ETV Bharat / city

ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಣೆ.. ಜೇಮ್ಸ್ ಗಿಲ್ಲ ಹೆಲಿಕಾಪ್ಟರ್ ಪುಷ್ಪಮಳೆ - james kannada movie

ನಾಳೆ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂತೆಯೇ ಚಿತ್ರತಂಡವು ವಿವಿಧ ಕಡೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆಗೆ ನಿರ್ಧರಿಸಿತ್ತು. ಆದರೆ ನಗರ ಪೊಲೀಸ್ ಇಲಾಖೆ ಭದ್ರತೆ ದೃಷ್ಟಿಯಿಂದ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆಗೆ ನಿರಾಕರಿಸಿದೆ.

punith-rajkumar-last-movie-james-releases-tomorrow
ಜೇಮ್ಸ್ ಗಿಲ್ಲ ಹೆಲಿಕ್ಯಾಪ್ಟರ್ ಪುಷ್ಪಮಳೆ..! ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಣೆ
author img

By

Published : Mar 16, 2022, 5:17 PM IST

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಾಳೆ ತೆರೆಕಾಣುತ್ತಿದ್ದು ಸಿನಿಮಾವನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ಗಳು ಈಗಾಗಲೇ ತಲೆ ಎತ್ತಿ ನಿಂತಿವೆ.

ಅಪ್ಪು‌ ಹೆಸರಿನಲ್ಲಿ ಪಲ್ಲಕ್ಕಿ, ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಅದೇ ರೀತಿ ಹೆಲಿಕಾಪ್ಟರ್ ಮೂಲಕ ಪುನೀತ್ ಕಟೌಟ್ ಗೆ‌ ಪುಷ್ಟಧಾರಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಸಹ ಚಿತ್ರ ತಂಡ ನಡೆಸಿತ್ತು. ಆದರೆ ಅವರ ಆಸೆಗೆ ನಗರ ಪೊಲೀಸರು ತಣ್ಣೀರು ಎರಚಿದ್ದಾರೆ‌.

ಚಿತ್ರ ತಂಡದ ಯೋಜನೆಯಂತೆ ಪುನೀತ್ ಸಮಾಧಿ, ಆ ಬಳಿಕ ವೀರಭದ್ರೇಶ್ವರ ಥಿಯೇಟರ್, ಪ್ರಸನ್ನ ಹಾಗೂ ವೀರೇಶ್ ಥಿಯೇಟರ್ ನಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆ ಸುರಿಸಲು ಚಿತ್ರತಂಡ ನಿರ್ಧರಿಸಿತ್ತು. ಆದ್ರೆ ಭದ್ರತಾ ದೃಷ್ಠಿಯಿಂದ ಹೆಲಿಕಾಪ್ಟರ್ ಪುಷ್ಪಮಳೆಗೆ ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಹೆಲಿಕಾಪ್ಟರ್​ಗೆ ಭದ್ರತೆ ಒದಗಿಸುವುದು ಕಷ್ಟಕರವಾಗಲಿದೆ ಮತ್ತು ಅತಿ ಕೆಳಗೆ ಹೆಲಿಕಾಪ್ಟರ್ ಸಂಚರಿಸುವುದರಿಂದ ಟವರ್, ಬಿಲ್ಡಿಂಗ್ ಗಳು ಅಡ್ಡಿಯಾಗಬಹುದು ಎಂಬ ಕಾರಣಗಳನ್ನು ನೀಡಿ ಅನುಮತಿಗೆ ಪೊಲೀಸ್ ಇಲಾಖೆ ನಿರಾಕರಿಸಿದೆ ಎಂದು ಹೇಳಲಾಗ್ತಿದೆ.

ಓದಿ : ಜೇಮ್ಸ್ ಸಿನಿಮಾದ ಅದ್ಧೂರಿ ಸ್ವಾಗತಕ್ಕೆ ಅಭಿಮಾ‌ನಿಗಳು ಸಜ್ಜು.. ನಾಡಿನಾದ್ಯಂತ ಪವರ್ ಸ್ಟಾರ್ ಜಪ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.