ಬೆಂಗಳೂರು: ಎರಡು ಇಸ್ಪೀಟ್ ಗ್ಯಾಂಗ್‌ಗಳ ನಡುವೆ ನಡೆದಿದ್ದ ಗಲಾಟೆ ಪ್ರಕರಣವೊಂದರ ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಶಾಮೀಲಾಗಿದ್ದ ರೌಡಿಶೀಟರ್ ಮತ್ತು ಸಹಚರರನ್ನು ಬಂಧಿಸಿದ್ದಾರೆ. ರಾಜಾನುಕುಂಟೆ ವ್ಯಾಪ್ತಿಯ ತಿಮ್ಮೇಗೌಡ, ಹರೀಶ, ಮೂರ್ತಿ, ರಾಜು ಎಂಬವರನ್ನು ಬಂಧಿಸಿದ್ದು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಭೀತಿಯಿಂದ ಹೊರಗೆ ಓಡಿ ಬಂದ ಜನ
ಕಳೆದ ವಾರ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ ಬಾಗಲಗುಂಟೆ ಮೂಲದ ಪವನ್ ಎಂಬಾತನ ಹೊಟ್ಟೆಗೆ ಬಿಯರ್ ಬಾಟಲಿಯಿಂದ ಇರಿಯಲಾಗಿದೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.