ETV Bharat / city

ಮ್ಯಾಟ್ರಿಮೋನಿಯಲ್​ ಸೈಟಿನಲ್ಲಿ ಪರಿಚಯ, ಆಗಾಗ ಭೇಟಿ.. ಆಮೇಲೆ ಬ್ಲ್ಯಾಕ್ ಮೇಲ್

ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸಿ‌ ಫೋಟೋ ಕ್ಲಿಕ್ಕಿಸಿಕೊಂಡು ಬಳಿಕ ಯುವತಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಂಚಕನನ್ನು ಬಂಧಿಸಲಾಗಿದೆ.

ಮ್ಯಾಟ್ರಿಮೋನಿಯಲ್​ ಸೈಟಿನಲ್ಲಿ ಪರಿಚಯ
ಮ್ಯಾಟ್ರಿಮೋನಿಯಲ್​ ಸೈಟಿನಲ್ಲಿ ಪರಿಚಯ
author img

By

Published : Jan 20, 2022, 8:42 AM IST

ಬೆಂಗಳೂರು: ಕನ್ನಡ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಯುವತಿಗೆ ಮದುವೆಯಾಗುವುದಾಗಿ ಭರವಸೆ ನೀಡಿ, ಆಕೆಯೊಂದಿಗೆ ತೆಗೆಸಿಕೊಂಡಿದ್ದ ಸಲುಗೆಯ ಪೋಟೊಗಳನ್ನೇ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ನಗರ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ನಿವಾಸಿ ವಿಜಯ್ ಕುಮಾರ್ ಬಂಧಿತ ಆರೋಪಿ. ಕೆಲ‌ ತಿಂಗಳ ಹಿಂದೆ ಯುವತಿಯು ಕನ್ನಡ ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಳು. ವಂಚಿಸುವ ಉದ್ದೇಶದಿಂದ ಬಂಧಿತ ಆರೋಪಿ ಕೂಡ ನೋಂದಾಯಿಸಿದ್ದ. ಮ್ಯಾಟ್ರಿಮೋನಿ‌‌ ಮೂಲಕ ಇಬ್ಬರ ಪರಿಚಯವಾಗಿದೆ.‌ ಪರಿಚಯ ಸ್ನೇಹಕ್ಕೆ ತಿರುಗಿದೆ.‌

ಇದೇ ಸಲುಗೆಯಿಂದ ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಕೆಲ ದಿನಗಳ ಬಳಿಕ ಮದುವೆಯಾಗುವ ಒಪ್ಪಂದಕ್ಕೆ‌ ಬಂದಿದ್ದರು. ಈ ವೇಳೆ, ಯುವತಿಯೊಂದಿಗೆ ತನ್ನ ಮೊಬೈಲ್​​ನಲ್ಲಿ ಈತ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಬಳಿಕ‌ ಇದೇ ಫೋಟೊಗಳನ್ನು ಇಟ್ಟುಕೊಂಡು ಯುವತಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ‌.‌

ಇದಕ್ಕೆ ಸೊಪ್ಪು ಹಾಕದಿದ್ದರಿಂದ ಯುವತಿಯ ಹೆಸರಿನಲ್ಲಿ ಇನ್​ಸ್ಟಾಗ್ರಾಮ್ ಖಾತೆ ತೆರೆದು ಫೋಟೊಗಳನ್ನು ಅಪ್ಲೋಡ್​ ಮಾಡಿದ್ದ.‌ ಇದರಿಂದ ಆತಂಕಗೊಂಡ ಯುವತಿಯು ಆರೋಪಿಗೆ 50 ಸಾವಿರ‌ ರೂಪಾಯಿ ನೀಡಿ, ನಕಲಿ ಖಾತೆ ಡಿಲೀಟ್ ಮಾಡುವಂತೆ ಹೇಳಿದರೂ ಮತ್ತೆ ಹೆಚ್ಚು ಹಣ ನೀಡುವಂತೆ ಬೆದರಿಸುತ್ತಿದ್ದ.

ಹಣ ನೀಡದಿದ್ದರೆ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರ ಪ್ರೊಫೈಲ್​​ಗಳಿಗೆ ಫೋಟೋ ಟ್ಯಾಗ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ಆರೋಪಿಯನ್ನು ವಿದ್ಯಾರಣ್ಯಪುರದಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

(ಇದನ್ನೂ ಓದಿ: ಕಾಂಗ್ರೆಸ್​ 'ಪೋಸ್ಟರ್​​ ಗರ್ಲ್'​​ ಪ್ರಿಯಾಂಕಾಗೆ ಟಿಕೆಟ್​ ನಿರಾಕರಣೆ.. ಬಿಜೆಪಿ ಸೇರ್ಪಡೆ ಬಹುತೇಕ ಖಚಿತ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.