ಬೆಂಗಳೂರು : ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸುತ್ತಿದ್ದಂತೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಮಾಜಿ ಸಚಿವರ ಜೊತೆಯಲ್ಲಿ ನಾನಿರುವ ವಿಡಿಯೋ ಯಾರು ಮಾಡಿದ್ದಾರೋ ಗೊತ್ತಿಲ್ಲ. ಈಗಾಗಲೇ ನನ್ನ ಮಾನ-ಮಾರ್ಯಾದೆ ಊರು ತುಂಬಾ ಹರಾಜಾಗಿದೆ. ಮನೆ ಬಳಿ ಸಾರ್ವಜನಿಕರು ಈ ಬಗ್ಗೆ ವಿಚಾರಿಸುತ್ತಿದ್ದಾರೆ. ತಂದೆ-ತಾಯಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ನಾನು ಸಹ ಮೂರು-ನಾಲ್ಕು ಬಾರಿ ಸುಸೈಡ್ಗೆ ಪ್ರಯತ್ನಿದ್ದೇನೆ.
ನನಗೆ ಯಾವ ರಾಜಕಾರಣಿಗಳ ಬೆಂಬಲ ಇಲ್ಲ. ರಮೇಶ್ ಜಾರಕಿಹೊಳಿ ಅವರೇ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ವಿಡಿಯೋ ಹೇಗೆ ಬಂತು ಎಂಬುವುದು ನನಗೆ ಗೊತ್ತಿಲ್ಲ. ನನಗೆ ಯಾರಿಂದಲೂ ರಕ್ಷಣೆಯಿಲ್ಲ. ಹೀಗಾಗಿ, ಪೊಲೀಸ್ ರಕ್ಷಣೆ ನೀಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ವಿಡಿಯೋದಲ್ಲಿ ಯುವತಿ ಮನವಿ ಮಾಡಿದ್ದಾರೆ.
ಜಾರಕಿಹೊಳಿ ಇದಕ್ಕೇನಂತಾರೆ?: ವಿಡಿಯೋ ಹರಿಬಿಡುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ ಜಾರಕಿಹೊಳಿ, 12 ದಿನ ಆದ ಮೇಲೆ ಯುವತಿ ಆಚೆ ಬಂದು ಮಾತಾಡಿದ್ದಾಳೆ. ಇವತ್ಯಾಕೆ ಇದು ಆಚೆ ಬಂತು. ಇದು ಪಾರ್ಟ್ ಆಫ್ ಷಡ್ಯಂತ್ರ. ಅವರ ಕೈಗೊಂಬೆಯಾಗಿ ಕುಣಿಯುತ್ತಿದ್ದಾರೆ ಎಂದು ಯುವತಿ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.