ETV Bharat / city

ಮೇ 2ರ ಬಳಿಕ ಸಿಎಂ ಬದಲಾವಣೆ ಖಚಿತ: ಯತ್ನಾಳ್ ಹೊಸ ಬಾಂಬ್

author img

By

Published : Apr 7, 2021, 5:04 PM IST

ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬದಲಾವಣೆ ಬಗ್ಗೆ ಮತ್ತೆ ಭವಿಷ್ಯ ನುಡಿದಿದ್ದು, ಸಾಕಷ್ಟು ಚರ್ಚೆಗೆ ಒಳಗಾಗಿದೆ.

MLA Basanagowda Patil Yatnal Reaction on cm  post
ಮೇ 2ರ ಬಳಿಕ ಸಿಎಂ ಬದಲಾವಣೆ ಖಚಿತ: ಯತ್ನಾಳ್ ಹೊಸ ಬಾಂಬ್

ಬೆಂಗಳೂರು: ಮೇ ತಿಂಗಳ 2ರ ನಂತರ ಸಿಎಂ ಬದಲಾವಣೆ ಖಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಹಕ್ಕು ಬಾಧ್ಯತೆಗಳ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಮೇ 2ರ ನಂತರ ಸಿಎಂ ಬದಲಾವಣೆ ಖಚಿತ. ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಮೀಸಲಾತಿ ಯಡಿಯೂರಪ್ಪ ಕೊಡಲಿಲ್ಲ ಅಂದ್ರೂ ಮೇ 2ರ ನಂತರ ಬರುವ ಮುಖ್ಯಮಂತ್ರಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುತ್ತಾರೆ ಎಂದಿರುವ ಯತ್ನಾಳ್,​ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯೇಂದ್ರಗೆ ಸವಾಲ್​

ವಿಜಯೇಂದ್ರ ಬಳಿ ಸಾವಿರಾರು ಕೋಟಿ ಇದೆ. ಅದಕ್ಕೆ ಅವರನ್ನು ಇಂಚಾರ್ಜ್ ಮಾಡಿದ್ದಾರೆ. ನಮ್ಮಂತ ಯೋಗ್ಯರಿಗೆ ಹೇಗೆ ಉಸ್ತುವಾರಿ ನೀಡುತ್ತಾರೆ? ವಿಜಯೇಂದ್ರ ಸಿಎಂ ಮಗ ಹಾಗೂ ಸಿಕ್ಕಾಪಟ್ಟೆ ಹಣವಿದೆ. ಅದಕ್ಕೆ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಯುತ್ತಾರೆ ಎಂದು ಕಿಡಿಕಾರಿದರು.

ಇವರ ಯೋಗ್ಯತೆ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಇಡಿಯವರು ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ತನಿಖೆ ಮಾಡಿದ್ದಾರೆ. ಇಡಿ ಕರೆದಿಲ್ಲ ಎಂದು ವಿಜಯೇಂದ್ರ ಹೇಳಲಿ ಎಂದು ಸವಾಲು ಹಾಕಿದರು.

ಕಾಶ್ಮೀರ ರೀತಿಯಲ್ಲಿ ವಿಶೇಷ ಸ್ಥಾನಮಾನ ಯಡಿಯೂರಪ್ಪನವರಿಗೆ ನೀಡಲಾಗಿದ್ಯಾ?

ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ರಾಜ್ಯಪಾಲರದ್ದು ಪಕ್ಷದ ವೇದಿಕೆನಾ? ಈಶ್ವರಪ್ಪ ಅವರು ಅಂತರ್ಮುಖಿ ಆಗಿದ್ದಾರೆ. ಯಾರ ಯಾರ ನಾಯಕತ್ವ ಎಷ್ಟೆಷ್ಟು ಅಂತಾ ಗೊತ್ತಾಗುತ್ತದೆ. ಈಶ್ವರಪ್ಪ ಈಲ್ಡ್ ಆಗಿಲ್ಲ ಅನಿಸ್ತದೆ. ಅವರು ರಾಜ್ಯಪಾಲರ ಭೇಟಿ ಮಾಡಿದ್ದು ನನಗೇನೂ ಗೊತ್ತಿರಲಿಲ್ಲ. ಇನ್ನೂ ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ ಎಂದು ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಏಪ್ರಿಲ್​ 17ರ ನಂತರ ಶಾಸಕರು ಹಾಗೂ ಸಚಿವರು ಸಾಕಷ್ಟು ಮಂದಿ ರೊಚ್ಚಿಗೆ ಏಳುತ್ತಾರೆ. ಸೂರ್ಯ ಚಂದ್ರ ಇರುವವರೆಗೂ ಯಡಿಯೂರಪ್ಪ ಸಿಎಂ ಎಂದು ಹೇಳುತ್ತಾರೆ. ಅವರಿಗೆ ಏನು ಕಾಶ್ಮೀರ ರೀತಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದ್ಯಾ? ಪಕ್ಷದ ಸಿದ್ಧಾಂತದ ಹಿನ್ನೆಲೆಯಲ್ಲಿ ಎರಡು ವರ್ಷ ಬೋನಸ್ ಕೊಟ್ಟಿದ್ದು ದೊಡ್ಡದು. ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಿ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹಾಗೂ ಡಿಕೆಶಿಯವರು ಯಡಿಯೂರಪ್ಪ ವಕ್ತಾರರಾ?

