ETV Bharat / city

ಉಚಿತವಾಗಿ ಮಾಂಸ ಹೋಂ ಡೆಲಿವರಿ ನೀಡಿದ ಬಜರಂಗದಳ - ಭಜರಂಗದಳ ಕಾರ್ಯಕರ್ತರು ಫ್ರೀ ಹೋಂ ಡೆಲಿವರಿ

ಹೊಸ ತೊಡಕು ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಮಾಂಸಕ್ಕಾಗಿ ಹೆಸರು ನೋಂದಾಯಿಸಿದ ಗ್ರಾಹಕರಿಗೆ ಬೆಂಗಳೂರಿನಲ್ಲಿ ಭಜರಂಗದಳದವರು ಉಚಿತವಾಗಿ ಹೋಂ ಡೆಲಿವರಿ ಮಾಡಿದ್ದಾರೆ.

meat-free-home-delivery-by-bajarangadala
ಮಾಂಸ ಉಚಿತವಾಗಿ ಹೋಂ ಡೆಲಿವರಿ ನೀಡಿದ ಬಜರಂಗದಳ
author img

By

Published : Apr 3, 2022, 1:10 PM IST

ಬೆಂಗಳೂರು: ಸದ್ಯ ರಾಜ್ಯಾದ್ಯಂತ ಹಲಾಲ್​ ಕಟ್​-ಜಟ್ಕಾ ಕಟ್​ ವಿವಾದ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ತೊಡಕು ಆಚರಣೆಗೆ ಭಜರಂಗದಳದಿಂದ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಹೆಸರು ನೋಂದಾಯಿಸಿದ ಗ್ರಾಹಕರಿಗೆ ಮಾಂಸವನ್ನು ಉಚಿತವಾಗಿ ಹೋಂ ಡೆಲಿವರಿ ಮಾಡಲಾಯಿತು.

ಭಜರಂಗದಳ ಮುಖಂಡ ತೇಜಸ್ ಗೌಡ ಉಚಿತ ಹೋಂ ಡೆಲಿವರಿ ನೀಡುವ ಮೂಲಕ ವಿನೂತನವಾಗಿ ಹೊಸತೊಡಕು ಆಚರಣೆ ಮಾಡಿದರು. 20 ಕುರಿ ಹಾಗೂ 20 ಮೇಕೆ ಮಾಂಸ ಉಚಿತ ಹೋಂ ಡೆಲಿವರಿ ಮಾಡಲಾಯಿತು. ಸಿದ್ದಾಪುರ, ಗುಟ್ಟೆಪಾಳ್ಯ ಸೋಮೇಶ್ವರ ನಗರ, ಕೋರಮಂಗಲ, ಆಡುಗೋಡಿ ಜೆಪಿನಗರ, ಬಿಟಿಎಂ ಅಶೋಕ ಪಿಲ್ಲರ್ ವ್ಯಾಪ್ತಿಯಲ್ಲಿ ಭಜರಂಗದಳ ಕಾರ್ಯಕರ್ತರು ಫ್ರೀ ಹೋಂ ಡೆಲಿವರಿ ಮಾಡಿದರು.

ಸುಮಾರು 2 ಕೆ.ಜಿ.ಯಷ್ಟಿರುವ ಒಂದು ಗುಡ್ಡೆ ಮಾಂಸವನ್ನು, 50 ಕಾರ್ಯಕರ್ತರು, 25 ಫೀಲ್ಡ್, ಆಫ್ ಫೀಲ್ಡ್​ನಲ್ಲಿ 25 ಜನರು ನಿನ್ನೆ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 7 ಗಂಟೆಯವರೆಗೆ ಉಚಿತ ಡೆಲಿವರಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.