ಬೆಂಗಳೂರು : ಒಮಿಕ್ರಾನ್ ಸೋಂಕು ಹರಡಿ ಆಸ್ಪತ್ರೆಗೆ ಸೇರುವ ವ್ಯಕ್ತಿಗಳು ಚೇತರಿಸಿಕೊಂಡ ನಂತರ ಡಿಸ್ಜಾರ್ಜ್ ಮಾಡಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಜಾಡಿ ಮಾಡಿದೆ.
ಡಿಸೆಂಬರ್ 8ರಂದು ನಡೆದ ಸಭೆಯಂತೆ ತಜ್ಞರ ಸಮಿಯ ಶಿಫಾರಸಿನಂತೆ, ಮುಂದಿನ ಆದೇಶದವರೆಗೆ ಕೋವಿಡ್-19 (ಒಮಿಕ್ರಾನ್ ರೂಪಾಂತರ) ರೋಗಿಗಳಿಗೆ ಡಿಸ್ಚಾರ್ಜ್ ನೀತಿಯನ್ನು ಅನುಸರಿಸಲು ಜಿಲ್ಲಾ ಮತ್ತು ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ದೇಶಾಂದ್ಯಂತ 140 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಪೂರೈಕೆ.. 8.80 ಕೋಟಿಗೂ ಹೆಚ್ಚು ಡೋಸ್ ಬಾಕಿ!
ಡಿಸ್ಜಾರ್ಜ್ ಮಾಡಲು ಅನುಸರಿಸಬೇಕಾದ ಮಾರ್ಗಸೂಚಿ ಏನು?
- ಯಾವುದೇ ರೋಗ ಲಕ್ಷಣಗಳು ಇಲ್ಲ ಅಂದರೆ 10 ದಿನಕ್ಕೆ ಡಿಸ್ಜಾರ್ಜ್ ಮಾಡಬಹುದು.
- ಡಿಸ್ಟಾರ್ಜ್ ಆಗುವ ಮುನ್ನ 3 ದಿನದಲ್ಲಿ ಯಾವುದೇ ರೀತಿಯ ಜ್ವರ ಅಥವಾ ಯಾವುದೇ ರೋಗ ಲಕ್ಷಣ ಇರಬಾರದು
- ಯಾವುದೇ ಆಕ್ಸಿಜನ್ ಸಪೋರ್ಟ್ ಇಲ್ಲದೇ 4 ದಿನಗಳ ಕಾಲ 95% ಆಕ್ಸಿಜನ್ ಲೆವೆಲ್ ಇದ್ದರೆ ಡಿಸ್ಟಾರ್ಜ್ ಮಾಡಬಹುದು.
- ಡಿಸ್ಟಾರ್ಜ್ ಆದ ಮೇಲೆ ರೋಗ ಲಕ್ಷಣ ಕಂಡು ಬಂದರೆ ಏನು ಮಾಡಬೇಕು? ಏನು ತಗೋಬೇಕು ಅಂತಾ ಸಲಹೆ ನೀಡಬೇಕು.
- ಒಮಿಕ್ರಾನ್ ರೋಗಿಗೆ ಡಿಸ್ಜಾರ್ಜ್ ಮಾಡಬೇಕಾದ್ರೆ ಎರಡು ಬಾರಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿ ನೆಗೆಟಿವ್ ಇದ್ರೆ ಮಾತ್ರ ಡಿಸ್ಟಾರ್ಜ್
- ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದರೆ 48 ಗಂಟೆಗಳ ಬಳಿಕ ಮತ್ತೆ ಸ್ವ್ಯಾಬ್ ಕಲೆಕ್ಟ್ ಮಾಡಿ ಆರ್ಟಿಪಿಸಿಆರ್ ಟೆಸ್ಟ್ ಮಾಡಬೇಕು
- ಡಿಸ್ಚಾರ್ಜ್ ಆದ ವ್ಯಕ್ತಿಗೆ ಹೋಂ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚನೆ ನೀಡಬೇಕು
- ಹೋಂ ಕ್ವಾರಂಟೈನ್ನಲ್ಲಿ ಇರುವ ವ್ಯಕ್ತಿಗೆ ಮತ್ತೆ 6ನೇ ದಿನಕ್ಕೆ ಆರ್ಟಿಪಿಸಿಆರ್ ಟೆಸ್ಟ್ ಮಾಡಬೇಕು
- ಜಿಲ್ಲಾ ಕಣ್ಗಾವಲು ಅಧಿಕಾರಿ (DSO) ವ್ಯಕ್ತಿಯ ಆರೋಗ್ಯ ಸ್ಥಿತಿಗಾಗಿ ಅವರ ಮನೆಗಳಲ್ಲಿ ಭೇಟಿ ನೀಡಬೇಕು.
- ಟೆಲಿ ಮಾನಿಟರಿಂಗ್ ತಂಡವು ಪರಿಶೀಲಿಸುತ್ತಿರಬೇಕು.