್ತು ನೀಡುತ್ತೆ ಎಂದರು. ಹುತಾತ್ಮ ಯೋಧರ ಕುಟುಂಬದ ಕಲ್ಯಾಣಕ್ಕೆ ನೀಡುತ್ತಿರುವ ಅನುದಾನ ಒಂದು ಕೋಟಿ ಹೆಚ್ಚಳ ಮಾಡಲಾಗಿದೆ. ಅದರಲ್ಲೂ ವೀರ ಚಕ್ರ, ಶೌರ್ಯ ಚಕ್ರಕ್ಕೆ ನೀಡುವ ಗೌರವ ಧನ 25 ಸಾವಿರಕ್ಕೆ ಹೆಚ್ಚಳ, ಸೇನಾ ಮೆಡಲ್ ಗೌರವ ಧನ 2 ಲಕ್ಷದಿಂದ 15 ಲಕ್ಷ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.