ಹುಬ್ಬಳ್ಳಿ : ಕೃಷಿ ಉತ್ಪನ್ನಗಳನ್ನು ವಿಧಾನಸಭೆಯ ಮುಂದೆ ಮಾರಲು ರೈತರಿಗೆ ಕರೆ ನೀಡಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ, ನಮಗೆ ಒಳ್ಳೆಯ ದರ ಎಲ್ಲಿ ಸಿಗುತ್ತೋ ಅಲ್ಲಿ ಮಾರಾಟ ಮಾಡುತ್ತೇವೆ ಎಂದರು.
ಬೆಂಬಲ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಿ ಎಂದು ಹೇಳಿದ್ದೇನೆ, ಕಾನೂನನ್ನು ಮುರೀಲಿಕ್ಕೆ ಹೇಳಿಲ್ಲ, ಎಲ್ಲ ಕೃಷಿ ಉತ್ಪನ್ನಗಳಿಗೆ ಸಾಮಾನ್ಯ ಕನಿಷ್ಠ ದರ ಕೇಳ್ತಿದ್ದೇವೆ. ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸಿದವರ ಮೇಲೆ ಕ್ರಮಕೈಗೊಳ್ಳಬೇಕು.
ಪ್ರಧಾನಿ ಮೋದಿಯೇ ಹೇಳಿದ್ದಾರೆ ಎಲ್ಲಿ ಉತ್ತಮ ದರ ಸಿಗುತ್ತೋ ಅಲ್ಲಿ ಉತ್ಪನ್ನಗಳನ್ನು ಮಾರಿ ಎಂದಿದ್ದಾರೆ. ಹೀಗಾಗಿ, ವಿಧಾನಸಭೆಯಲ್ಲಿ ಉತ್ತಮ ದರ ಸಿಕ್ಕರೆ ಅಲ್ಲಿಯೇ ನಾವು ಮಾರಲು ಸಿದ್ಧ ಎಂದರು.
ಇದನ್ನೂ ಓದಿ.. ರಾಜ್ಯದಲ್ಲಿಂದು 2975 ಹೊಸ ಕೋವಿಡ್ ಪ್ರಕರಣ: ಮಹಾಮಾರಿಗೆ 21 ಮಂದಿ ಬಲಿ