ETV Bharat / city

ಹಳಿಗಿಳಿಯಲು 'ನಮ್ಮ ಮೆಟ್ರೊ' ಸಿದ್ಧ?: ಸಿಬ್ಬಂದಿಗೆ ತರಬೇತಿ ಕಾರ್ಯ

ಜೂನ್ 1 ರಿಂದ ಸೇವೆ ಪುನರಾರಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್​​ಸಿಎಲ್) ಸಿದ್ಧತೆ ನಡೆಸುತ್ತಿದೆ.

Metro
ಮೆಟ್ರೊ
author img

By

Published : May 29, 2020, 1:17 PM IST

ಬೆಂಗಳೂರು: ಕೊರೊನಾ ಹರಡುವಿಕೆ ನಿಯಂತ್ರಿಸಲು ಹೇರಿದ್ದ ಲಾಕ್​​ಡೌನ್‌ ಅನ್ನು ಹಂತ ಹಂತವಾಗಿ ಸಡಿಲಿಸಿ ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್​​ಆರ್​​ಟಿಸಿ, ಖಾಸಗಿ ಬಸ್​​​ಗಳು, ಓಲಾ-ಉಬರ್​, ಕ್ಯಾಬ್​​ಗಳ​​ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಈಗ ಮೆಟ್ರೊ ಸೇವೆಗೂ ಅವಕಾಶ ನೀಡುವ ಸಾಧ್ಯತೆ ಇದೆ.

ಮೇ 31ರಂದು 4.0 ಲಾಕ್​ಡೌನ್ ಮುಗಿಯಲಿದ್ದು, ಅನುಮತಿ ಸಿಕ್ಕರೆ ಜೂನ್ 1 ರಿಂದ ಸೇವೆ ಪುನರಾರಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್​​ಸಿಎಲ್) ಸಿದ್ಧತೆ ನಡೆಸುತ್ತಿದೆ.

ಕೇಂದ್ರ-ರಾಜ್ಯ ಸರ್ಕಾರಗಳು ಷರತ್ತು ಬದ್ಧ ಆದೇಶ ಹೊರಡಿಸುವ ನಿರೀಕ್ಷೆಯಲ್ಲಿದ್ದು, ಮೆಟ್ರೊ ಹಳಿಗಿಳಿಸಲು ಬಿಎಂಆರ್​ಸಿಎಲ್​ ಸನ್ನದ್ಧವಾಗಿದೆ. ಇದಕ್ಕಾಗಿ ಮೆಟ್ರೊ ಸಿಬ್ಬಂದಿಗೆ ಕಳೆದೆರಡು ದಿನಗಳಿಂದ ತರಬೇತಿ ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು ಕಡ್ಡಾಯ. ಮೆಟ್ರೊ ಪಾಸ್ ಇದ್ದವರಿಗಷ್ಟೇ ಅವಕಾಶ ನೀಡುವುದಾ ಅಥವಾ ಹೇಗೆ? ಎಂಬುದರ ಚಿಂತನೆ ನಡೆಯುತ್ತಿದೆ.

ಮೆಟ್ರೊ ಸಂಚಾರ ಬರೊಬ್ಬರಿ 69 ದಿನಗಳಿಂದ ಸ್ಥಗಿತಗೊಂಡಿದೆ. ಮೇ 18ರಂದು ಅನುಮತಿ ಸಿಗುವ ನಿರೀಕ್ಷೆಯಲ್ಲಿ ನಮ್ಮ ಮೆಟ್ರೊ ಇತ್ತು. ‌ಆದರೆ, ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತು.

ಲಾಕ್​​ಡೌನ್ ಮುನ್ನ ನಿತ್ಯ ಸುಮಾರು 4.20 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ₹ 1 ಕೋಟಿ ಟಿಕೆಟ್ ಫೇರ್ ಆದಾಯ ಸಂಗ್ರಹವಾಗುತ್ತಿತ್ತು. ‌ಎರಡು ತಿಂಗಳಿಂದ ಮೆಟ್ರೊ ಸಂಚಾರ ಸ್ಥಗಿತಗೊಂಡ ಪರಿಣಾಮ, ಈಗಾಗಲೇ ನಿಗಮ ನಷ್ಟದಲ್ಲಿದೆ. ಅದು ಮತ್ತಷ್ಟು ಮುಂದುವರಿದರೆ ಇನ್ನೂ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ, ಜೂನ್ 1ರಿಂದ ಓಡಿಸುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.