ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ರೆವೆನ್ಯೂ ಇನ್ಸ್ಪೆಕ್ಟರ್ನನ್ನು ಬಂಧಿಸಿದ್ದಾರೆ.
ಬಿಬಿಎಂಪಿ ರೆವೆನ್ಯೂ ಇನ್ಸ್ಪೆಕ್ಟರ್ ಗಿರೀಶ್ ಬಂಧಿತ ಆರೋಪಿ. ನಗರದ ಪರಪ್ಪನ ಅಗ್ರಹಾರದ ನಿವಾಸಿಯೊಬ್ಬರು ಫ್ಲಾಟ್ ಖರೀದಿಸಿದ್ದು, ಫ್ಲಾಟ್‌ಗೆ ಖಾತೆ ಮಾಡಿಸಲು 191 ವಾರ್ಡ್‌ನ ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಫ್ಲಾಟ್‌ನ ಖಾತೆ ಮಾಡಿ ಕೊಡುವ ಸಲುವಾಗಿ ಗಿರೀಶ್ 4 ಸಾವಿರ ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಸಂಬಂಧ ಫ್ಲಾಟ್ ಮಾಲೀಕರು ಎಸಿಬಿಗೆ ದೂರು ನೀಡಿದ್ದಾರೆ. ದೂರಿನನ್ವಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುವಾಗ ಗಿರೀಶ್‌ನನ್ನು ಬಂಧಿಸಿದ್ದಾರೆ.
ಓದಿ: ಯುಪಿ ವಿಧಾನಸಭಾ ಚುನಾವಣೆ: ಮೊದಲ ಬಾರಿ ಹಕ್ಕು ಚಲಾಯಿಸಲಿರುವ 14.66 ಮತದಾರರೇ ನಿರ್ಣಾಯಕ