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಯಡಿಯೂರಪ್ಪ ಅವರನ್ನು ರಕ್ಷಣೆ ಮಾಡುತ್ತಾರೆ ಏಕೆ? ಬಿಎಸ್​ವೈ ಎರಡು ವರ್ಷ ಮುಂದುವರೆದರೆ ಕಾಂಗ್ರೆಸ್​​ಗೆ ಲಾಭ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ಹೈಕಮಾಂಡ್ ಅಷ್ಟೇನೂ ವೀಕ್ ಇಲ್ಲ. ಎಲ್ಲಾ ಹಗರಣಗಳನ್ನು ಗಮನಿಸುತ್ತಿದೆ. ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಸ್ಟೇ ಕೊಟ್ಟಿದ್ದು ನಿರಾಳ ಅಲ್ಲ. ಏನು ಜಾದು ಮಾಡಿದ್ದಾರೋ ಗೊತ್ತಿಲ್ಲ ಯಡಿಯೂರಪ್ಪ ಹಾಗೂ ವಿಜಯೇಂದ್ರ. ಕಾರ್ಯಕರ್ತರಿಗೆ ನಿರಾಳ ಇಲ್ಲ. ಆದರೆ ಮಾಧ್ಯಮದವರು ಖುಷಿ ಪಡುತ್ತಾರೆ ಎಂದರು.

ನೋಟಿಸ್​ಗೆ ಉತ್ತರ ಕೊಟ್ಟಿದ್ದೇನೆ

ಅರುಣ್ ಸಿಂಗ್ ರಾಷ್ಟ್ರೀಯ ನಾಯಕರು, ಅವರಿಗೆ ಎಲ್ಲಾ ಗೊತ್ತಿದೆ. ಅವರ ನೋಟಿಸ್​ಗೆ ಉತ್ತರ ಕೊಟ್ಟು ‌60 ದಿನ ಆಯಿತು. ನನಗೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಬೆಂಬಲ ಇದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಬೆಳಗಾವಿಯಲ್ಲಿ ಶೆಟ್ಟರ್ ವಿರುದ್ಧ ಅಸಮಾಧಾನ

ಸಚಿವ ಜಗದೀಶ್ ಶೆಟ್ಟರ್ ಬಗ್ಗೆ ಬೆಳಗಾವಿಯಲ್ಲಿ ಅಸಮಾಧಾನ ಇದೆ. ಅವರು ಸಿಎಂ ಆಗಿದ್ದಾಗ ಪಂಚಮಸಾಲಿ ಸಮುದಾಯ ಬಿಟ್ಟು ಕೇವಲ ತಮ್ಮ ಸಮುದಾಯಕ್ಕೆ 2ಎ ಪ್ರವರ್ಗ ಸ್ಥಾನಮಾನ ನೀಡಿದ್ದಾರೆ. ಈ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಬಗ್ಗೆ ಸಿಟ್ಟು ಇದ್ದರೂ ಈ ಬಾರಿ ಬೆಳಗಾವಿಯಲ್ಲಿ ಬಿಜೆಪಿಗೆ ಬೆಂಬಲ ಕೊಡಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.

ವಿರೋಧ ಪಕ್ಷದವರ ಸ್ಥಾನಮಾನ ನನಗೆ ನೀಡಲಿ

ಕರ್ನಾಟಕದ ವಿಪಕ್ಷದವರು ಸಿಎಂ ಮನೆಯಲ್ಲಿದ್ದಾರೆ. ವಿಪಕ್ಷದ ಸ್ಥಾನದಲ್ಲಿ ನಾನೇ ಇದ್ದೇನೆ. ವಿರೋಧ ಪಕ್ಷದ ನಾಯಕರ ಸ್ಥಾನಮಾನ, ಸೌಲಭ್ಯ ನನಗೆ ನೀಡಲಿ ಎಂದು ಇದೇ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಪಕ್ಷ ನಾಯಕರು ಕಾವೇರಿಯಲ್ಲಿ ಯಡಿಯೂರಪ್ಪನ ಜತೆ ಇದ್ದಾರೆ. ಕಾವೇರಿ ಬಿಡಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆ. ಯಡಿಯೂರಪ್ಪ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ಆಗಿದೆ ಎಂದು ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.