ETV Bharat / city

ಏರ್​ಪೋರ್ಟ್​ನಿಂದ ವರ್ಚುವಲ್ ಮೂಲಕವೇ ಬಿಜೆಪಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ! - ಬೆಂಗಳೂರಲ್ಲಿ ಸಿಎಂ ಬೊಮ್ಮಾಯಿ ವಿಮಾನ ವಿಳಂಬ

ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯತ್ತಿರುವ ಬಿಜೆಪಿ ಕಾರ್ಯಕಾರಿಣಿಯ ಪೂರ್ವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೆಚ್​ಎಎಲ್ ಏರ್‌ಪೋರ್ಟ್​ನಿಂದ ವರ್ಚುವಲ್ ಮೂಲಕ ಸಿಎಂ ಹಾಗೂ ಸಚಿವರು ಭಾಗಿಯಾದರು.

ಸಿಎಂ ವಿಮಾನದಲ್ಲಿ ದೋಷ,Technical Problem in CM bommai plane in bengaluru
ಸಿಎಂ ವಿಮಾನದಲ್ಲಿ ದೋಷ
author img

By

Published : Dec 28, 2021, 12:43 PM IST

ಬೆಂಗಳೂರು: ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಸಿಎಂ ಬೊಮ್ಮಾಯಿ ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲೇ ಮಧ್ಯಾಹ್ನದವರೆಗೆ ಇರುವಂತಾಗಿದೆ. ಪರಿಣಾಮ, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ವರ್ಚುವಲ್ ಮೂಲಕವೇ ಹಾಜರಾದರು.

ತಾಂತ್ರಿಕ ದೋಷದ ಕಾರಣ ವಿಮಾನ ಟೇಕ್ಆಫ್ ಆಗದ ಕಾರಣ ಸಿಎಂ ಈಗಲೂ ಹೆಚ್ಎಎಲ್ ಏರ್‌ಪೋರ್ಟ್​ನಲ್ಲೇ ಉಳಿದುಕೊಂಡಿದ್ದಾರೆ. ಸಚಿವರಾದ ಆರ್.ಅಶೋಕ್, ಎಸ್​.ಟಿ.ಸೋಮಶೇಖರ್ ಕೂಡಾ ಬದಲಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ.

ಸಕಾಲಕ್ಕೆ ಹುಬ್ಬಳ್ಳಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಎಚ್ಎಎಲ್ ಏರ್​​ಪೋರ್ಟ್ ಲಾಂಜ್​​ನಿಂದಲೇ ಬಿಜೆಪಿ ಕಾರ್ಯಕಾರಿಣಿ ಸಭೆಯ ಪೂರ್ವದಲ್ಲಿ ನಿಗದಿಯಾಗಿದ್ದ 'ಪ್ರಯದರ್ಶಿನಿ' ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಸಿಎಂ ಮತ್ತು ಸಚಿವರು ಪಾಲ್ಗೊಂಡರು.

ಮಧ್ಯಾಹ್ನದ ವೇಳೆ ಹೆಚ್ಎಎಲ್ ಏರ್‌ಪೋರ್ಟ್​ಗೆ ಬದಲಿ ವಿಶೇಷ ವಿಮಾನ ಬರಲಿದೆ. ಆ ವಿಮಾನದಲ್ಲಿ ಹುಬ್ಬಳ್ಳಿಗೆ ಸಿಎಂ ಮತ್ತು ಸಚಿವರು ತೆರಳಲಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ದೋಷ: 2 ಗಂಟೆ ಕಾದ್ರೂ ಬಗೆಹರಿಯದ ಸಮಸ್ಯೆ, ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಸಿಎಂ ತೀರ್ಮಾನ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.